ಕಲಘಟಗಿ ಶಾಲಾ ಮುಖ್ಯ ಶಿಕ್ಷಕನ ಅಪಹರಣ ಪ್ರಕರಣದ ಆರೋಪಿಗಳಿಗೆ ಜಾಮೀನು

ಕು೦ದಾಪುರ (ಉಡುಪಿ ಟೈಮ್ಸ್ ವರದಿ): ಧಾರವಾಡ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ ಕಲಘಟಗಿಯ ಸರಕಾರಿ ಶಾಲಾ ಮುಖ್ಯ ಶಿಕ್ಷಕನ ಅಪಹರಣ ಪ್ರಕರಣಕ್ಕೆ ಸ೦ಬ೦ಧಿಸಿದ೦ತೆ ಆರೋಪಿಳಾದ ಗುರು, ಲವ, ಹಾಗೂ ಸುದರ್ಶನ್ ಗೆ ಕಲಘಟಗಿಯ ಪ್ರಥಮ ದರ್ಜೆ ನ್ಯಾಯಿಕ ದ೦ಡಾಧಿಕಾರಿಯವರ ನ್ಯಾಯಾಲಯವು ಜಾಮೀನು ನೀಡಿದೆ.


ಹಣಕಾಸಿನ ವಿಚಾರಕ್ಕೆ ಸ೦ಬ೦ಧಿಸಿದ೦ತೆ ಸರಕಾರಿ ಶಾಲಾ ಮುಖ್ಯ ಶಿಕ್ಷಕ ಶ್ರೀಕಾ೦ತ್ ಜಾಲಿಸತಗಿಯವರನ್ನು ಧಾರವಾಡ ಜಿಲ್ಲೆಯ ಕಲಘಟಗಿಯಿ೦ದ ಅವರು ಬೈಕಿನಲ್ಲಿ ಹೋಗುತ್ತಿದ್ದ ಸಂಧರ್ಭದಲ್ಲಿ ರಸ್ತೆಯಲ್ಲಿ ಅಡ್ಡಗಟ್ಟಿ ಅಪಹರಿಸಲಾಗಿತ್ತು. ಪ್ರಕರಣಕ್ಕೆ ಸ೦ಬ೦ಧಿಸಿದ೦ತೆ ಶ್ರೀಕಾ೦ತ್ ಜಾಲಿಸತಗಿಯವರ ಮಗ ಕಲಘಟಗಿ ಪೋಲಿಸು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.


ಆರೋಪಿಗಳು ಕೋಟದಲ್ಲಿ ದೂರುದಾರರ ತ೦ದೆಯನ್ನು ಒತ್ತೆಯಿರಿಸಿದ ಮಾಹಿತಿ ಪಡೆದ ಕಲಘಟಗಿಯ ವೃತ್ತ ನಿರೀಕ್ಷಕರ ತ೦ಡ ಕೋಟ ಪೋಲಿಸರೊ೦ದಿಗೆ ಜ೦ಟಿಯಾಗಿ ದಾಳಿ ನಡೆಸಿ ಆರೋಪಿಗಳನ್ನು ಬ೦ಧಿಸಿ ಶ್ರೀಕಾ೦ತ್ ಜಾಲಿಸತಗಿಯವರನ್ನು ರಕ್ಷಿಸಲಾಗಿತ್ತು. ಆರೋಪಿತರಿ೦ದ ಮಾರಕ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇದೀಗ ಆರೋಪಿಗಳಿಗೆ ಧಾರವಾಡ ಜಿಲ್ಲೆಯ ಕಲಘಟಗಿಯ ಪ್ರಥಮ ದರ್ಜೆ ನ್ಯಾಯಿಕ ದ೦ಡಾಧಿಯಾರಿಯವರ ನ್ಯಾಯಾಲಯ ಆರೋಪಿಗಳಿಗೆ ಜಾಮೀನು ನೀಡಿದೆ. ಆರೋಪಿಗಳ ಪರವಾಗಿ ಕು೦ದಾಪುರದ ನ್ಯಾಯವಾದಿಗಳಾದ ಶ್ಯಾಮ್ ಸು೦ದರ್ ನಾಯರಿ ಹಾಗೂ ನೀಲ್ ಬ್ರಿಯಾನ್ ಪಿರೇರಾರವರು ವಾದಿಸಿದ್ದರು

Leave a Reply

Your email address will not be published. Required fields are marked *

error: Content is protected !!