ಉಡುಪಿ: ಆಚಾರ್ಯಾಸ್ ಏಸ್ ಸಂಸ್ಥೆಯ ಅನುಷ್ಕಾ ಶೆಟ್ಟಿ ರಾಜ್ಯಕ್ಕೆ 10ನೇ ರಾಂಕ್
ಉಡುಪಿ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ಕೃಷ್ಟ ಗುಣಮಟ್ಟದ ತರಬೇತಿ ಆಯೋಜಿಸುತ್ತಿರುವ ಉಡುಪಿಯ ಆಚಾರ್ಯಾಸ್ ಏಸ್ ಸಂಸ್ಥೆಯಲ್ಲಿ ತರಬೇತಿ ಪಡೆದ ಕುಮಾರಿ ಅನುಷ್ಕಾ ಶೆಟ್ಟಿ ಈ ಭಾರಿಯ 10 ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ 10ನೇ ರಾಂಕ್ ಗಳಿಸಿರುತ್ತಾಳೆ.
ಆಚಾರ್ಯಾಸ್ ಏಸ್ ಸಂಸ್ಥೆಯಲ್ಲಿ ಜರಗುತ್ತಿರುವ ನಿರಂತರ ತರಬೇತಿ ಹಾಗೂ ವೈವಿಧ್ಯಮಯ ಕಾರ್ಯಾಗಾರಗಳಲ್ಲಿ ಸುಮಾರು ಒಂದು ವರ್ಷಗಳ ಕಾಲ ಪಾಲ್ಗೊಂಡಿದ್ದ ಕುಮಾರಿ ಅನುಷ್ಕಾ ಶೆಟ್ಟಿ ಈ ಭಾರಿಯ ಎಸ್ ಎಸ್ ಎಲ್ ಸಿಯ ಪಬ್ಲಿಕ್ ಪರೀಕ್ಷೆಯಲ್ಲಿ 625ರಲ್ಲಿ 615 ಅಂಕ ಪಡೆದು ರಾಜ್ಯಕ್ಕೆ 10ನೇ ಸ್ಥಾನವನ್ನು ಅಲಂಕರಿಸಿದ್ದಾಳೆ. ಹಾಗೂ ಇನ್ನೋರ್ವ ವಿದ್ಯಾರ್ಥಿನಿ ನವ್ಯಾ ಹೆಗ್ಡೆ ವಿಜ್ಞಾನ ವಿಭಾಗದಲ್ಲಿ ಗರಿಷ್ಠ ಅಂಕವನ್ನು ಗಳಿಸಿರುತ್ತಾಳೆ.
ಆಚಾರ್ಯಾಸ್ ಏಸನಲ್ಲಿ ತರಬೇತಿ ಪಡೆದ ಹತ್ತನೇ ತರಗತಿಯ ಎಲ್ಲಾ ಮಕ್ಕಳು ಉತ್ಕೃಷ್ಟ ಅಂಕಗಳೊಂದಿಗೆ ತೇರ್ಗಡೆಯಾಗುವ ಮೂಲಕ ಏಸ್ ಸಂಸ್ಥೆಯು ಮತ್ತೊಮ್ಮೆ ಶೇಕಡಾ ನೂರು ಫಲಿತಾಂಶದ ಹೆಗ್ಗಳಿಕೆಗೆ ಪಾತ್ರವಾಗಿದೆ. ಉತ್ತಮ ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳನ್ನು ಸಂಸ್ಥೆಯ ಆಡಳಿತ ಮಂಡಳಿ ವಿಶೇಷವಾಗಿ ಅಭಿನಂದಿಸಿದೆ.
ಒಂಬತ್ತು, 10 ನೇ ತರಗತಿ, ಪಿಯುಸಿ, ಸಿಯಿಟಿ, ಜೆಯಿಯಿ, ನೀಟ್ ತರಬೇತಿಗಳು ಈಗಾಗಲೇ ಆರಂಭಗೊಂಡಿದ್ದು ಹೊಸ ಬ್ಯಾಚಗಳು ಜೂನ್ ಮೊದಲ ವಾರದಿಂದ ಆರಂಭವಾಗಲಿದೆ.
ಹೆಚ್ಚಿನ ಮಾಹಿತಿಗಾಗಿ ಉಡುಪಿ ತೆಂಕಪೇಟೆ ಶ್ರೀಲಕ್ಷ್ಮೀವೆಂಕಟ್ರಮಣ ದೇವಾಲಯದ ಸಮೀಪದ ರಾಧೇಶ್ಯಾಮ ಕಟ್ಟಡದ ಕಚೇರಿ ಅಥವಾ ಬ್ರಹ್ಮಾವರದ ಮಧುವನ ಸಂಕೀರ್ಣದಲ್ಲಿರುವ ಏಸ್ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ನಿರ್ದೇಶಕ ಅಕ್ಷೋಭ್ಯ ಆಚಾರ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.