ತೀಸ್ತಾ ಸೆಟಲ್ವಾಡ್ ಬಂಧನ- ಪ್ರಜಾಪ್ರಭುತ್ವದ ಕಗ್ಗೊಲೆ: ಸುಂದರ ಮಾಸ್ತರ್

ಉಡುಪಿ: ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಬಂಧನವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಉಡುಪಿ ಜಿಲ್ಲಾ ಶಾಖೆ ತೀವ್ರವಾಗಿ ಖಂಡಿಸುತ್ತದೆ. ತೀಸ್ತಾ ಬಂಧನ ಭಾರತದ ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಕರ್ನಾಟಕ ದಲಿತ ಸಂಘರ್ಷಸಮಿತಿ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕರಾದ ಸುಂದರ ಮಾಸ್ತರ್ ಹೇಳಿದರು.

ತೀಸ್ತಾ ಸೆಟಲ್ವಾಡ್ ಬಂಧನವಾದ ಕೂಡಲೇ ತುರ್ತು ಸಭೆ ಕರೆದ ಸುಂದರ ಮಾಸ್ತರ್ ಸರ್ವಾಧಿಕಾರಿ ಹಿಟ್ಲರ್ ಮಾಧರಿ ಆಡಳಿತದತ್ತಾ ಭಾರತ ಸಾಗುತ್ತಿದೆ, ಅನ್ಯಾಯದ ವಿರುದ್ಧ, ಧೌರ್ಜನ್ಯದ ವಿರುದ್ಧ, ದುರಾಡಳಿತದ ವಿರುದ್ಧ ಧ್ವನಿ ಎತ್ತಿದವರನ್ನೇಲ್ಲಾ ಹತ್ತಿಕ್ಕುವ ಕಾರ್ಯ ನಡೆಯುತ್ತಿದೆ. ಬಡವರ, ದಲಿತರ ಪರ ಹೋರಾಟ ಮಾಡುವ  ಹೋರಾಟಗಾರರನ್ನೆಲ್ಲಾ ಪೊಲೀಸರೇ ಸುಳ್ಳು ಕೇಸು ದಾಖಲಿಸಿ ಅದಕ್ಕೆ ಬೇಕಾದ ಪುರಾವೆಗಳನ್ನು ತಾವೇ ಸ್ರಷ್ಟಿಸಿ ಎಲ್ಲಾ ಜನಪರ ಚಳವಳಿಗಾರರನ್ನು ಜೈಲಿಗೆ ಅಟ್ಟುವ ಕೆಲಸ ಮಾಡಲಾಗುತ್ತಿದೆ ಎಂದರು.

ಇಂದು ನಡೆದ ತುರ್ತು ಸಭೆಯಲ್ಲಿ ಬಂಧನ ಖಂಡಿಸಿ ಪ್ರತಿಭಟನೆ ಮಾಡುವ ನಿರ್ಧಾರ ತೆಗೆದುಕೊಳ್ಳಲಾಯಿತು. ಇಂದಿನ ತುರ್ತು ಸಭೆಯಲ್ಲಿ ದ.ಸಂ.ಸ.ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ, ಪರಮೇಶ್ವರ್ ಉಪ್ಪೂರು, ಭಾಸ್ಕರ್ ಮಾಸ್ಟರ್ ಕುಂಜಿಬೆಟ್ಟು, ಶ್ಯಾಮ ಸುಂದರ ತೆಕ್ಕಟ್ಟೆ, ಮಂಜುನಾಥ ಬಾಳ್ಕುದ್ರು, ಶ್ರೀಧರ್ ಕುಂಜಿಬೆಟ್ಟು, ಪ್ರವೀಣ್ ಗುಂಡಿಬೈಲು, ಶಿವರಾಮ ಕಾಪು, ರಾಘವ ಬೆಳ್ಳೆ ಮೊದಲಾದ ಪಧಾಧಿಕಾರಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!