ಬಾಯಿಯಲ್ಲಿ ನೀರೂರಿಸುವ ಸಿಹಿ ಖಾದ್ಯ ಹೊಯ್ಯಪ್ಪ
ವಿದ್ಯಾವತಿ ಅಡಿಗ, ಬೆಂಗಳೂರು
ಹಬ್ಬದ ವಿಶೇಷ ಖಾದ್ಯಗಳಲ್ಲಿ ಹೊಯ್ಯಪ್ಪ ಒಂದು. ಇದನ್ನು ಏರಿಯಪ್ಪ ಎಂದೂ ಕರೆಯುತ್ತಾರೆ. ಸಾಂಪ್ರದಾಯಿಕ ಶೈಲಿಯಲ್ಲಿ ಇರುವ ಈ ಭಕ್ಷ್ಯ ಬಾಯಿಯಲ್ಲಿ ನೀರೂರಿಸುವ ಸಿಹಿ ತಿಂಡಿ . ಹೊಯ್ಯಪ್ಪ ನಿಮ್ಮ ನೆಚ್ಚಿನ ಪಾಕ ಟೈಮ್ಸ್ ನಲ್ಲಿ.
ಬೇಕಾಗುವ ಸಾಮಗ್ರಿ
ಊಟದ ಅಕ್ಕಿ 1 ಕಪ್
ಮೆಂತೆ -2 ಚಮಚ
ಉದ್ದಿನ ಬೇಳೆ 2 ಚಮಚ
ಅವಲಕ್ಕಿ – 2 ಚಮಚ
ಕಾಯಿ ತುರಿ- 3 ಚಮಚ
ಬೆಲ್ಲ – ಅರ್ಧ (1/2) ಕಪ್
ಉಪ್ಪು -ಚಿಟಿಕೆ
ಏಲಕ್ಕಿ -ಚಿಟಿಕೆ
ನೀರು – ರುಬ್ಬಲು ಅಗತ್ಯವಿರುವಷ್ಟು
ಎಣ್ಣೆ – ಕರಿಯಲು
ಮಾಡುವ ವಿಧಾನ – ಅಕ್ಕಿ ಮೆಂತೆಯನ್ನು 6 -7 ಗಂಟೆಯ ಮೊದಲು ನೆನಸಿಡಿ . ರುಬ್ಬುವ ಒಂದು ಗಂಟೆ ಮೊದಲು ಉದ್ದಿನ ಬೇಳೆ ಮತ್ತು ಅವಲಕ್ಕಿಯನ್ನು ಹಾಕಿ ನೆನಸಿ ನಂತರ ಮಿಕ್ಸಿಯಲ್ಲಿ ಹಾಕಿ ನಯವಾಗಿ ಹಾಗು ಗಟ್ಟಿಯಾಗಿ ರುಬ್ಬಿಕೊಳ್ಳಿ.
ಕೊನೆಯಲ್ಲಿ ಬೆಲ್ಲ ಹಾಕಿ ರುಬ್ಬಿ ನೀರು ಜಾಸ್ತಿಯಾಗಿ ಸೇರಿಸಬಾರದು. ಕೊನೆಗೆ ಉಪ್ಪು ,ಏಲಕ್ಕಿ ಪುಡಿಯನ್ನ ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಸಿದ್ದ ಮಾಡಿ ಇಟ್ಟುಕೊಳ್ಳಿ. ಎಣ್ಣೆ ಕಾದ ನಂತರ ಎಣ್ಣೆಗೆ ದೋಸೆಯ ಸೌಟಿನಲ್ಲಿ ಹೊಯ್ಯಬೇಕು .ಉರಿಯು ಮೀಡಿಯಂಯಲ್ಲಿರಬೇಕು. ಹೊಯ್ಯಪ್ಪ ಬಂಗಾರದ ಬಣ್ಣಕ್ಕೆ ತಿರುಗಿದ ನಂತರ ಅದನ್ನು ಬಾಣಲೆಯಿಂದ ತೆಗೆದರೆ ನಿಮ್ಮ ನೆಚ್ಚಿನ ಹೊಯ್ಯಪ್ಪ ಸವಿಯಲು ಸಿದ್ದ.
ವಿದ್ಯಾವತಿ ಅಡಿಗ, ಬೆಂಗಳೂರು