ಉಡುಪಿ: ನಗರ ಸಭೆ ಮತ್ತೆ ಸೀಲ್ ಡೌನ್!
ಉಡುಪಿ:(ಉಡುಪಿ ಟೈಮ್ಸ್ ವರದಿ) ನಗರ ಸಭೆ ಅಧಿಕಾರಿಯೊರ್ವರಿಗೆ ಕೊರೋನಾ ಪಾಸಿಟಿವ್ ಹಿನ್ನೆಲೆಯಲ್ಲಿ ಮತ್ತೆ ಕಛೇರಿಯನ್ನು ಸೀಲ್ ಡೌನ್ ಮಾಡಲಾಗಿದೆ.
ಈ ಹಿಂದೆ ನಗರ ಸಭೆಯ ಆರೋಗ್ಯಾಧಿಕಾರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದರಿಂದ 14 ದಿನಗಳ ಕಾಲ ನಗರ ಸಭಾ ಕಛೇರಿಯನ್ನು ಸೀಲ್ ಡೌನ್ ಮಾಡಲಾಗಿತ್ತು.
ಇಂದು ನಗರ ಸಭೆಯ ಪೌರಾಯುಕ್ತರಿಗೆ ಸೋಂಕು ದೃಢವಾದ್ದರಿಂದ ಮತ್ತೆ 2 ದಿನಗಳ ಕಾಲ ಕಛೇರಿ ಸೀಲ್ ಡೌನ್ ಮಾಡಿರುವುದಾಗಿ ತಿಳಿದು ಬಂದಿದೆ. ಮಾತ್ರವಲ್ಲದೆ ನಗರ ಸಭಾ ಸದಸ್ಯರೊರ್ವರಿಗೂ ಸೋಂಕು ಹರಡಿದ್ದು, ಅವರ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ.