ಏಪ್ರಿಲ್ 22 ರಿಂದ ಉಡುಪಿ ಟೈಮ್ಸ್ ನ ಹೊಸ ಪ್ರಯೋಗ “ಶೆಫೀನ್ಸ್ ಇಂಗ್ಲಿಷ್ ಟೈಮ್ಸ್”
ಉಡುಪಿ: ನಿಮಗೆ ಇಂಗ್ಲಿಷ್ ಮಾತನಾಡಲು ಭಯವಾಗುತ್ತಿದ್ದೆಯೇ ?ನಿಮ್ಮ ಇಂಗ್ಲಿಷ್ ಗ್ರಾಮರ್ ಸರಿ ಇಲ್ಲ ಎಂಬ ಅನುಮಾನವೇ ? ನಿಮ್ಮ ಭಯ ಓಡಿಸುವ ಸಲುವಾಗಿ ನಿಮ್ಮಲ್ಲಿರುವ ಆತ್ಮವಿಶ್ವಾಸ ಹೆಚ್ಚಿಸಲು ನಿಮ್ಮ ನೆಚ್ಚಿನ ‘ಉಡುಪಿ ಟೈಮ್ಸ್‘ ನ ಹೊಸ ಪ್ರಯತ್ನ.
ಮಣಿಪಾಲದ ಹೆಸರಾಂತ ಸಂಸ್ಥೆ ಶೆಫೀನ್ಸ್ ರವರ ಸಹಯೋಗದೊಂದಿಗೆ ಪ್ರತಿ ದಿನ ಇಂಗ್ಲಿಷ್ ತರಗತಿಗಳು “ಶೆಫೀನ್ಸ್ಇಂಗ್ಲಿಷ್ ಟೈಮ್ಸ್” ಎಂಬ ಹೆಸರಿನೊಂದಿಗೆ ನಿಮ್ಮ ನೆಚ್ಚಿನ ಉಡುಪಿ ಟೈಮ್ಸ್ ವೆಬ್ ಸೈಟ್ ನಲ್ಲಿ ಏಪ್ರಿಲ್ 22 ರ ಬುಧವಾರದಿಂದ ಮೂಡಿ ಬರಲಿದೆ .
ವೆಬ್ ಸೈಟ್ ಇತಿಹಾಸದಲ್ಲಿ ಪ್ರಥಮ ಪ್ರಯತ್ನ. ‘ಉಡುಪಿ ಟೈಮ್ಸ್‘ ನಿಮ್ಮ ಪ್ರೀತಿಯ ಅಭಿಮಾನದಿಂದ ನಿಮ್ಮ ಮನಸ್ಸು ಗೆದ್ದಿದ್ದೇವೆ. ಇದೀಗ ಶೆಫೀನ್ಸ್ ಇಂಗ್ಲಿಷ್ ಟೈಮ್ಸ್ ಎಂಬ ವಿನೂತನ ಪ್ರಯೋಗ ಮಾಡುತ್ತಿದ್ದೇವೆ.
ಶೆಫೀನ್ಸ್ ಸಂಸ್ಥೆ – 1998ರಲ್ಲಿ ಸ್ಥಾಪನೆಗೊಂಡು, ಸ್ಪೋಕನ್ ಇಂಗ್ಲಿಷ್ ತರಬೇತಿಯಲ್ಲಿ 2008ರಿಂದ ಉಡುಪಿಯಲ್ಲಿ ಹೆಸರುವಾಸಿಯಾಗಿರುವ ಸಂಸ್ಥೆ ಶೆಫಿನ್ಸ್. ಮಣಿಪಾಲದಲ್ಲಿ ಪ್ರಧಾನ ಕಛೇರಿಯನ್ನು ಹೊಂದಿರುವ ಸಂಸ್ಥೆಯು ಉಡುಪಿ ಜಿಲ್ಲೆಯ ಜನಸಾಮಾನ್ಯರಿಗೆ ಮಾತ್ರವಲ್ಲದೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೂ ಸ್ಪೋಕನ್ ಇಂಗ್ಲಿಷ್ ತರಬೇತಿ ನೀಡುತ್ತಿದೆ.
ಅಂತರರಾಷ್ಟ್ರೀಯ ವ್ಯಕ್ತಿತ್ವ ವಿಕಸನ ತರಬೇತಿ ಸಂಸ್ಥೆ ಜೇಸಿಐ ಯ ತರಬೇತುದಾರರಾಗಿರುವ ಮನೋಜ್ ಕಡಬ ಇವರು ಶೆಫಿನ್ಸ್ ನ ನಿರ್ದೇಶಕರಾಗಿದ್ದು, 2019-20ನೇ ಅಧ್ಯಯನ ವರ್ಷದಲ್ಲಿ ಜಿಲ್ಲೆಯ 21 ಕನ್ನಡ ಮಾಧ್ಯಮ ಶಾಲೆಗಳ 2100ರಷ್ಟು ವಿದ್ಯಾರ್ಥಿಗಳಿಗೆ ಉಚಿತವಾಗಿ ಸ್ಪೋಕನ್ ಇಂಗ್ಲಿಷ್ ಕಲಿಸಿದೆ. ಈ ಮೂಲಕ ಕನ್ನಡ ಮಾಧ್ಯಮ ಶಾಲೆ ಉಳಿಸಿ ಅಭಿಯಾನಕ್ಕೆ ಹೊಸ ಸೇರ್ಪಡೆಯೊಂದನ್ನು ನೀಡಿದೆ. ಅಷ್ಟೇ ಅಲ್ಲ, ಜಿಲ್ಲೆಯ 42 ಮಹಿಳೆಯರಿಗೆ ಉಚಿತವಾಗಿ ಸ್ಪೋಕನ್ ಇಂಗ್ಲಿಷ್ ಕಲಿಸಿ, ಮಹಿಳಾ ಸಬಲೀಕರಣಕ್ಕೆ ಸಹ ಹೊಸ ಆಯಾಮವನ್ನು ನೀಡಿದೆ. ಶೆಫಿನ್ಸ್, ವಾಟ್ಸಾಪ್ ಮೂಲಕ ಸ್ಪೋಕನ್ ಇಂಗ್ಲಿಷ್ ತರಬೇತಿಯನ್ನು ಸಹ ನೀಡಿ ಹಲವಾರು ಜನರ ಬದುಕಿಗೆ ಆಶಾಕಿರಣವಾಗಿದೆ.
ವಿವಿಧ ವಿಧಾನಗಳ ಮೂಲಕ ಉಡುಪಿ ಟೈಮ್ಸ್ ಕನ್ನಡ ವೆಬ್ ಸೈಟ್ ಓದುಗರಿಗೆ ಸ್ಪೋಕನ್ ಇಂಗ್ಲಿಷ್ ಕಲಿಸುವ ಪ್ರಯತ್ನಕ್ಕೆ ಉಡುಪಿ ಟೈಮ್ಸ್ ಶೆಫೀನ್ಸ್ ಸಹಯೋಗದಿಂದ ಮುಂದಡಿಯಿಡುತ್ತಿದೆ. ದಿನದಲ್ಲಿ ಮುಂಜಾನೆ ಹಾಗೂ ಸಾಯಂಕಾಲ ತಲಾ ಒಂದೊಂದು ಗಂಟೆ ಇಂಗ್ಲಿಷ್ ಕಲಿಯಲು ಮೀಸಲಿಡುವುದರಿಂದ ಯಾವುದೇ ವ್ಯಕ್ತಿ ಸಹ ಒಂದೆರಡು ತಿಂಗಳಲ್ಲಿ ಸ್ಪೋಕನ್ ಇಂಗ್ಲಿಷ್ ಕಲಿಯುವಂತಹ ಸುಲಭ ಉಪಾಯಗಳನ್ನು ಶೆಫಿನ್ಸ್ ನಿಮ್ಮ ಮುಂದೆ ಇಡುತ್ತಿದೆ. ಬುಧವಾರದಿಂದ ನಿಮ್ಮ ನೆಚ್ಚಿನ ಉಡುಪಿ ಟೈಮ್ಸ್ ವೆಬ್ಸೈಟ್ ನಲ್ಲಿ ನಿರೀಕ್ಷಿಸಿ ಶೆಫೀನ್ಸ್ ಇಂಗ್ಲಿಷ್ ಟೈಮ್ಸ್ .
—