ಸಂತೋಷ್ ಸಾವಿನ ಬಗ್ಗೆ ಹೆಚ್ಚಿನ ತನಿಖೆ ನಡೆಸಿ ಕ್ರಮ: ಉಡುಪಿ ಎಸ್ಪಿ ವಿಷ್ಣುವರ್ಧನ್
ಉಡುಪಿ. ಎ.12(ಉಡುಪಿ ಟೈಮ್ಸ್ ವರದಿ ): ಗುತ್ತಿಗೆದಾರ ಸಂತೋಷ್ ಪಾಟಿಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನ ಎಫ್‍ಎಸ್‍ಎಲ್ ತಂಡದ ವರದಿ ಬಂದ ಬಳಿಕ ಸಾವಿನ ನಿಖರ ಕಾರಣ ತಿಳಿಯಲಿದೆ. ಬಳಿಕ ವಿಚಾರಣೆ ನಡೆಸಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ವಿಷ್ಣುವರ್ಧನ್ ಅವರು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅವರು, ಸಂತೋಷ್ ಪಾಟಿಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಲು ಮಂಗಳೂರಿನಿಂದ ಎಫ್‍ಎಸ್‍ಎಲ್ ತಂಡ ಬರುತ್ತಿದೆ. ಸಂಬಂಧಿಕರು ಬರುತ್ತೇನೆ ಎಂದು ಹೇಳಿದ್ದಾರೆ ಆದ್ದರಿಂದ ಸದ್ಯ ರೂಮ್ ಸೀಲ್ ಮಾಡಿದ್ದೇವೆ. ಸಂಬಂಧಿಕರು ಬಂದ ಬಳಿಕ ಮೃತದೇಹ ಪರೀಕ್ಷೆ ಕಳುಹಿಸಲಾಗುವುದು. ಮರಣೋತ್ತರ ಪರೀಕ್ಷೆ ಉಡುಪಿಯಲ್ಲಿ ಆಗುತ್ತದೆ. ಎಫ್ ಎಸ್ ಎಲ್ ವರದಿ ಬಂದ ಮೇಲೆ ಸಾವಿಗೆ ನಿಖರ ಕಾರಣ ತಿಳಿಯಲಿದೆ.
ಮೃತರ ಸಂಬಂಧಿಕರು ಬರುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ ಕೋಣೆಯನ್ನು ಸೀಲ್ ಮಾಡಲಾಗಿದೆ. ಫಾರೆನ್ಸಿಕ್, ಎಫ್‍ಎಸ್‍ಎಲ್ ತಂಡ ಬಂದ ಬಳಿಕ, ಮನೆಯವರ ಹಾಗೂ ಗೆಳೆಯರ ಹೇಳಿಕೆ ಪಡೆದು ಸಾವಿನ ಕುರಿತು ಸಂಪೂರ್ಣ ಮಾಹಿತಿ ಪಡೆದು ಕಾನೂನು ರೀತಿಯಲ್ಲಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.