ಎನ್ಟಿಪಿಸಿ ಉಷ್ಣ ವಿದ್ಯುತ್ ಸ್ಥಾವರದದಲ್ಲಿ ಸ್ಫೋಟ
ವಿಜಯಪುರ, ಜೂ.10: ನಿಡಗುಂದಿ ಪಟ್ಟಣದ ಕೂಡಗಿಯಲ್ಲಿರುವ ಎನ್ಟಿಪಿಸಿ ಉಷ್ಣ ವಿದ್ಯುತ್ ಸ್ಥಾವರದದಲ್ಲಿ ಇಂದು ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದ್ದು ಸ್ಫೋಟ ಸಂಭವಿಸಿದೆ.
ಸ್ಥಾವರದ ಟಿಪಿ-2 ಕಲ್ಲಿದ್ದಲು ಘಟಕದಲ್ಲಿ ಸ್ಪೋಟ ಉಂಟಾಗಿದ್ದು, ಘಟನೆಯಲ್ಲಿ ಯಾರಿಗೂ ಅಪಾಯವಾಗಿಲ್ಲ ಎನ್ನಲಾಗಿದೆ.
ಕಲ್ಲಿದ್ದಲು ಸಾಗಾಟದ ಯಂತ್ರ ಚಾಲನೆಯಲ್ಲಿರುವಾಗ ಬೇರಿಂಗ್ ತಿರುಗುತ್ತ ಶಾಖೋತ್ಪನ್ನಗೊಂಡು ರಬ್ಬರ್ ಬೆಲ್ಸ್ ಗೆ ಬೆಂಕಿ ತಗಲಿದ್ದರಿಂದ ಸ್ಫೋಟ ಸಂಭವಿಸಿದೆ. ಈ ವೇಳೆ ತಕ್ಷಣ ಸ್ಥಾವರ ವ್ಯಾಪ್ತಿಯ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ ಎಂದು ಮಾಧ್ಯಮದ ವರದಿಯಲ್ಲಿ ತಿಳಿಸಲಾಗಿದೆ.