ಹೆಜಮಾಡಿಯ ವ್ಯಕ್ತಿ ಅಬುಧಾಬಿಯಲ್ಲಿ ಕೊರೊನಾ ಸೋಂಕಿಗೆ ಬಲಿ
ಪಡುಬಿದ್ರಿ: ಅಬುಧಾಬಿಯಲ್ಲಿ ಉದ್ಯೋಗಿಯಾಗಿದ್ದ ಹೆಜಮಾಡಿಯ 44 ವರ್ಷ ಪ್ರಾಯದ ವ್ಯಕ್ತಿಯೊಬ್ಬರು ಕೋವಿಡ್ 19 ಗೆ ಭಾನುವಾರ ಮೃತಪಟ್ಟಿದ್ದಾರೆ.
ಹೆಜಮಾಡಿ ಬ್ರಹ್ಮ ಸ್ಥಾನ ಬಳಿಯ ವ್ಯಕ್ತಿ ಕಳೆದ 8 ವರ್ಷಗಳಿಂದ ಅಬುಧಾಬಿಯಲ್ಲಿ ಉದ್ಯೋಗ ಮಾಡಿಕೊಂಡಿದ್ದರು. , ಲಾಕ್‌ಡೌನ್‌ನಿಂದಾಗಿ ಊರಿಗೆ ಬರಲಾಗದೆ ಉಳಿದಿದ್ದರು. ಉದ್ಯೋಗ ಮಾಡಿಕೊಂಡಿದ್ದ ವೇಳೆ ಎರಡು ಬಾರಿ ಗಂಟಲು ಸ್ರಾವ ಪರೀಕ್ಷೆ ನಡೆಸಿದ್ದ ಸಂದರ್ಭ ನೆಗೆಟಿವ್ ವರದಿ ಬಂದಿತ್ತು.
ಮೂರನೇ ಬಾರಿಯ ಪರೀಕ್ಷೆಯಲ್ಲಿ ಅವರಿಗೆ ಪಾಸಿಟಿವ್ ಬಂದಿದ್ದು ಅಲ್ಲಿನ ಸರಕಾರಿ ಸ್ವಾಮ್ಯದ ಶೇಖ್ ಖಲೀಫಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಕಳೆದೆರಡು ದಿನಗಳಿಂದ ಕಾಯಿಲೆ ಉಲ್ಬಣಿಸಿದ್ದು, ಅವರನ್ನು ಐಸಿಯುಗೆ ಶಿಫ್ಟ್ ಮಾಡಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಅವರ ಪತ್ನಿ ಹಾಗೂ ಪುತ್ರಿ ಪೂನಾದಲ್ಲಿದ್ದಾರೆ. ಅಲ್ಲಿಂದ ಮೃತದೇಹ ತರಲು ಅಸಾಧ್ಯವಾಗಿದ್ದು, ಮಂಗಳವಾರ ಅಬುಧಾಬಿಯಲ್ಲೇ ಗೆಳೆಯರು ಮತ್ತು ಸಹೋದ್ಯೋಗಿಗಳ ಸಮ್ಮುಖ ಅಂತ್ಯಕ್ರಿಯೆ ನಡೆಯಲಿದೆ.
Very sad.let almighty give strength to his bereaved family