ಉಡುಪಿ: ನಿನ್ನೆ ಅಕ್ಷಯ್, ಇಂದು ವಿಷ್ಣುವರ್ಧನ್ ಎಸ್ಪಿಯಾಗಿ ಬದಲಾಯಿಸಿದ ಸರಕಾರ!
ಉಡುಪಿ: ಜಿಲ್ಲೆಗೆ ನೂತನ ಎಸ್ಪಿಯಾಗಿ ನಿನ್ನೆ ಅಕ್ಷಯ್ ಹಾಕೆ ನೇಮಕಗೊಳಿಸಿ ಆದೇಶ ಮಾಡಿದ್ದ ಸರಕಾರ, ಒಂದೇ ದಿನದಲ್ಲಿ ಉಡುಪಿಯಲ್ಲಿ ಈ ಹಿಂದೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ಕಾರ್ಯ ನಿರ್ವಹಿಸಿದ್ದ ಎನ್. ವಿಷ್ಣುವರ್ಧನ ಅವರನ್ನು ನೇಮಕ ಮಾಡಿದೆ. ಸರಕಾರದ ಈ ಆದೇಶ ಗೊಂದಲ ಮೂಡಿದೆ.
ಉಡುಪಿ ಜಿಲ್ಲಾ ಎಸ್ ಪಿ ನಿಶಾ ಜೇಮ್ಸ್ ಅವರನ್ನು ಬೆಂಗಳೂರಿನ ಆಂತರಿಕ ಭಧ್ರತಾ ವಿಭಾಗಕ್ಕೆ ವರ್ಗವಣೆಗೊಳಿಸಲಾಗಿದೆ. ಅಕ್ಷಯ್ ಹಾಕೆ ಅವರನ್ನು ಉಡುಪಿ ಎಸ್ ಪಿಯಾಗಿ ನೇಮಕಗೊಳಿಸಿ ಎಂದು ನಿನ್ನೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಸಹಿ ಮಾಡಿದ ಆದೇಶ ಪತ್ರದೊಂದಿಗೆ ಇಂದು ಉಡುಪಿ ಎಸ್ಪಿ ಕಛೇರಿಗೆ ಆಗಮಿಸಿದ ಅಕ್ಷಯ್ ಅವರಿಗೆ ಸ್ವಾಗತ ಕೋರಲು ಬುಧವಾರ ಜಿಲ್ಲಾ ಪೊಲೀಸ್ ಇಲಾಖೆ ತಯಾರಿ ನಡೆಸಿತ್ತು.
ಸಿಬ್ಬಂದಿಗಳು ಕೂಡ ಕಛೇರಿ ಎದುರು ಬೆಳಿಗ್ಗೆ 10 ಗಂಟೆಗೆ ಕಾದು ಕುಳಿತಿದ್ದರು.
ಇದರ ನಡುವೆ ಸರಕಾರವು ಈ ಹಿಂದೆ ಉಡುಪಿಯಲ್ಲಿ ಎಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದ ಎನ್ .ವಿಷ್ಣುವರ್ಧನ್ ಅವರನ್ನು ಎಸ್ಪಿಯಾಗಿ ನೇಮಕಗೊಳಿಸಿ ಆದೇಶ ಹೊರಡಿಸಿದ್ದು ಹಲವಾರು ಸಂಶಯಗಳಿಗೆ ಕಾರಣವಾಗಿದೆ.
ಅಕ್ಷಯ್ ಹಾಕೆ ಅವರನ್ನು ಕಾರ್ಕಳ ನಕ್ಸಲ್ ನಿಗ್ರಹ ಪಡೆಯ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ.