ರಾಜ್ಯಸಭೆ ಚುನಾವಣೆ: 4ನೇ ಸ್ಥಾನಕ್ಕಾಗಿ ಮೂರು ಪಕ್ಷಗಳು ಸೆಣೆಸಾಟ- ಸಿದ್ದರಾಮಯ್ಯ ಪಟ್ಟಿಗೆ ಮಣಿದ ಕಾಂಗ್ರೆಸ್ ಹೈಕಮಾಂಡ್!

ಬೆಂಗಳೂರು: ರಾಜ್ಯಸಭೆ ಚುನಾವಣೆಯ ನಾಲ್ಕನೇ ಸ್ಥಾನಕ್ಕಾಗಿ ಮೂರು ಪಕ್ಷಗಳು ಸೆಣೆಸಾಟ ನಡೆಸುತ್ತಿವೆ. ಮೂರು ಪ್ರಮುಖ ಪಕ್ಷಗಳು ಕೊನೆಯವರೆಗೂ ಹೋರಾಟ ನಡೆಸಲು ನಿರ್ಧರಿಸಿವೆ.  ನಾಲ್ಕನೇ ಸೀಟು ಗೆಲ್ಲಲು ಅವಶ್ಯಕ ವಾಗಿರುವ 45 ಮತಗಳು ಯಾವ ಪಕ್ಷಕ್ಕೂ ಇಲ್ಲ, ಆದರೆ ಚುನಾವಣೆ ಮಾತ್ರ ನಾಟಕೀಯವಾಗಿ ಅಂತ್ಯವಾಗಲಿದೆ. ಆದರೆ ಆಡಳಿತರೂಡ ಬಿಜೆಪಿ ಗೆಲುವಿಗೆ ತೀರಾ ಸಮೀಪದಲ್ಲಿದೆ.

ಶುಕ್ರವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿತ್ತು. ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರು ವಾಕ್ಸಮರದ ನಡುವೆಯೇ ನಾಮಪತ್ರ ಹಿಂಪಡೆಯುವ ಪ್ರಯತ್ನಗಳು ನಡೆದವು. ಯಾವುದೇ ಕಾರಣಕ್ಕೂ ಕಾಂಗ್ರೆಸ್‌ನ 2ನೇ ಅಭ್ಯರ್ಥಿಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಸ್ಪಷ್ಟಪಡಿಸಿದರು. ಅತ್ತ ಮಾಜಿ ಪ್ರಧಾನಿ ದೇವೇಗೌಡರ ಒತ್ತಾಸೆಯಂತೆ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಹೈಕಮಾಂಡ್‌ ಮೂಲಕ ಮನ್ಸೂರ್‌ ಅಲಿ ಖಾನ್‌ ಅವರ ನಾಮಪತ್ರ ವಾಪಸ್‌ಗೆ ಪ್ರಯತ್ನಿಸಿದರು. ಅಲ್ಲದೆ, ದೇವೇಗೌಡರೂ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಜತೆ ಮಾತುಕತೆ ನಡೆಸಿದ್ದು, ಕಾಂಗ್ರೆಸ್‌ ಅಭ್ಯರ್ಥಿ ವಾಪಸ್‌ ತೆಗೆದುಕೊಳ್ಳುತ್ತಾರೆ ಎಂದೇ ಭಾವಿಸಲಾಗಿತ್ತು. ಮಧ್ಯಾಹ್ನ 3 ಗಂಟೆ ವರೆಗೂ ಕಾದರೂ ಪ್ರಯೋಜನವಾಗಿಲ್ಲ.

ಕಾಂಗ್ರೆಸ್ ತನ್ನ ಅಭ್ಯರ್ಥಿಗಳಿಗೆ ಮತ ಹಾಕುವಂತೆ ಈಗಾಗಲೇ ಶಾಸಕರಿಗೆ ವಿಪ್ ಜಾರಿ ಮಾಡಿದೆ. ಎಲ್ಲಾ ಪಕ್ಷಗಳು ಕೂಡ ವಿಪ್ ಜಾರಿ ಮಾಡುವ ನಿರೀಕ್ಷೆಯಿದ್ದು, ರಹಸ್ಯ ಮತದಾನದ ಮೂಲಕ ಮತದಾನವಾಗಿದ್ದರೂ, ಸದಸ್ಯರು ತಮ್ಮ ಮತಗಳನ್ನು ಪಕ್ಷಕ್ಕೆ ತೋರಿಸಬೇಕು. ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಮಗೆ ಹೈಕಮಾಂಡ್‌ ನಿಂದಲೇ ಸೂಚನೆ ಸಿಕ್ಕಿದ್ದು. ಈ‌ ನಿಟ್ಟಿನಲ್ಲಿ ಕಾಂಗ್ರೆಸ್ ಎರಡನೇ ಅಭ್ಯರ್ಥಿಯನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ. ನಾವು ಗೆಲ್ಲುತ್ತೇವೆ ಎಂದೇ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ. ಮತಗಳ ಕೊರತೆ ಮೂರೂ ಪಕ್ಷದವರಿಗಿದೆ. ಬಿಜೆಪಿಗೂ ಮೂರನೇ ಅಭ್ಯರ್ಥಿ ಗೆಲ್ಲಿಸಲು ಬೇಕಾದ ಮತಗಳಿವೆಯಾ..? ಜೆಡಿಎಸ್‌ಗೆ ಇದೆಯಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಮೂರು ಪಕ್ಷಗಳಿಗೆ ಮತಗಳ ಕೊರತೆ ಇದೆ. ಆದರೆ ನಮಗೆ ಗೆಲ್ಲುವ ವಿಶ್ವಾಸವಿದೆ. ಎರಡನೇ ಪ್ರಾಶಸ್ತ್ಯದ ಮತಗಳು ನಮ್ಮ ಬಳಿಯೂ ಇವೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಎಷ್ಟು ಮತಗಳನ್ನು ಪಡೆಯುತ್ತದೆ ಎಂದು ಪ್ರಶ್ನಿಸಿದ ಅವರು, ನಮಗೆ ಬೇಕಾದ ಮತಗಳನ್ನು ನಾವು ಪಡೆಯುತ್ತೇವೆ, ನಮಗೆ 71 ಎರಡನೇ ಪ್ರಾಶಸ್ತ್ಯದ ಮತಗಳಿವೆ. ಎರಡನೇ ಅಭ್ಯರ್ಥಿ ಮನ್ಸೂರ್ ಖಾನ್ ಅವರನ್ನು ಕಣಕ್ಕಿಳಿಸುವುದು ಹೈಕಮಾಂಡ್ ನಿರ್ಧಾರ. ಗೆಲ್ಲುತ್ತೇವೆ ಎಂಬ ನಂಬಿಕೆಯಿಂದ ಅವರನ್ನು ಕಣಕ್ಕಿಳಿಸಿದ್ದೇವೆ ಎಂದು ತಿಳಿಸಿದ್ದಾರೆ.

ಇದರೊಂದಿಗೆ ಅಡ್ಡ ಮತದಾನದ ಭೀತಿ ಹೆಚ್ಚಿದೆ. ಕಾಂಗ್ರೆಸ್ ತನ್ನ ಗೆಲುವಿಗೆ ಅಡ್ಡ ಮತದಾನದ ನಿರೀಕ್ಷೆಯಲ್ಲಿದೆ, ಕೋಲಾರ ಶಾಸಕ ಶ್ರೀನಿವಾಸ್ ಗೌಡ, ಗುಬ್ಬಿ ಶಾಸಕ ಶ್ರೀನಿವಾಸ್, ಜಿ ಟಿ ದೇವೇಗೌಡ ಮತ್ತು ಇತರ ಅತೃಪ್ತ ನಾಯಕ ರಿಂದ ಐದು ಜೆಡಿಎಸ್ ಅಭ್ಯರ್ಥಿಗಳ ಮತಗಳ ನಿರೀಕ್ಷೆಯಲ್ಲಿದೆ.  ಕಳೆದ ಬಾರಿ ಎಂಟು ಜೆಡಿಎಸ್ ಮುಖಂಡರು ಅಡ್ಡ ಮತದಾನ ಮಾಡಿದ್ದರು. 69 ಶಾಸಕರನ್ನು ಹೊಂದಿರುವ ಕಾಂಗ್ರೆಸ್‌ಗೆ ಸ್ವತಂತ್ರ ಶರತ್ ಬಚ್ಚೇಗೌಡ ಸೇರ್ಪಡೆ ಗೊಂಡಿದ್ದಾರೆ ಮತ್ತು 71 ಶಾಸಕರಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿಕೊಂಡಂತೆ ಎಚ್ ನಾಗೇಶ್ ಅವರ ಬೆಂಬಲವನ್ನು ಬಯಸಿದ್ದಾರೆ.

ಬಿಜೆಪಿ 120 ಶಾಸಕರನ್ನು ಹೊಂದಿದ್ದು, ಇಬ್ಬರು ಸ್ವತಂತ್ರ ಶಾಸಕರಾದ ಮಹೇಶ್ ಮತ್ತು ನಾಗೇಶ್ ಮೇಲೆ ಅವಲಂಬಿತವಾಗಿದೆ. ಜೆಡಿಎಸ್ 32 ಮತಗಳನ್ನು ಹೊಂದಿದೆ. ಯಾವ ಪಕ್ಷದ ಅಭ್ಯರ್ಥಿ ರಾಜ್ಯಸಭೆಗೆ ಹೋಗಲಿದ್ದಾರೆ ಎಂಬುದು ಜೂನ್ 19 ರಂದು ನಿರ್ಧರವಾಗಲಿದೆ

Leave a Reply

Your email address will not be published. Required fields are marked *

error: Content is protected !!