ಶಿರ್ವ: ಮಾದಕ ವಸ್ತು ಸೇವನೆ ಪ್ರಕರಣ ಇಬ್ಬರು ವ್ಯಕ್ತಿಗಳು ಪೋಲೀಸರ ವಶಕ್ಕೆ
ಶಿರ್ವ ಮೇ 25 (ಉಡುಪಿ ಟೈಮ್ಸ್ ವರದಿ) : ಮಾದಕ ವಸ್ತು ಸೇವನೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ವ್ಯಕ್ತಿಗಳನ್ನು ಶಿರ್ವ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮಲ್ಲಾರುವಿನ ಅಕ್ಬರ(33), ಬೆಳಪುವಿನ ಕಲಂದರ್(35) ಪೊಲೀಸರು ವಶಕ್ಕೆ ಪಡೆದವರು.
ಶಿರ್ವ ಪೊಲೀಸ್ ಠಾಣೆ ಪಿಎಸ್.ಐ ರಾಘವೇಂದ್ರ ಸಿ. ಅವರು ಕಾಪು ತಾಲೂಕಿನ ಶಿರ್ವಾ ಗ್ರಾಮದ ಮಸೀದಿಯ ಬಳಿಯ ಬಸ್ಸು ನಿಲ್ದಾಣದ ಬಳಿ ಕರ್ತವ್ಯದಲ್ಲಿದ್ದ ಸಮಯದಲ್ಲಿ ಬಸ್ ನಿಲ್ದಾಣದ ಬಳಿ ಅಕ್ಬರ ಮತ್ತು ಕಲಂದರ್ ಸಿಗರೇಟ್ ನಲ್ಲಿ ಮಾದಕವಸ್ತು ಸೇರಿಸಿ ಸೇದುತ್ತಿರುವುದು ಕಂಡು ಬಂದು ಇಬ್ಬರನ್ನು ವಶಕ್ಕೆ ಪಡೆದು ಪರೀಕ್ಷೆ ಒಳಪಡಿಸಿದ್ದಾರೆ. ವೈದ್ಯಕೀಯ ವರದಿಯಲ್ಲಿ ಇಬ್ಬರೂ ಗಾಂಜಾ ಸೇವಿಸಿರುವುದು ದೃಢಪಟ್ಟಿದ್ದು ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.