ಉಡುಪಿ; ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಾಯಿ ಕಳವು ದೃಶ್ಯ
ಉಡುಪಿ(ಉಡುಪಿ ಟೈಮ್ಸ್ ವರದಿ): ಸಾಮಾನ್ಯವಾಗಿ ಕಳ್ಳರ ಹಾವಳಿಯಿಂದ ತಪ್ಪಿಸಿಕೊಳ್ಳಲು ಮನೆಗಳಲ್ಲಿ ನಾಯಿಯನ್ನ ಸಾಕುತ್ತೇವೆ, ಆದರೆ ಇಲ್ಲೋಬ್ಬ ಖದೀಮ ಮನೆಯಲ್ಲಿದ್ದ ನಾಯಿಯನ್ನೇ ಎಗರಿಸಿದ್ದಾನೆ. ಇದೀಗ ನಾಯಿ ಕದಿಯುವ ಈ ಕಳ್ಳ ನ ಕೈ ಚಳಕದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ ಯಾಗಿದೆ. ಉಡುಪಿ ಜಿಲ್ಲೆಯ ಮಲ್ಪೆ ಸಮೀಪದ ಡಾಕ್ಟರ್ ಸುರೇಂದ್ರ ಶೆಟ್ಟಿ ಎಂಬವರ ಬನ್ನಂಜೆಯ ಮನೆಯಲ್ಲಿ ಮುಂಜಾನೆ 4.35 ರ ಸುಮಾರಿಗೆ ಕಳ್ಳತನ ನಡೆದಿದೆ. ಮನೆಯ ಹಿಂಬದಿಯಿಂದ ಒಳಗೆ ನುಗ್ಗಿದ ಕಳ್ಳನು ನಾಯಿಯನ್ನು ಕದ್ದೊಯ್ದಿದ್ದಾನೆ.
ಬೆಳಗ್ಗೆ ಮನೆಯವರ ಅಚ್ಚುಮೆಚ್ಚಿನ ವಿಶಿಷ್ಟ ತಳಿಯ ಹೈಬ್ರೀಡ್ ನಾಯಿ ಬೆಳಗ್ಗೆ ಮನೆಯಲ್ಲಿ ಇಲ್ಲದಿರುವುದನ್ನು ಗಮನಿಸಿದ ಮನೆಯವರು ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕಳ್ಳನ ಕೃತ್ಯ ಬೆಳಕಿಗೆ ಬಂದಿದೆ. ಇದೀಗ ಈ ವಿಡಿಯೋ ಭಾರೀ ವೈರಲ್ ಆಗಿದೆ,ಇನ್ನು ನಾಯಿಯನ್ನು ಕದಿಯುವ ವೇಳೆ ನಾಯಿ ಕಳ್ಳನನ್ನು ನೋಡಿ ಬೊಗಳದಂತೆ ನೋಡಿಕೊಂಡಿರುವ ಕಳ್ಳನ ಚಾಕ ಚಕ್ಯತೆಯನ್ನು ಕಂಡು ಜನ ಬೆರಗಾಗಿದ್ದಾರೆ.