ಮಣಿಪಾಲ: ಇಎಸ್‌ಐ ಫಲಾನುಭವಿಗಳಿಗೆ ಚಿಕಿತ್ಸೆ ಸ್ಥಗಿತ ವಿರೋಧಿಸಿ ಡಿ.8 ರಂದು ಪ್ರತಿಭಟನೆ
ಉಡುಪಿ(ಉಡುಪಿ ಟೈಮ್ಸ್ ವರದಿ):ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಇಎಸ್‌ಐ ಕೊಡುಗೆ ದಾರರಿಗೆ ಮತ್ತು ಅದರ ಫಲಾನುಭವಿಗಳಿಗೆ ನೀಡುವ ವೈದ್ಯಕೀಯ ಚಿಕಿತ್ಸೆಯನ್ನು ನವೆಂಬರ್ 1 ರಿಂದ ಸ್ಥಗಿತಗೊಳಿಸಿರುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಡಿಸೆಂಬರ್ 8 ರಂದು ಬೆಳಿಗ್ಗೆ 8.30 ಕ್ಕೆ ಜಿಲ್ಲಾಧಿಕಾರಿ ಕಚೇರಿ ಮುಂಬಾದ ಪ್ರತಿಭಟನೆ ನಡೆಸಲು ಮಾಸ್ ಇಂಡಿಯಾ ಎನ್‌ಜಿಓ ಕರ್ನಾಟಕ ಘಟಕ ನಿರ್ಧರಿಸಿದೆ. ಈ ದಿನ ಘಟಕದ ರಾಷ್ಟ್ರೀಯ ಉಪಾಧ್ಯಕ್ಷರು ಉಪವಾಸ ಸತ್ಯಾಗ್ರವನ್ನು ಕೈಗೊಳ್ಳುತ್ತಿದ್ದಾರೆ.
ಈ ಬಗ್ಗೆ ಇಂದು ಮಾಹಿತಿ ನೀಡಿರುವ ಘಟಕವು ಇಎಸ್‌ಐಸಿ ಪ್ರಾಧಿಕಾರವು ಮಣಿಪಾಲದ ಕೆಎಂಸಿ ಆಸ್ಪತ್ರೆಯ ಬಾಕಿ ಹಣವನ್ನು ಕಳೆದ ಹಲವಾರು ತಿಂಗಳುಗಳಿಂದ ಇತ್ಯರ್ಥ ಪಡಿಸಿಲ್ಲ ಎಂಬ ಕಾರಣಕ್ಕೆ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಸ್ಥಗಿತಗೊಳಿಸಿರುವ ಇಎಸ್ ಐಕೊಡುಗೆ ದಾರರಿಗೆ ಮತ್ತು ಅದರ ಫಲಾನುಭವಿಗಳಿಗೆ ನೀಡುವ ವೈದ್ಯಕೀಯ ಚಿಕಿತ್ಸೆಯನ್ನು ನವೆಂಬರ್ 1 ರಿಂದ ಸ್ಥಗಿತಗೊಳಿಸಿದೆ.
ಈ ಬಗ್ಗೆ ಈ ಬಗ್ಗೆ ಘಟಕದ ವತಿಯಿಂದ ಪ್ರಧಾನ ಮಂತ್ರಿ, ರಾಜ್ಯ ಆರೋಗ್ಯ ಮಂತ್ರಿ, ಭಾರತದ ಕಾರ್ಮಿಕ ಸಚಿವ, ಇಎಸ್‌ಐಸಿ ದೆಹಲಿ ನಿರ್ದೇಶಕ, ಇಎಸ್‌ಐಸಿ ಬೆಂಗಳೂರಿನ ಪ್ರಾದೇಶಿಕ ನಿರ್ದೇಶಕ, ಇಎಸ್‌ಐಎಸ್( ವೈದ್ಯಕೀಯ ಸೇವೆಗಳ ಕರ್ನಾಟಕ ನಿರ್ದೇಶಕ ) ಉಡಪಿಯ ಸಂಸದರು ಮತ್ತು ಜಲ್ಲಾಧಿಕಾರಿಗಳಿಗೆ ಪತ್ರವನ್ನು ಬರೆಯಲಾಗಿದೆ.
ಆದರೆ ಸರಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ, ಕೆಎಂಸಿ ಮಣಿಪಾಲಕ್ಕೆ ಕೂಡಲೆ ಇಎಸ್‌ಐ ಚಿಕಿತ್ಸೆಯನ್ನು ಫಲಾನುಭವಿಗಳಿಗೆ ಕೊಡುವಂತೆ ಇಎಸ್‌ಐ ಕಾರ್ಪೊರೇಶನ್ ಕರಾರು ಪತ್ರವನ್ನು 10 ದಿನಗಳ ಒಳಗೆ ಮಾಡತಕ್ಕದ್ದು,
ಸರಕಾರಗಳು ಈ ಬಗ್ಗೆ ಸರಿಯಾದ ಕಾನೂನು ತಂದು ಆಸ್ಪತ್ರೆಯಲ್ಲಿ ಸರಿಯದ ರೀತಿಯಲ್ಲಿ ಸೇವೆಗಳು ಸಿಗುವಂತೆ ಮಾಡಬೇಕು, ಪ್ರತಿಯೊಂದು ಇಎಸ್‌ಐ ಚಿಕಿತ್ಸಾಲಯದಲ್ಲಿ ಆಧುನಿಕ ವೈದ್ಯಕೀಯ ತಪಣಾ ವ್ಯವಸ್ಥೆಯನ್ನು ಸ್ಥಾಪಿಸಿ ಉತ್ತಮ ಗುಣಮಟ್ಟದ ಔಷಧಗಳು ಸಿಗುವಂತೆ ಮಾಡಬೇಕು, ಉಡುಪಿಗೊಂದು ಇಎಸ್‌ಐ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯನ್ನು ತ್ವರಿತವಾಗಿ ನಿರ್ಮಾಣ ಮಾಡುವಲ್ಲಿ ಸರಕಾರ ಪ್ರಯತ್ನಿಸಬೇಕು, ಸ್ಥಗಿತಗೊಳಿಸಿರುವ ಸೂಪರ್ ಸ್ಪೆಷಾಲಿಟಿ ಸ್ಕೀಮ್‌ನ್ನು ಕೂಡಲೇ ಪ್ರತಿಯೊಬ್ಬ ಕಾರ್ಮಿಕನಿಗೂ ಸಿಗುವಂತೆ ಮಾಡಬೇಕು ಹಾಗೂ 2 ವರ್ಷದ ಸೂಪರ್ ಸ್ಪೆಷಾಲಿಟಿಯನ್ನು ರದ್ದುಗೊಳಿಸಬೇಕು ಹೀಗೆ ವಿವಿಧ ಬೇಡಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸುವುದಾಗಿ ತಿಳಿಸಿದೆ. ಅಲ್ಲದೆ ಈ ಎಲ್ಲಾ ಬೇಡಿಕೆಗಳು ಈಡೇರದಿದ್ದರೆ ಬೃಹತ್ ಮುಷ್ಕರವನ್ನು ನಡೆಸುವುದಾಗಿಯೂ ಘಟಕ ಹೇಳಿದೆ.