ಗುರುದ್ವಾರದ ಮೇಲಿನ ದಾಳಿ: ಹೊಣೆಹೊತ್ತ ಐಸಿಸ್ ಪ್ರವಾದಿ ಮೊಹಮ್ಮದ್ ನಿಂದನೆಗೆ ಪ್ರತೀಕಾರ

ಕಾಬೂಲ್: ಅಫ್ಘಾನಿಸ್ತಾನದ ಗುರುದ್ವಾರದ ಮೇಲಿನ ದಾಳಿಯ ಹೊಣೆಯನ್ನು ಐಸಿಸ್ ಹೊತ್ತುಕೊಂಡಿದ್ದು, ಇದು ಪ್ರವಾದಿ ಮೊಹಮ್ಮದ್ ಅವರಿಗೆ ಮಾಡಿದ ಅವಮಾನಕ್ಕೆ ಪ್ರತೀಕಾರ ಎಂದು ಹೇಳಿದೆ.

ತನ್ನ ಅಮಾಕ್ ಪ್ರಚಾರ ಸೈಟ್‌ನಲ್ಲಿ ಪೋಸ್ಟ್ ಮಾಡಿದ ಸಂದೇಶದಲ್ಲಿ, ಶನಿವಾರದ ದಾಳಿಯು ಹಿಂದೂಗಳು ಮತ್ತು ಸಿಖ್ಖರನ್ನು ಮತ್ತು ಅಲ್ಲಾಹನ ಸಂದೇಶವಾಹಕರಿಗೆ ಬೆಂಬಲ ನೀಡುವ ಕ್ರಿಯೆಯಲ್ಲಿ ಅವರನ್ನು ರಕ್ಷಿಸಿದ ಧರ್ಮಭ್ರಷ್ಟರನ್ನು ಗುರಿಯಾಗಿಸಿಕೊಂಡಿತ್ತು ಎಂದು ಐಸಿಸ್ ಹೇಳಿದೆ. ತನ್ನ ಹೋರಾಟಗಾರರೊಬ್ಬರು ಕಾಬೂಲ್‌ನಲ್ಲಿ ಹಿಂದೂ ಮತ್ತು ಸಿಖ್ ದೇವಾಲಯಕ್ಕೆ ನುಗ್ಗಿ ಅದರ ಸಿಬ್ಬಂದಿಯನ್ನು ಕೊಂದ ನಂತರ  ಮತ್ತು ಅದರೊಳಗಿದ್ದವರ ಮೇಲೆ ಮೆಷಿನ್ ಗನ್ ಮತ್ತು ಹ್ಯಾಂಡ್ ಗ್ರೆನೇಡ್‌ಗಳಿಂದ ದಾಳಿ ನಡೆಸಲಾಯಿತು ಎಂದು ಐಸಿಸ್ ಹೇಳಿದೆ.

ಗುರುದ್ವಾರದಲ್ಲಿ ನಿನ್ನೆ ದಾಳೆ ವೇಳೆ ಇಬ್ಬರು ಸಾವನ್ನಪ್ಪಿದ್ದು ಕನಿಷ್ಠ ಏಳು ಮಂದಿ ಗಾಯಗೊಂಡಿದ್ದಾರೆ.ಆಂತರಿಕ ಸಚಿವಾಲಯದ ವಕ್ತಾರ ಅಬ್ದುಲ್ ನಫಿ ಟಾಕೋರ್ ಅವರು ಗುರುದ್ವಾರವನ್ನು ಪ್ರವೇಶಿಸಿದಾಗ ದಾಳಿಕೋರರು ಗ್ರೆನೇಡ್ ಎಸೆದು ಬೆಂಕಿ ಹೊತ್ತಿಸಿದರು ಎಂದು ದಾಳಿಯ ಕುರಿತು ಹೇಳಿದ್ದಾರೆ.

ಭಾರತದಿಂದ ಅಫ್ಘಾನಿಸ್ತಾನಕ್ಕೆ ಮಾನವೀಯ ನೆರವು ವಿತರಣೆಯ ಕುರಿತು ಚರ್ಚಿಸಲು ಭಾರತೀಯ ನಿಯೋಗವು ಕಾಬೂಲ್‌ಗೆ ಭೇಟಿ ನೀಡಿದ ನಂತರ ಈ ದಾಳಿ ನಡೆದಿದೆ.ಕಳೆದ ವರ್ಷ ಆಗಸ್ಟ್ ನಲ್ಲಿ ತಾಲಿಬಾನ್ ಅಧಿಕಾರವನ್ನು ವಶಪಡಿಸಿಕೊಂಡ ನಂತರ ಮುಚ್ಚಲಾಗಿದ್ದ ಭಾರತೀಯ ರಾಯಭಾರ ಕಚೇರಿಯನ್ನು ಮತ್ತೆ ತೆರೆಯುವ ಸಾಧ್ಯತೆಯ ಬಗ್ಗೆ ನಿಯೋಗವು ತಾಲಿಬಾನ್ ಅಧಿಕಾರಿಗಳೊಂದಿಗೆ ಚರ್ಚಿಸಿದೆ ಎಂದು ಆಫ್ಘಾನ್ ಮತ್ತು ಭಾರತೀಯ ಮಾಧ್ಯಮ ವರದಿಗಳು ತಿಳಿಸಿವೆ.

ಅಮಾನತುಗೊಂಡಿರುವ ಬಿಜೆಪಿ ನಾಯಿ ನೂಪುರ್ ಶರ್ಮಾ ಅವರು ಈ ತಿಂಗಳ ಆರಂಭದಲ್ಲಿ ಪ್ರವಾದಿಯವರ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆಯಿಂದ ಭಾರತದ ವಿರುದ್ಧ ಹಲವಾರು ದೇಶಗಳಲ್ಲಿ ಪ್ರತಿಭಟನೆಗಳಿಗೆ ಕಾರಣವಾಯಿತು.

Leave a Reply

Your email address will not be published. Required fields are marked *

error: Content is protected !!