ನಾರಾಯಣ ಗುರು ಅಭಿವೃದ್ಧಿ ನಿಗಮ ಬೇಡಿಕೆಗೆ ಸಚಿವ ಕೋಟ ನಿರ್ಲಕ್ಷ್ಯ-ಬಿಲ್ಲವ ಮುಖಂಡ ಆಕ್ರೋಶ

ಉಡುಪಿ ಜೂ.27(ಉಡುಪಿ ಟೈಮ್ಸ್ ವರದಿ): ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮವನ್ನುಆರಂಭಿಸಬೇಕು ಎಂಬ ಬೇಡಿಕೆಯ ಬಗ್ಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಉಡುಪಿ ಬಿಲ್ಲವ ಮುಖಂಡ ದಿವಾಕರ ಸನಿಲ್ ಆರೋಪಿಸಿದ್ದಾರೆ.

ಈ ಬಗ್ಗೆ ಇಂದು ಮಾದ್ಯಮದೊಂದಿಗೆ ಮಾತನಾಡಿದ ಅವರು, ಈ ಹಿಂದೆ ಸಮಾವೇಶದಲ್ಲಿ ಅಭಿವೃದ್ಧಿ ನಿಗಮ ಸ್ಥಾಪನೆ ಆಗಬೇಕು. ಇದರಿಂದ ಬಿಲ್ಲವ ಸಮಾಜಕ್ಕೆ ಉಪಯೋಗವಿದೆ ಎಂಬ ಹೇಳಿಕೆ ನೀಡಿದ್ದರು. ಆದರೆ ಈಗ ಅದಕ್ಕೆ ವಿಭಿನ್ನವಾಗಿ ಹೇಳಿಕೆ ನೀಡುತ್ತಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಈ ಬಗ್ಗೆ ಒಲವು ಇಲ್ಲದ ರೀತಿಯಲ್ಲೇ ಮಾತನಾಡಿದ್ದಾರೆ. ಅವರ ಹೆಳಿಕೆಯಲ್ಲಿ ನಾರಾಯಣಗುರು ಅಭಿವೃದ್ಧಿ ನಿಗಮದ ಅಗತ್ಯ ಇಲ್ಲ ಎನ್ನುವಂತೆ ಕಂಡು ಬರುತ್ತಿದೆ. ಮುಂದಿನ ದಿನಗಳಲ್ಲಿ ಸರಕಾರ ನಮ್ಮ ಬೇಡಿಕೆ ಈಡೇರಿಸದಿದ್ದರೆ ಖಂಡಿತಾವಾಗಿಯೂ ಜಿಲ್ಲೆಯ ಜನತೆ ಒಗ್ಗಟ್ಟಾಗಿ ಪ್ರತಿಭಟಿಸ ಬೇಕಾದ ಪರಿಸ್ಥಿತಿ ಬರುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ದ.ಕ, ಉಡುಪಿ ಜಿಲ್ಲೆಯಲ್ಲಿ ಸೇರಿ ರಾಜ್ಯದಲ್ಲಿ ಬಿಲ್ಲವ ಸಮಾಜದ ಇತರ 36 ಇತರ ಪಂಗಡಗಳನ್ನು ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮವನ್ನು ಆರಂಭಿಸಬೇಕು ಎಂದು ಕಳೆದ 2-3 ವರ್ಷಗಳಿಂದ ರಾಜ್ಯ ಸರಕಾರಕ್ಕೆ ಬೇಡಿಕೆಗಳನ್ನು ನೀಡುತ್ತಾ ಬಂದಿದ್ದೇವೆ. ಎಲ್ಲಾ ರಾಜಕೀಯ ಪಕ್ಷದವರು ನಮ್ಮ ಬೇಡಿಕೆಯನ್ನು ಸ್ವೀಕಾರ ಮಾಡಿದ್ದಾರೆ ಬಿಟ್ಟರೆ ಈವರೆಗೂ ಯಾವುದೇ ರೀತಿಯಲ್ಲೂ ನಮ್ಮ ಮನವಿಗೆ ಸ್ಪಂದಿಸುವ ಕೆಲಸ ಆಗುತ್ತಿಲ್ಲ.

ಪ್ರತೀ ಬಾರಿ ಆಶ್ವಾಸನೆ ನೀಡಿದ್ದಾರೆ ಬಿಟ್ಟರೆ ಯಾವುದೇ ರೀತಿಯಲ್ಲೂ ಬೇಡಿಕೆ ಈಡೇರಿಕೆಗೆ ಸ್ಪಂದಿಸಿಲ್ಲ ಎಂದು ದೂರಿದರು.ಹಾಗೂ ನಾಲವು ಕಳೆದ 2-3 ವರ್ಷಗಳಿಂದ ನಮ್ಮ ಬೇಡಿಕೆ ಈಡೇರಿಸುವಲ್ಲಿ ವಿಫಲರಾಗಿದ್ದೇವೆ ಎಂದರು. ಇದೇ ವೇಳೆ ಅವರು, ನಿಗಮ ಆರಂಭವಾದರೆ ಸ್ವಉದ್ಯೋಗ ಮಾಡುವುದಾದರೆ ನಿಗಮದ ಮುಖಾಂತರವೇ ಅನುದಾನವೇನಾದರೂ ಬಂದರೆ ಉಪಯೋಗವಾಗಲಿದೆ. ಅದೇ ರೀತಿ ಸ್ವಸಹಾಯ ಸಂಘಗಳಲ್ಲಿ ಬರುವಂತಹ ರಿಯಾಯ್ತಿ ದರದ ಯೋಜನೆಗಳಿದ್ದರೆ ಅನುಕೂಲ ಆಗುತ್ತದೆ. ಬೇರೆ ಬೇರೆ ರೀತಿಯಲ್ಲಿ ಈ ಅಭಿವೃದ್ಧಿ ನಿಗಮದಿಂದ ಸಮಾಜಕ್ಕೆ ಸಹಕಾರವಾಗಲಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!