ಕೊರೊನಾ ಮುಕ್ತ ಭಾರತಕ್ಕೆ ಕೈ ಜೋಡಿಸಿ: ಡಾ.ಯಶೋದ ಐತಾಳ್‌

ಹೆಬ್ರಿ : ಕೊರೊನಾದ ಬಗ್ಗೆ ಯಾರೂ ಆತಂಕ ಪಡುವ ಅಗತ್ಯ ಇಲ್ಲ. ಜಾಗೃತಿ ಅಗತ್ಯ, ಎಲ್ಲರೂ ಮುಂಜಾಗೃತೆ ವಹಿಸಿ ಕಡ್ಡಾಯವಾಗಿ ಮಾಸ್ಕ್‌ ಧರಿಸಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಬಂದರೆ ನಾವೆಲ್ಲ ಸೇರಿ ಭಾರತವನ್ನು ಕೊರೊನಾ ಮುಕ್ತವಾಗಿ ಮಾಡಬಹುದು ಎಂದು ಮುಂಬೈಯ ಕೆಇಎಂ ಆಸ್ಪತ್ರೆಯಲ್ಲಿ ಕೊರೊನಾ ವಾರಿಯಸ್ð ಆಗಿ ಸೇವೆ ಸಲ್ಲಿಸಿದ ಹೆಬ್ರಿ ರಾಘವೇಂದ್ರ ಜನರಲ್‌ ಆಸ್ಪತ್ರೆಯ ಆಡಳಿತ ನಿದೇðಶಕರಾಸದ ಡಾ.ರಾಮಚಂದ್ರ ಐತಾಳ್ ಮತ್ತು ಡಾ.ಭಾಗðವಿ ಐತಾಳ್‌ ದಂಪತಿಯ ಪುತ್ರಿ ಡಾ.ಯಶೋದ ಆರ್.‌ ಐತಾಳ್‌ ಹೇಳಿದರು.


ಅವರು ಸೋಮವಾರ ಹೆಬ್ರಿ ಸಿಟಿ ಲಯನ್ಸ್‌ ಕ್ಲಬ್‌ ಸ್ಥಾಪಕ ಅಧ್ಯಕ್ಷ ಎಚ್.‌ ದಿನಕರ ಪ್ರಭು ಪರಿಕಲ್ಪನೆಯಲ್ಲಿ ಲಯನ್ಸ್‌ ಕ್ಲಬ್‌ ಸಹಯೋಗದಲ್ಲಿ ನಡೆದ ಕೊರೊನಾ ವಾರಿಯಸ್‌ð ಡಾ.ಯಶೋದ ಆರ್ ಐತಾಳ್‌ ಭವ್ಯ ಸ್ವಾಗತ ಮತ್ತು ಸನ್ಮಾನ ಕಾಯð ಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು.


ಮುಂಬೈಯ ಕೆಇಎಂ ಆಸ್ಪತ್ರೆಯಲ್ಲಿ ವೈಧ್ಯಕೀಯ ಎಂಡಿ ಪದವಿ ಮಾಡುತ್ತಿರುವ ನಮ್ಮ ತಂಡಕ್ಕೆ ಕೊರೊನಾ ವಾರಿಯಸ್‌ð ಆಗಿ ಕತðವ್ಯಕ್ಕೆ ನಿಯೋಜನೆ ಮಾಡುತ್ತಾರೆ ಎಂಬ ಕಲ್ಪನೆಯೇ ಇರಲಿಲ್ಲ. ತಕ್ಷಣವೇ ಕತð ವ್ಯ ಮಾಡಲೇ ಬೇಕು ಎಂಬ ಆದೇಶ ಬಂತು. ಆರಂಭದಲ್ಲಿ ತುಂಬಾ ಭಯವಾಯಿತು. ಮತ್ತೆ ಮತ್ತೇ ಅಭ್ಯಾಸವಾಯಿತು. ಜನರ ಆರೋಗ್ಯದ ಸೇವೆ ಮಾಡಿದ ಧನ್ಯತಾ ಭಾವ ಮೂಡಿದೆ. ಈಗ ಹೆಮ್ಮೆ ಆಗುತ್ತಿದೆ. ಕೊರೊನ ವಾರಿಯಸ್‌ð ಆಗಿ ನೇಮಿಸಿ ಸಕಲ ವ್ಯವಸ್ಥೆಯನ್ನು ಮಾಡಿದ ಮಹಾರಾಷ್ಟ್ರ ಸಕಾðರಕ್ಕೆ ನನ್ನ ದನ್ಯವಾದಗಳು. ಕೊರೊನಾ ವಾರಿಯಸ್‌ð ಆಗಿ ೧೦೦ ದಿನಗಳ ಸತತ ಸೇವೆ ಮಾಡಿ ಕೇವಲ ೪ ದಿನದ ರಜೆಯಲ್ಲಿ ಊರಿಗೆ ಬಂದ ನನ್ನನ್ನು ಪ್ರೀತಿಯಿಂದ ಸ್ವಾಗತಿಸಿ ಗೌರವಿಸಿದ್ದಕ್ಕೆ ಋಣಿಯಾಗಿದ್ದೇನೆ, ಹುಟ್ಟೂರಿನ ಗೌರವ ಇನ್ನಷ್ಟು ಸೇವೆ ಮಾಡಲು ಪ್ರೇರಣೆ ಸಿಕ್ಕಿದೆ ಎಂದು ಡಾ.ಯಶೋದ ಐತಾಳ್‌ ಕೃತಜ್ಞತೆ ಸಲ್ಲಿಸಿದರು.


ಡಾ. ಯಶೋದ ಐತಾಳ್‌ ತಾಯಿ ಹೆಬ್ರಿ ಸಿಟಿ ಲಯನ್ಸ್‌ ಕ್ಲಬ್‌ ಅಧ್ಯಕ್ಷೆ ಭಾಗðವಿ ಐತಾಳ್‌ ಮಾತನಾಡಿ ಮಗಳ ಸೇವೆಯನ್ನು ಗುರುತಿಸಿ ಭವ್ಯ ಸ್ವಾಗತ ನೀಡಿ ಗೌರಸಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿ ಮಗಳ ಸೇವೆಗೆ ಹುಟ್ಟೂರಿನಲ್ಲಿ ಪ್ರೀತಿಯ ಗೌರವ ಸಿಕ್ಕಿದೆ ಎಂದರು.
ಕಾಯðಕ್ರಮದ ರೂವಾರಿ ಹೆಬ್ರಿ ಸಿಟಿ ಲಯನ್ಸ್‌ ಕ್ಲಬ್‌ ಸ್ಥಾಪಕ ಅಧ್ಯಕ್ಷ ಎಚ್.‌ ದಿನಕರ ಪ್ರಭು ಮಾತನಾಡಿ ವೈಧ್ಯಕೀಯ ವಿದ್ಯಾಥಿðಯಾದರೂ ದೇಶದೆಲ್ಲೆಡೆ ಜನ ಆತಂಕದಲ್ಲಿರುವಾಗ ವಾರಿಯಸ್‌ð ಆಗಿ ಸೇವೆ ಸಲ್ಲಿ ನಮಮ್ಮೂರಿನ ಕೀತಿðಯನ್ನು ಯಶೋದ ಐತಾಳ್‌ ಮುಂಬಯಿಯಲ್ಲಿ ಬೆಳಗಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಲಯನ್ಸ್‌ ಕ್ಲಬ್‌ ಸಂಪುಟ ಕಾಯðದಶಿð ಹೆಬ್ರಿ ಟಿ.ಜಿ.ಆಚಾಯð ಅಭಿನಂದಿಸಿ ಮಾತನಾಡಿ ಹೆಬ್ರಿಯಲ್ಲಿ ಐತಾಳರ ಕುಟುಂಬವೇ ವೈಧ್ಯರ ಕುಟುಂಬ. ಮೂಲಕ ವೈಧ್ಯಕೀಯ ಕ್ಷೇತ್ರದಲ್ಲಿ ನಾಡಿಗೆ ಐತಾಳರ ಕುಟುಂಬ ಇನ್ನಷ್ಟು ಆರೋಗ್ಯದ ಸೇವೆ ನೀಡುವಂತಾಗಲಿ ಎಂದು ಆಶಿಸಿದರು.


ಆಯುಷ್‌ ಫೆಡರೇಶನ್‌ ಕಾಕðಳ ಶಾಖೆಯ ಅಧ್ಯಕ್ಷ ಡಾ.ರವಿಪ್ರಸಾದ್‌ ಹೆಗ್ಡೆ, ಹೆಬ್ರಿ ಜೇಸಿಐ ಅಧ್ಯಕ್ಷೆ ಸುನೀತಾ ಎ.ಹೆಗ್ಡೆ ಡಾ.ಯಶೋದ ಐತಾಳ್‌ ಅವರನ್ನು ಗೌರವಿಸಿದರು. ಹೆಬ್ರಿ ಸಿಟಿ ಲಯನ್ಸ್‌ ಕ್ಲಬ್‌ ಪೂವಾðಧ್ಯಕ್ಷರಾದ ಎಚ್.ರಮೇಶ್‌ ಆಚಾಯð, ಬೇಳಂಜೆ ಹರೀಶ ಪೂಜಾರಿ, ಲಯನ್ಸ್‌ ಕ್ಲಬ್‌ ಸದಸ್ಯರು, ಹೆಬ್ರಿ ರಾಘವೇಂದ್ರ ಜನರಲ್‌ ಆಸ್ಪತ್ರೆಯ ಸಿಬ್ಬಂದ್ದಿ, ಕೊರೊನಾ ವಾರಿಯಸ್‌ð ಡಾ.ಯಶೋದ ಐತಾಳ್‌ ತಂದೆ ಹೆಬ್ರಿ ರಾಘವೇಂದ್ರ ಜನರಲ್‌ ಆಸ್ಪತ್ರೆಯ ಆಡಳಿತ ನಿದೇðಶಕರಾದ ಡಾ.ರಾಮಚಂದ್ರ ಐತಾಳ್, ಅಣ್ಣ ಡಾ.ಕಾತಿðಕ್‌ ಐತಾಳ್, ರಾಜಸ್ಥಾನದ ಗಣೇಶ್‌ ಖೆಮನಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!