ಉಡುಪಿ :ಮನೆ ನಿರ್ಮಾಣದ ಗುತ್ತಿಗೆ ನೀಡಿ ಕಂಟ್ರಾಕ್ಟರ್ ಗೆ ವಂಚನೆ, ದೂರು ದಾಖಲು
ಉಡುಪಿ(ಉಡುಪಿ ಟೈಮ್ಸ್ ವರದಿ): ಮನೆಯನ್ನು ನಿರ್ಮಿಸುವ ಗುತ್ತಿಗೆಯನ್ನು ಪಡೆದ ಪಿಡಬ್ಲ್ಯೂ ಡಿ ಕಂಟ್ರಾಕ್ಟರ್ ರಾಘವೇಂದ್ರ ಕರ್ಕೆರ ಅವರಿಗೆ 10 ಲಕ್ಷಕ್ಕೂ ಅಧಿಕ ರೂ. ವಂಚಿಸಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ರಾಘವೇಂದ್ರ ಕರ್ಕೇರ ಅವರು ತಮ್ಮ ದೂರದ ಸಂಬಂಧಿ ಯಾದ ಬ್ರಹ್ಮಾವರದ ಭಾಸ್ಕರ ಶ್ರೀಯಾನ್ ಹಾಗೂ ಕೃಷ್ಣಿ ಶ್ರೀಯಾನ್ ಎಂಬವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ ಆರೋಪಿಗಳು ಐರೋಡಿ ಗ್ರಾಮದಲ್ಲಿ ಇರುವ ಕೃಷ್ಣಿ ಶ್ರೀಯಾನ್ ಅವರಿಗೆ ಸೇರಿದ ಜಾಗದಲ್ಲಿ ಮನೆಯನ್ನು ನಿರ್ಮಿಸುವ ಗುತ್ತಿಗೆಯನ್ನು ರಾಘವೇಂದ್ರ ಕರ್ಕೆರ ರವರಿಗೆ ವಹಿಸಿಕೊಟ್ಟಿದ್ದರು.
ಅದರಂತೆ ಮನೆ ನಿರ್ಮಾಣಕ್ಕೆ ಬೇಕಾದ ಅಂದಾಜು ಪಟ್ಟಿ ಹಾಗೂ ನಕ್ಷೆಯನ್ನು ತಯಾರಿಸಿ ಆರೋಪಿಗಳಿಗೆ ನೀಡಿರುತ್ತಾರೆ ಈ ಅಂದಾಜು ಪಟ್ಟಿಯಲ್ಲಿ ಒಟ್ಟು ಅಂದಾಜು ಮೊತ್ತ 38,53,765 ಆಗಿದ್ದು ಗುತ್ತಿಗೆಪಡೆದುಕೊಳ್ಳುವ ಪೂರ್ವದಲ್ಲೆ ಆರೋಪಿತರು ಸುಮಾರು 5,00,000 ರೂ. ಗಳಷ್ಟು ಮರಳನ್ನು ಶೇಖರಿಸಿ ಇಟ್ಟಿರುವುದರಿಂದ ಈ ಮೊತ್ತವನ್ನು ಅಂದಾಜು ಮೊತ್ತದಿಂದ ಕಡಿತಗೊಳಿಸಿ 33,00,000 ಕ್ಕೆ ಕಟ್ಟಡನಿರ್ಮಾಣ ಗುತ್ತಿಗೆಯನ್ನು ಮಾಡಲು ರಾಘವೇಂದ್ರ ಅವರು ಒಪ್ಪಿರುತ್ತಾರೆ. ಈವರೆಗೆ 17.70,000 ಮಾತ್ರವೇ ಪಾವತಿಮಾಡಿದ್ದು 10,03,000 ಹಣವನ್ನು ಬಾಕಿಯಿರಿಸಿಕೊಂಡಿರುತ್ತಾರೆ.
ಈ ನಡುವೆ ರಾಘವೇಂದ್ರ ಕರ್ಕೆರ ರವರು ತಾನೂ ಪೂರ್ಣಗೊಂಡ ಕಾಮಗಾರಿ ಪಟ್ಟಿಯನ್ನು ಅಂಚೆಯ ಮೂಲಕ ಆರೋಪಿತರಿಗೆ ಕಳುಹಿಸಿಕೊಟ್ಟಿರುತ್ತಾರೆ. ಈ ಕಟ್ಟಡದ ಉಳಿದ ಕಾಮಗಾರಿ ಕೆಲಸ ನಿರ್ವಹಿಸುವ ಸಲುವಾಗಿ ಈಗಾಗಲೇ 3,00,000 ವ್ಯಯಿಸಿ ಉಳಿದ ಕಟ್ಟಡ ನಿರ್ಮಾಣ ಕಾಮಗಾರಿ ಸಾಮಗ್ರಿಗಳನ್ನು ಸ್ಥಳದಲ್ಲಿ ದಾಸ್ತಾನಗೊಳಿಸಿದ್ದಾರೆ ಹಾಗೂ ಸ್ಲ್ಯಾಬ್ ಹಾಕಲು ಬೇಕಾದ ಉಪಕರಣಗಳನ್ನು ಸಹ ಸ್ಥಳದಲ್ಲಿಯೇ ಇಟ್ಟಿರುತ್ತಾರೆ.
ಈ ಹಿನ್ನೆಲೆಯಲ್ಲಿ ರಾಘವೇಂದ್ರ ಕರ್ಕೆರ ರವರು ಕೊಡ ಬೇಕಾದ ಉಳಿದ ಹಣವನ್ನು ಕೇಳಿದಾಗ ಆರೋಪಿತರು ಕೊಡಲು ನಿರಾಕರಿಸಿ ಬೇರೆ ವ್ಯಕ್ತಿಗಳಿಂದ ಬಾಕಿ ಉಳಿದ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಮಾಡಿಸುವುದಾಗಿ ಬೆದರಿಸಿರುತ್ತಾರೆ.
ಮಾತ್ರವಲ್ಲದೆ 2021ರ ಜು.28 ರಂದು ರಾಘವೇಂದ್ರ ಕರ್ಕೆರ ರವರು ಕಟ್ಟಡ ಕಾಮಗಾರಿ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ರಾಘವೇಂದ್ರ ಕರ್ಕೆರ ರವರು ಕಟ್ಟಡ ನಿರ್ಮಾಣ ಕ್ಕೆ ತಂದಿದ್ದ ಬಾಡಿಗೆ ಸಾಮಾನುಗಳು ಹಾಗೂ ಕಟ್ಟಡ ನಿರ್ಮಾಣದ ಬಗ್ಗೆ ಶೇಖರಿಸಿದ್ದ ಸಾಮಾನುಗಳು ನಾಪತ್ತೆಯಾಗಿರುವುದು ಕಂಡು ಬಂದಿದೆ. ಈ ಬಗ್ಗೆ ಆರೋಪಿತರಲ್ಲಿ ವಿಚಾರಿಸಿದಲ್ಲಿ ಹಾರಿಕೆಯ ಉತ್ತರ ನೀಡಿರುವುದಾಗಿದೆ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.