ಎರಡು ಪ್ರತ್ಯೇಕ ಮಟ್ಕಾ ಜುಗಾರಿ ಹಾಗೂ ಇಸ್ಪಿಟು ಜುಗಾರಿ ಪ್ರಕರಣಕ್ಕೆ ಸಂಬಂಧಿಸಿ 6 ಮಂದಿ ಆರೋಪಿ ಸೆರೆ

ಕುಂದಾಪುರ ಮೇ 25 (ಉಡುಪಿ ಟೈಮ್ಸ್ ವರದಿ) : ಮಲ್ಪೆ ಹಾಗೂ ಕುಂದಾಪುರದಲ್ಲಿ ನಡೆದ ಎರಡು ಪ್ರತ್ಯೇಕ ಮಟ್ಕಾ ಜುಗಾರಿ ಹಾಗೂ ಇಸ್ಪಿಟು ಜುಗಾರಿ ಪ್ರಕರಣಕ್ಕೆ ಸಂಬಂಧಿಸಿ 6 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕುಂದಾಪುರ ತಾಲೂಕು ಹಟ್ಟಿಯಂಗಡಿ ಗ್ರಾಮದ ಹಟ್ಟಿಯಂಗಡಿ ಜಂಕ್ಷನ್ ಬಳಿಯ ಆಟೋರಿಕ್ಷಾ ನಿಲ್ದಾಣದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟವಾಡುತ್ತಿದ್ದ ಪ್ರವೀಣ ಮೊಗವೀರ (31) ಎಂಬಾತನನ್ನು ಕುಂದಾಪುರ ಪೊಲೀಸರು ವಶಕ್ಕೆ ಪಡೆಕೊಂಡಿದ್ದಾರೆ ಹಾಗೂ ಆರೋಪಿತನಿಂದ 945 ರೂ. ನಗದು ಮತ್ತು ಮಟ್ಕಾ ಜುಗಾರಿ ಆಟಕ್ಕೆ ಬಳಸುವ ಇತರ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿನ್ನೆ ಸಂಜೆ ವೇಳೆ ಮಲ್ಪೆಯ ಕೊಡವೂರು ಗ್ರಾಮದ ಬಾಪುತೋಟ – ಪಡುಕೆರೆ ಸೇತುವೆಯ ಕೆಳಭಾಗದಲ್ಲಿ ಇಸ್ಪಿಟ್ ಜುಗಾರಿ ಆಡುತ್ತಿದ್ದ ಹನುಮೇಶ್ ಸಿರಿವಾರ್ , ಅನಂದ್ , ಹನುಮಂತ, ಷಷ್ಣ್ಮಖ ನಾಯ್ಕ್, ದ್ಯಾಮಣ್ಣ ಎಂಬ ಐದು ಮಂದಿಯನ್ನು ಮಲ್ಪೆ ಪೊಲೀಸರು ವಶಕ್ಕೆ ಪಡೆದು ಅವರ ಬಳಿ ಇದ್ದ  6320 ರೂ ನಗದು ಹಾಗೂ ಇಸ್ಪಿಟ್ ಜುಗಾರಿ ಆಟಕ್ಕೆ ಬಳಸುವ ಇತರ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Leave a Reply

Your email address will not be published. Required fields are marked *

error: Content is protected !!