ಉಡುಪಿ ಪೊಲೀಸ್ ಹಾಗೂ ರೋಟರಿ ಕ್ಲಬ್ ವತಿಯಿಂದ ಅಪರಾಧ ತಡೆ ಮಾಸಾಚರಣೆ
ಉಡುಪಿ (ಉಡುಪಿ ಟೈಮ್ಸ್ ವರದಿ ): ಉಡುಪಿ ಪೊಲೀಸ್ ಹಾಗೂ ರೋಟರಿ ಕ್ಲಬ್ ಉಡುಪಿ ಇವರ ಸಹಭಾಗಿತ್ವದಲ್ಲಿ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ಉಡುಪಿಯ ಸರ್ವಿಸ್ ಬಸ್ ನಿಲ್ದಾಣದ ಬಳಿ ನಡೆಸಲಾಯಿತು.
ಈ ಜನಜಾಗೃತಿ ಮಾಸಾಚರಣೆಯನ್ನು ಉದ್ಘಾಟಿಸಿ ಎಎಸ್ಪಿ ಕುಮಾರಚಂದ್ರ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಇದೆ ಸಮಯದಲ್ಲಿ ಅಪರಾಧ ತಡೆಯ ಬಗ್ಗೆ ಕರಪತ್ರ ಹಂಚಲಾಯಿತು
ಈ ಸಂದರ್ಭ ಸರ್ಕಲ್ ಇನ್ಸ್ ಪೆಕ್ಟರ್ ಮಂಜುನಾಥ್, ಟ್ರಾಫಿಕ್ ಇನ್ಸ್ ಪೆಕ್ಟರ್ ಅಬ್ದುಲ್ ಖಾದರ್, ರೋಟರಿ ಉಡುಪಿ ಪ್ರೆಸಿಡೆಂಟ್ ರಾಧಿಕಾ ಲಕ್ಷ್ಮೀ ನಾರಾಯಣ್ , ಕಾರ್ಯದರ್ಶಿ ದೀಪಾ ಬಂಡಾರಿ, ಜಿಲ್ಲಾ ಪ್ರಾಜೆಕ್ಟ್ ಸೆಕ್ರೆಟರಿ ಡಾ. ಸುದರ್ಶನ್ ಶಣೈ, ಡಿಸ್ಟ್ರಿಕ್ಟ್ ಎಡಿಟರ್ ಕೆ ಎಸ್ ಬಾಸ್ರಿ, ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.