ನನ್ನ ತಮ್ಮನ್ನ ಸಾವಿಗೆ ಕೆ ಎಸ್ ಈಶ್ವರಪ್ಪ ಕಾರಣ : ಸಹೋದರ ಪ್ರಶಾಂತ್ ಪಾಟೀಲ್ ಆರೋಪ
ಬೆಳಗಾವಿ ಎ.12 : ‘ಗುತ್ತಿಗೆದಾರನಾಗಿದ್ದ ನನ್ನ ತಮ್ಮ ಸಂತೋಷ್ ಪಾಟೀಲ್ ಸಾವಿಗೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರೇ ನೇರ ಕಾರಣ’ ಎಂದು ಪ್ರಶಾಂತ್ ಪಾಟೀಲ್ ಆರೋಪಿಸಿದ್ದಾರೆ.
ಇಂದು ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣೆಗೆ ಬಂದಿದ್ದ ಅವರು ಬಳಿಕ ಪತ್ರಕರ್ತರೊಂದಿಗೆ ಮಾತನಾಡಿ,ತಮ್ಮ ಸಂತೋಷ್ ಪಾಟೀಲ್ ಸಚಿವ ಈಶ್ವರಪ್ಪ ಜೊತೆ ಚೆನ್ನಾಗಿದ್ದರು. ಸಂತೋಷ್ ಪರಿಚಯವೇ ಇಲ್ಲ ಎಂದು ಈಶ್ವರಪ್ಪ ಸುಳ್ಳು ಹೇಳುತ್ತಿದ್ದಾರೆ’ ಎಂದು ಆರೋಪಿಸಿದರು. ಹಾಗೂ ಈಶ್ವರಪ್ಪ ಅವರನ್ನು ಬಂಧಿಸುವವರೆಗೂ ನಾವು ಅಂತ್ಯಕ್ರಿಯೆ ನಡೆಸುವುದಿಲ್ಲ’ ಎಂದು ತಿಳಿಸಿದರು.
ಇನ್ನು ಸಂತೋಷ್ ಪಾಟೀಲ್ ಹಿಂದಿನಿಂದಲೂ ಗುತ್ತಿಗೆ ಮಾಡುತ್ತಿದ್ದ. 4 ಕೋಟಿ ರೂ. ಮೊತ್ತದ ಕೆಲಸ ಮಾಡಿದ್ದೇನೆ. ಹಣ ಬಂದಿಲ್ಲ, ಬಹಳ ಕಷ್ಟವಾಗಿದೆ ಎಂದು ಹೇಳಿದ್ದ. ಅವರ ಸಾವಿಗೆ ನ್ಯಾಯ ದೊರಕಿಸಿಕೊಡಬೇಕು. ನಮ್ಮ ಸಮುದಾಯದವರೇ ಆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಶಾಸಕ ಬಿ.ಎಸ್. ಯಡಿಯೂರಪ್ಪ ಅವರು ನಮಗೆ ನ್ಯಾಯ ದೊರಕಿಸಿಕೊಡಬೇಕು’ ಎಂದು ಮನವಿ ಮಾಡಿಕೊಂಡಿದ್ದಾರೆ.