ಮದುವೆಗೆ ಅಡ್ಡಿಯಾದ ಪ್ರಿಯತಮೆಯ ಮಗುವನ್ನೇ ಅನಾಥವೆಂದು ಬಿಂಬಿಸಿದ ಕಿರಾತಕ…!

ಮೈಸೂರು ಮೇ 24: ಮದುವೆಗೆ ಅಡ್ಡಿಯಾದ ಪ್ರಿಯತಮೆಯ ಮಗುವನ್ನೇ ಅನಾಥವೆಂದು ಬಿಂಬಿಸಿ ಪೊಲೀಸರಿಗೆ ಒಪ್ಪಿಸಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಕಳೆದ 15 ದಿನಗಳ ಹಿಂದೆ ರಾಯಚೂರು ಬಸ್‌ ನಿಲ್ದಾಣದಲ್ಲಿ ಅಪರಿಚಿತ ಮಹಿಳೆಯೊಬ್ಬರು ತನ್ನ ಕೈಗೆ ಗಂಡು ಮಗು ಕೊಟ್ಟು ಪರಾರಿ ಆಗಿದ್ದಾರೆ ಎಂದು ಎಚ್. ಕೋಟೆಯ ಯುವಕ ರಘು ಕಥೆಕಟ್ಟಿ, ಆ ಮಗುವನ್ನು ಮೈಸೂರಿನ ಲಷ್ಕರ್‌ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದ. ಇದೀಗ ಈ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಪ್ರೀತಿಗೆ ಮಗು ಅಡ್ಡಿಯಾಗಿದ್ದಕ್ಕೆ ಅನಾಥ ಮಗು ಎಂದು ಬಿಂಬಿಸಿರುವುದು ಬೆಳಕಿಗೆ ಬಂದಿದೆ.

ಘಟನೆಗೆ ಸಂಬಂಧಿಸಿ ಇಬ್ಬರನ್ನು ಲಷ್ಕರ್‌ ಠಾಣೆ ಪೊಲೀಸರು ಬಂಧಿಸಿದ್ದು, ಮಗುವನ್ನು ಪುನರ್ವಸತಿ ಕೇಂದ್ರದಲ್ಲಿ ಇರಿಸಲಾಗಿದೆ.ತನಿಖೆ ಕೈಗೊಂಡಾಗ ಪೊಲೀಸರಿಗೆ ಮಗುವಿನ ತಾಯಿಗೆ ರಘು ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿದ್ದು ಕಳೆದ ಒಂದೂವರೆ ವರ್ಷದಿಂದ ಆತನಿಗೆ ರಾಯಚೂರಿನ ಮಹಿಳೆಯೊಂದಿಗೆ ಒಡನಾಟ ಇತ್ತು. ಇದು ಮಹಿಳೆಯ ಗಂಡನಿಗೂ ಕೂಡ ಗೊತ್ತಾಗಿತ್ತು. ಅವರ ಪ್ರೀತಿಗೆ ಅಡ್ಡಿಯಾಗುವ ಈ ಮಗುವನ್ನು ದೂರ ಮಾಡುವ ಯೋಜನೆ ಮಾಡಿದ ರಘು, ಈ ಕಥೆಯನ್ನು ಸೃಷ್ಟಿಸಿದ್ದ. ಈತನ ನಡೆಯಿಂದ ಅನುಮಾನಗೊಂಡ ಪೊಲೀಸರು, ಮಗುವಿನ ತಂದೆಯನ್ನು ಪತ್ತೆ ಮಾಡಿ ವಿಚಾರಿಸಿದಾಗ ಇವರಿಬ್ಬರ ಸಂಬಂಧ, ನಾಟಕ ಬಯಲಾಗಿದೆ.

Leave a Reply

Your email address will not be published. Required fields are marked *

error: Content is protected !!