ಉಡುಪಿ: ಹಳೆಯ ವಿಡಿಯೋ ವೈರಲ್, ಜಿಲ್ಲಾಧಿಕಾರಿಯವರ ಸ್ಪಷ್ಟನೆ
ಉಡುಪಿ: (ಉಡುಪಿ ಟೈಮ್ಸ್ ವರದಿ) ಇಂದು ಬಹಳಷ್ಟು ಸೋಷಲ್ ಮಾಧ್ಯಮಗಳಲ್ಲಿ ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಅವರು ಮಾತನಾಡಿದ ಹಳೆಯ ವಿಡಿಯೋ ವೈರಲ್ ವೈರಲ್ ಆಗುತ್ತಿದ್ದು, ದಯವಿಟ್ಟು ಉಡುಪಿ ಜಿಲ್ಲೆಯ ಸಮಸ್ತ ನಾಗರಿಕರು ಈ ವಿಡಿಯೋವನ್ನು ನಂಬಬಾರದು ಎಂಬುದು “ಉಡುಪಿ ಟೈಮ್ಸ್” ನ ಕಳಕಳಿ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಜಿಲ್ಲಾಧಿಕಾರಿಗಳು, ಮಾ.22ರ ಲಾಕ್ ಡೌನ್ ಸಂದರ್ಭ ನೀಡಿರುವ ಹಳೇಯ ಹೇಳಿಕೆ ವೀಡಿಯೋ ಈಗ ವ್ಯೆರಲ್ ಆಗಿದೆ. ಉಡುಪಿ ಜಿಲ್ಲೆಯಲ್ಲಿ ಯಾವುದೇ ಕಟ್ಟುನಿಟ್ಟಿನ ಲಾಕ್ಡೌನ್ ಇಲ್ಲ. ಮೇ 31ರ ವರೆಗೆ ಲಾಕ್ಡೌನ್ 4ರ ನಿಯಮಾವಳಿ ಜಾರಿಯಲ್ಲಿರಲಿದೆ. ಯಾರೂ ಆತಂಕ ಪಡುವ ಆವಶ್ಯಕತೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇಂದು ಮಧ್ಯರಾತ್ರಿಯಿಂದಲೇ ಉಡುಪಿ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ ಡೌನ್ ಆರಂಭವಾಗಲಿದೆ ಎನ್ನುವ ಉಡುಪಿ ಜಿಲ್ಲಾಧಿಕಾರಿಯವರ ಹಳೆಯ ಹೇಳಿಕೆಯ ವಿಡಿಯೋ ಹಲವಾರು ಸೋಷಲ್ ಮೀಡಿಯಾದಲ್ಲಿ ಗೊಂದಲಕ್ಕೆ ಈಡಾಗಿದ್ದು, ಇಂತಹ ಸಮಯದಲ್ಲೂ ಕೆಲವೊಂದು ಕಿಡಿಗೇಡಿಗಳು ಜನಸಾಮಾನ್ಯರ ನೆಮ್ಮದಿಗೆ ಭಂಗ ತರುತ್ತಿದ್ದಾರೆ. ಉಡುಪಿ ಜಿಲ್ಲೆಯ ಪ್ರಜ್ಞಾವಂತ ನಾಗರಿಕರು ದಯವಿಟ್ಟು ಇಂತಹ ಸುಳ್ಳು ಸುದ್ದಿಗಳ ಹಬ್ಬಿಸುವವರ ಸುದ್ದಿಗಳನ್ನು ದಯವಿಟ್ಟು ನಂಬಬೇಡಿ. “ಉಡುಪಿ ಟೈಮ್” ಸಹಿತ ಇತರ ಮಾಧ್ಯಮಗಳು ಉಡುಪಿ ಜಿಲ್ಲಾಧಿಕಾರಿ ಅವರ ಅಧಿಕೃತ ವರದಿಗಳನ್ನು ದಿನ0ಪ್ರತಿ ಪ್ರಕಟಿಸುತ್ತಿದ್ದು, ಅದನ್ನು ಮಾತ್ರ ನಂಬಬೇಕು ಎಂದು “ಉಡುಪಿ ಟೈಮ್ಸ್” ಉಡುಪಿ ಜಿಲ್ಲೆಯ ಪ್ರಜ್ಞಾವಂತ ನಾಗರಿಕರಲ್ಲಿ ವಿನಂತಿ ಮಾಡುತ್ತಿದೆ. ಕೋರನ ಹಾವಳಿಯಿಂದ ವಿಶ್ವವೇ ತತ್ತರಿಸಿ ಹೋಗಿದೆ. ಅದರಲ್ಲೂ ನಮ್ಮ ದೇಶದಲ್ಲಿ ದಿನಪ್ರತಿ ಕೋರೋನ ಪಾಸಿಟಿವ್ ಹೆಚ್ಚಾಗುತ್ತಿದೆ . ಸೇಫ್ ಜೋನ್ ಆಗಿದ್ದ ಉಡುಪಿ ಜಿಲ್ಲೆ ಪ್ರಸ್ತುತ ನೆರೆಯ ದಕ್ಷಿಣ ಕನ್ನಡ ಜಿಲ್ಲೆಯನ್ನು ಕೂಡ ಮೀರಿಸಿ ಹೋಗಿದೆ. ಆದರೆ ಇದರ ನಡುವೆ ದುಷ್ಕರ್ಮಿಗಳ ಸಂತಸಕ್ಕೆ ಉಡುಪಿ ಜಿಲ್ಲೆಯ ನಾಗರಿಕರ ನೆಮ್ಮದಿ ಹಾಳು ಮಾಡುವ ಪ್ರಯತ್ನವೂ ನಡೆಯುತ್ತಿರುವುದು ನಿಜಕ್ಕೂ ದುರಾದೃಷ್ಟ. ದುಷ್ಕರ್ಮಿಗಳೇ ಇಂತಹ ಸಮಯದಲ್ಲಿ ಜಿಲ್ಲೆಯ ಪ್ರಜ್ಞಾವಂತ ಜನರ ಮನಸ್ಥಿತಿಯ ಮೇಲೆ ಆಟವಾಡುವ ಪ್ರಯತ್ನ ಮಾಡಬೇಡಿ ಇದು ಉಡುಪಿ ಟೈಮ್ಸ್ ನ ಕಳಕಳಿಯ ವಿನಂತಿ. |
Good luck. God bless you and your team.