ಶಿಕ್ಷಕರು,ಪತ್ರಕರ್ತರು ಮತ್ತು ವಕೀಲರಿಗಾಗಿ ಪ್ರವಾದಿ ಮುಹಮ್ಮದ್ ಕುರಿತು ಪ್ರಬಂಧ ಸ್ಪರ್ಧೆ ಗಾಗಿ
ಉಡುಪಿ(ಉಡುಪಿ ಟೈಮ್ಸ್ ವರದಿ): ಶಿಕ್ಷಕರು, ಪತ್ರಕರ್ತರು ಮತ್ತು ವಕೀಲರಿಗಾಗಿ ‘ಮಾನವತೆಯ ಮಾರ್ಗದರ್ಶಕ ಪ್ರವಾದಿ ಮುಹಮ್ಮದ್ ‘ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಜಿಲ್ಲಾ ಘಟಕ ಮಾಹಿತಿ ನೀಡಿದೆ.
ಈ ಬಗ್ಗೆ ಮಾಹಿತಿ ನೀಡಿದ ಇದ್ರಿಸ್ ಹೂಡೆ ಅವರು, ಪ್ರವಾದಿ ಮುಹಮ್ಮದ್(ಸ)ರ ಜೀವನ ಮತ್ತು ಅವರ ಸಂದೇಶವು ಸಾರ್ವಕಾಲಿಕ ಮತ್ತು ಸಾರ್ವತ್ರಿಕವಾದುದು. ಆದ್ದರಿಂದಲೇ ಅವರ ಜೀವನ ಮತ್ತು ಸಾಧನೆಗಳು ಜಗತ್ತಿನಾದ್ಯಂತ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಈ ಮಹಾನ್ ವ್ಯಕ್ತಿತ್ವವನ್ನು ಪರಿಚಯಿಸುವುದು ಸಮಯದ ಬೇಡಿಕೆಯೂ ಆಗಿದೆ. ಈ ಕಾರಣಕ್ಕಾಗಿ ಜಮಾಅತೆ ಇಸ್ಲಾಮೀ ಹಿಂದ್’ನ ಕರ್ನಾಟಕ ರಾಜ್ಯ ಘಟಕವು ಮಾನವತೆಯ ಮಾರ್ಗದರ್ಶಕ ಪ್ರವಾದಿ ಮುಹಮ್ಮದ್(ಸ) ಅಭಿಯಾನವನ್ನು ಇತ್ತಿಚೆಗೆ ರಾಜ್ಯಾದ್ಯಂತ ನಡೆಸಿ ರಕ್ತದಾನ ಶಿಬಿರ , ಸ್ವಚ್ಚತಾ ಅಭಿಯಾನಗಳನ್ನು ನಡೆಸಲಾಗಿತ್ತು. ಇದರ ಅಂಗವಾಗಿ ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ವಲಯದ ವತಿಯಿಂದ ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಯ ವಕೀಲರು , ಪತ್ರಕರ್ತರು ಮತ್ತು ಶಿಕ್ಷಕರಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಿದೆ.
ತಾವು ಬರೆದ ಪ್ರಬಂಧವನ್ನು ಸ್ಪರ್ಧೆ ಗೆ ಕಳುಹಿಸಲು ಡಿಸೆಂಬರ್ 10 ಕೊನೆಯ ದಿನಾಂಕವಾಗಿದ್ದು, ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿಕೊಂಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9448300589ನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.