ಕುಂದಾಪುರ:ಎನ್.ಜಿ.ಓ ಸಂಸ್ಥೆಯಲ್ಲಿ ದಾಖಲಾದ ಮಹಿಳೆ ನಾಪತ್ತೆ
ಕುಂದಾಪುರ ಮೇ 25 (ಉಡುಪಿ ಟೈಮ್ಸ್ ವರದಿ) : ಇಲ್ಲಿನ ನಮ್ಮ ಭೂಮಿ ಹೆಸರಿನ ಎನ್.ಜಿ.ಓ ಸಂಸ್ಥೆಯಲ್ಲಿ ದಾಖಲಿಸಲಾದ ಯಶೋಧ ಎಂಬವರು ಮೇ 23 ರ ರಾತ್ರಿಯಿಂದ ನಾಪತ್ತೆಯಾಗಿದ್ದಾರೆ.
ಮೇ 25 ರಂದು ಕುಂದಾಪುರ ಪೊಲೀಸ್ ಠಾಣೆಯ ಸಿಬ್ಬಂದಿಯವರು ಮಾನಸಿಕ ಅಸ್ವಸ್ಥರಂತೆ ಕಂಡುಬಂದ ಯಶೋಧ ಎಂಬ ಮಹಿಳೆಯನ್ನು ತಾತ್ಕಾಲಿಕ ನೆಲೆಯಲ್ಲಿ ನಮ್ಮಭೂಮಿ ಹೆಸರಿನ ಎನ್.ಜಿ.ಒ ದಲ್ಲಿ ಬಿಟ್ಟು ಹೋಗಿದ್ದರು. ಆದರೆ ನಿನ್ನೆ ಬೆಳಿಗ್ಗೆ ಸಂಸ್ಥೆಯ ಸೆಕ್ಯೂರಿಟಿ ರವರು ಯಶೋಧರವರು ಇದ್ದ ರೂಮಿಗೆ ಹೋಗಿ ನೋಡಿದಾಗ ಯಶೋಧರವರು ರೂಮಿನಲ್ಲಿ ಇಲ್ಲದೇ ಇರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಎನ್‍ಜಿಒ ದ ವಾರ್ಡನ್ ಸವೀತಾ ದೇವಾಡಿಗ ರವರು ಹಾಗೂ ಸಿಬ್ಬಂದಿಯವರು ಎಲ್ಲ ಕಡೆ ಹುಡುಕಾಡಿದರೂ ಯಶೋಧರವರು ಎಲ್ಲೂ ಪತ್ತೆ ಯಾಗಿರುವುದಿಲ್ಲ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.