ಉಡುಪಿ: ಸ್ವಾತಂತ್ರೋತ್ಸವ ದಿನಾಚರಣೆ ನೇರ ಪ್ರಸಾರ

ಉಡುಪಿ, ಆಗಸ್ಟ್,13(ಉಡುಪಿಟೈಮ್ಸ್ ವರದಿ): ಜಿಲ್ಲಾ ಮಟ್ಟದ ಸ್ವಾತಂತ್ರೋತ್ಸವ ಆಚರಣಾ ಸಮಿತಿ ವತಿಯಿಂದ ಆಗಸ್ಟ್ 15 ರಂದು ಬೆಳಿಗ್ಗೆ 9ಕ್ಕೆ, ನಗರದ ಅಜ್ಜರಕಾಡಿನಲ್ಲಿರುವ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಾತಂತ್ರೋತ್ಸವ ದಿನಾಚರಣೆ ಕಾರ‍್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಜಿಲ್ಲಾಧಿಕಾರಿ ಜಿ. ಜಗದೀಶ್ ಧ್ವಜಾರೋಹಣ ನೇರವೇರಿಸಿ, ಸ್ವಾತಂತ್ರೋತ್ಸವ ಸಂದೇಶವನ್ನು ನೀಡಲಿದ್ದಾರೆ. ಈ ಕಾರ‍್ಯಕ್ರಮದಲ್ಲಿ ಮೀನುಗಾರಿಕೆ ಮತ್ತು ಬಂದರು ಹಾಗೂ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರುಗಳಾದ ವಿ.ಸುನೀಲ್ ಕುಮಾರ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಕೆ.ರಘುಪತಿ ಭಟ್, ಲಾಲಾಜಿ.ಆರ್.ಮೆಂಡನ್,
ಬಿ.ಎಂ.ಸುಕುಮಾರ ಶೆಟ್ಟಿ, ರಾಜ್ಯ ಸಭಾ ಸದಸ್ಯ ಓಸ್ಕರ್ ಫೆರ್ನಾಂಡೀಸ್, ಲೋಕಸಭಾ ಕ್ಷೇತ್ರ ಸಂಸದರುಗಳಾದ ಶೋಭಾ ಕರಂದ್ಲಾಜೆ, ಬಿ.ವೈ.ರಾಘವೇಂದ್ರ, ವಿಧಾನಪರಿಷತ್ ಶಾಸಕರುಗಳಾದ ಆಯನೂರು ಮಂಜುನಾಥ, ಎಸ್.ಎಲ್.ಭೋಜೆಗೌಡ, ಡಾ. ತೇಜಸ್ವಿನಿ ಗೌಡ, ಮಂಗಳೂರು ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎ.ರಾಘವೇಂದ್ರ ಕಿಣಿ, ಮತ್ತು ಸರ್ಕಾರದ ಕಾರ್ಯದರ್ಶಿ,ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ, ಗಣಿ,ಜವಳಿ,ಸಕ್ಕರೆ, ಸಣ್ಣ ಪ್ರಮಾಣದ ಕೈಗಾರಿಕೆಗಳು ಹಾಗೂ ಉಡುಪಿ
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಂ.ಮಹೇಶ್ವರ್ ರಾವ್ ಸೇರಿದಂತೆ ಮತ್ತಿತರ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ.

ಕಾರ್ಯಕ್ರಮವನ್ನು ಕೋವಿಡ್ -19 ಕಾರಣದಿಂದಾಗಿ ಹೆಚ್ಚಿನ ಜನ ಸಂದಣಿ ಸೇರುವರೇ ಅವಕಾಶವಿಲ್ಲದ ಕಾರಣ ಸರಳವಾಗಿ ಆಚರಿಸಲಾಗುತ್ತಿದೆ. ಆದುದರಿಂದ ಸಾರ್ವಜನಿಕರಿಗೆ ಮನೆಯಲ್ಲಿಯೆ ಕಾರ್ಯಕ್ರಮ ವೀಕ್ಷಿಸಲು ಅನುಕೂಲವಾಗುವಂತೆ ಸದ್ರಿ ಕಾರ್ಯಕ್ರಮದ ನೇರ ಪ್ರಸಾರವನ್ನು ಹಮ್ಮಿಕೊಳಲಾಗಿದ್ದು, ಈ ಕೆಳಕಂಡ ಲಿಂಕ್‌ಗಳನ್ನು ಬಳಸಿಕೊಂಡು ಸಾರ್ವಜನಿಕರು ಕಾರ್ಯಕ್ರಮವನ್ನು ವೀಕ್ಷಿಸಬಹುದಾಗಿದೆ.

  1. Webcast URL : http://udupi.nic.in/webcast
  2. Facebook Live cast # Tag;- #dcudupi, #Aug15udupi, #dcudupilive

1 thought on “ಉಡುಪಿ: ಸ್ವಾತಂತ್ರೋತ್ಸವ ದಿನಾಚರಣೆ ನೇರ ಪ್ರಸಾರ

  1. ಡಿಸಿ ಧ್ವಜಾರೋಹಣ ಮಾಡ್ಲಿಕ್ಕೆ ಇದು ಗಣರಾಜ್ಯ ದಿವಸಾ ನಾ?
    ಶಾಸಕರು ಮಾಡ್ಬೇಕಲ್ಲ? ಕೆಟ್ಟ ಸಂಪ್ರದಾಯಗಳನ್ನು ಮಾಡ್ತಾ ಇದೀರಲ್ಲ?

Leave a Reply

Your email address will not be published. Required fields are marked *

error: Content is protected !!