ಬ್ರಹ್ಮಶ್ರೀ ನಾರಾಯಣ ಗುರುಗಳ ವಿಚಾರಧಾರೆ ಶಾಲಾ ಪಠ್ಯ ಪುಸ್ತಕ ದಿಂದ ತೆಗೆಯುವ ಸರಕಾರದ ನಿರ್ಧಾರ ಖಂಡನೀಯ : ಸಭಾಪತಿ
ಉಡುಪಿ(ಉಡುಪಿ ಟೈಮ್ಸ್ ವರದಿ): ಬ್ರಹ್ಮಶ್ರೀ ನಾರಾಯಣ ಗುರುಗಳ ವಿಚಾರ ಧಾರೆಗಳನ್ನು ಶಾಲಾ ಪಠ್ಯ ಪುಸ್ತಕಗಳಿಂದ ತೆಗೆದು ಹಾಕಿರೋದನ್ನು ಸರ್ವತ್ರ ಖಂಡಿಸ ಬೇಕಾಗಿದೆಯೆಂದು ಮಾಜಿ ಶಾಸಕ ಯು. ಆರ್. ಸಭಾಪತಿ ಹೇಳಿದ್ದಾರೆ.
ಬ್ರಹ್ಮಶ್ರೀ ನಾರಾಯಣ ಗುರುಗಳು ದೇಶದ ಉದ್ದಗಲಕ್ಕೂ ಸಂಚರಿಸಿ ಹಿಂದುಳಿದ, ಶೋಷಿತವರ್ಗದ ಜನರನ್ನು ಒಂದುಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ಅವರು ಕೇವಲ ಬಿಲ್ಲವ ಸಮಾಜಕ್ಕೆ ಮಾತ್ರ ಸೀಮಿತವಾಗಿರದೆ ಸರ್ವ ಶೋಷಿತ ವರ್ಗಗಳ ಆಶಾಕಿರಣ ವಾಗಿದ್ದರು. ಹಿಂದಿನ ಕಾಂಗ್ರೆಸ್ ಪಕ್ಷದ ಕೇಂದ್ರ ಸರಕಾರ ಬ್ರಹ್ಮಶ್ರೀ ನಾರಾಯಣ ಗುರುಗಳ ನೆನಪಿಗಾಗಿ ಅಂಚೆ ಚೀಟಿಯನ್ನು ಯನ್ನು ಬಿಡುಗಡೆ ಮಾಡಿರೋದನ್ನು ಸಭಾಪತಿ ನೆನಪಿಸಿದ್ದಾರೆ.
ಹೀಗಿರುವಾಗ ರಾಜ್ಯದ ಬಿಜೆಪಿ ಸರಕಾರ ಶಾಲಾ ಪಠ್ಯಪುಸ್ತಕದಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ವಿಚಾರಧಾರೆಗಳನ್ನು ತೆಗೆದು ಹಾಕುವ ಕೆಲಸ ಮಾಡಿದಲ್ಲಿ ಮುಂದೆ ಕಾಂಗ್ರೆಸ್ ಪಕ್ಷ ಉಗ್ರ ಹೋರಾಟ ಮಾಡಬೇಕಾಗಬಹುದೆಂದ ಸಭಾಪತಿ ಎಚ್ಚರಿಸಿದ್ದಾರೆ.