ಕುಂದಾಪುರ: ಯುವತಿ ಆತ್ಮಹತ್ಯೆ ಪ್ರಕರಣ-ಲವ್ ಜಿಹಾದ್ ಆರೋಪ
ಕುಂದಾಪುರ: ಉಪ್ಪಿನಕುದ್ರು ಮೂಲದ ಶಿಲ್ಪಾ ದೇವಾಡಿಗ ಎಂಬ ಹಿಂದು ಯುವತಿ ತಾಲ್ಲೂಕಿನ ಕೋಟೇಶ್ವರ ಸಮೀಪದ ಮೂಡುಗೋಪಾಡಿ ನಿವಾಸಿ ಅಜೀಜ್ (32) ಎಂಬಾತನ ಕಾಮದಾಟಕ್ಕೆ ಬಲಿಯಾಗಿದ್ದಾಳೆ.
ಹಂಗಳೂರಿನ ಸಲ್ಮಾ (30) ಎಂಬ ಮುಸ್ಲಿಂ ಯುವತಿಯನ್ನು ಐದಾರು ವರ್ಷದ ಹಿಂದೆ ವಿವಾಹವಾಗಿದ್ದ ಅಜೀಜ್ ತಲ್ಲೂರಿನ ಜವಳಿ ಅಂಗಡಿಯಲ್ಲಿ ಉದ್ಯೋಗಕ್ಕಿದ್ದ ಶಿಲ್ಪಾಳನ್ನು 4 ವರ್ಷಗಳ ಹಿಂದೆ ಪ್ರೀತಿಯೆಂದು ಪುಸಲಾಯಿಸಿದ್ದ, ನಂತರದ ದಿನಗಳಲ್ಲಿ ತನ್ನ ಕಾಮದ ತೃಷೆ ತೀರಿಸಿಕೊಳ್ಳುವುದಕ್ಕಾಗಿ ವಾಟ್ಸಾಪ್ ಮೂಲಕ ಯುವತಿಗೆ ಬಣ್ಣಬಣ್ಣದ ಸಂದೇಶ ಕಳುಹಿಸಿ, ಕೋಟೇಶ್ವರ ಸಮೀಪದ ತನ್ನ ಪ್ಲಾಟ್ ಗೆ ಕರೆಯಿಸಿಕೊಳ್ಳುತ್ತಿದ್ದ.
ಈತನ್ಮದ್ಯೆ ಇಬ್ಬರ ನಡುವೆ ಜಗಳವೂ ಆಗುತ್ತಿದ್ದು ಆರೋಪಿ ಅಜೀಝ್ ಇತ್ತೀಚೆಗೆ ಆಕೆ ಕೆಲಸ ಮಾಡುತ್ತಿದ್ದ ಬಟ್ಟೆಯಂಗಡಿಗೆ ಬಂದು ನಿಂದಿಸಿದ್ದ. ಪ್ರೀತಿಸಿ ಮದುವೆಯಾಗುವ ಭರವಸೆ ನೀಡಿ ಕೊನೆಗೆ ಮದುವೆಯಾಗುವುದಿಲ್ಲ ಎಂದು ಮೋಸ ಮಾಡಿದ್ದಲ್ಲದೆ ಆರೋಪಿಗಳಾದ ಗಂಡ-ಹೆಂಡತಿ ಶಿಲ್ಪಾಳಿಗೆ ಬೈದು ಆತ್ಮಹತ್ಯೆಗೆ ಪ್ರಚೋದನೆ ಮಾಡಿದ್ದಾರೆ.
ಇದರಿಂದ ನೊಂದ ಆಕೆ ಮೇ.23 ರಾತ್ರಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಆಕೆಯನ್ನು ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಈ ವೇಳೆ ಮಾತನಾಡುವ ಸ್ಥಿತಿಯಲ್ಲಿದ್ದಾಗ ಆರೋಪಿಗಳಾದ ಅಜೀಝ್ ಹಾಗೂ ಸಲ್ಮಾ ಮಾನಸಿಕ ಹಿಂಸೆ ನೀಡಿ, ಮರ್ಯಾದೆ ತೆಗೆದಿದ್ದರಿಂದ ಈ ನಿರ್ಧಾರ ತೆಗೆದುಕೊಂಡಿದ್ದಾಗಿ ತಿಳಿಸಿದ್ದಳು ಎಂದು ಆಕೆ ಸಹೋದರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ತಲ್ಲೂರು ಗ್ರಾಮಪಂಚಾಯತ್ ಉಪಾಧ್ಯಕ್ಷ ಗಿರೀಶ್, ಸದಸ್ಯರಾದ ರಾಧಾಕೃಷ್ಣ ಶೇರಿಗಾರ್, ಮಾಜಿ ತಾ.ಪಂ ಸದಸ್ಯ ಕರಣ್ ಪೂಜಾರಿ, ಪ್ರಮುಖರಾದ ಸದಾನಂದ ಉಪ್ಪಿನಕುದ್ರು, ಸುಧಾಕರ ಶೆಟ್ಟಿ ನೆಲ್ಯಾಡಿ, ಪಕ್ಷ ಹಾಗೂ ಸಂಘಟನೆ ಪದಾಧಿಕಾರಿಗಳು ಇದ್ದರು.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಉಪ್ಪಿನಕುದ್ರು ನಿವಾಸಿ ಶಿಲ್ಪ ಆತ್ಮಹತ್ಯೆ ಹಿಂದೆ “ಲವ್ ಜಿಹಾದ್” ಷಡ್ಯಂತ್ರ- ವಿಶ್ವ ಹಿಂದು ಪರಿಷದ್ ಆರೋಪ
ಉಪ್ಪಿನಕುದ್ರು ನಿವಾಸಿ ಶಿಲ್ಪ ಆತ್ಮಹತ್ಯೆ ಗೆ ಕಾರಣರಾದ ಅಜೀಜ್ ಮತ್ತು ಆತನ ಹೆಂಡತಿ ಸಲ್ಮಾ ಅಜೀಜ್ ಮೇಲೆ ಕಠಿಣ ಕ್ರಮವನ್ನು ಪೊಲೀಸ್ ಇಲಾಖೆ ಜರುಗಿಸಬೇಕು. ಇದರ ಹಿಂದೆ ಇರುವ ವ್ಯವಸ್ಥಿತ ಷಡ್ಯಂತ್ರವನ್ನು ಬಯಲು ಗೊಳಿಸಬೇಕು. ಹಿಂದು ಸಮಾಜದ ಹುಡುಗಿಯರನ್ನು ಮುಸಲ್ಮಾನ್ ಯುವಕರು ಪ್ರೀತಿ ಪ್ರೇಮದ ನಾಟಕವಾಡಿ ಅಕ್ರಮ ಚಟುವಟಿಕೆಗೆ ಬಳಸಿಕೊಂಡು ಅವರ ಬದುಕಿನಲ್ಲಿ ಚೆಲ್ಲಾಟವಾಡುತ್ತಿರುವ ಜಿಹಾದಿ ಯುವಕರ ಬಗ್ಗೆ ಹಿಂದು ಸಮಾಜದ ಯುವತಿಯರು ಜಾಗ್ರತರಾಗಿರಬೇಕು. ಲವ್ ಜಿಹಾದ್ ನ ವಿರುದ್ದಹೋರಾಟಕ್ಕೆ ಹಿಂದು ಸಮಾಜ ಒಟ್ಟಾಗಿ ಕೈಜೋಡಿಸಬೇಕು ಎಂದು ವಿಶ್ವ ಹಿಂದು ಪರಿಷದ್ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್ ತಿಳಿದರು.