ಉಡುಪಿ: ನೀವು ಅಕ್ರಮ ಮಾಡಿ… ನಮಗೂ ಕೊಡಿ…

ಉಡುಪಿ ಮೇ.25: ಮರಳು ಮಾರಾಟ ಹಾಗೂ ಜಿಪಿಎಸ್ ವಿಚಾರದಲ್ಲಿ ಜಿಲ್ಲಾಡಳಿತ ಸರಕಾರಕ್ಕೆ ಕೋಟಿ ಕೋಟಿ ವಂಚನೆ ಮಾಡಿದೆ ಎಂದು ಕಟ್ಟಡ ಸಾಮಾಗ್ರಿ ಸಾಗಾಟ ಲಾರಿ ಟೆಂಪೋ ಮಾಲಕರ ಸಂಘ ಕಟಪಾಡಿಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ ಆರೋಪಿಸಿದ್ದಾರೆ.

ಈ ಬಗ್ಗೆ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಸಿಆರ್‌ಝಡ್ ವ್ಯಾಪ್ತಿಯ ಮರಳುಗಾರಿಕೆಯಲ್ಲಿ ಬಹಳ ದೊಡ್ಡ ಭ್ರಷ್ಟಾಚಾರ ನಡಿತಿದೆ. ಇಲಾಖೆ ನೀವು ಅಕ್ರಮ ಮಾಡಿ ನಮಗೂ ಕೊಡಿ ಎಂಬ ಶಿರ್ಷಿಕೆಯಲ್ಲಿ ಅಕ್ರಮ ಮರಳುಗಾರಿಕೆಯನ್ನು ಮಾಡಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಹೋದ ವರ್ಷ ದಕ್ಕೆಯಲ್ಲಿ ರೈಟರ್ ಆಗಿದ್ದವರು ಈ ವರ್ಷ ನಲ್ಕೈದು ವಾಹನ ಇಟ್ಟಿದ್ದಾರೆ. ಜಿಲ್ಲಾಧಿಕಾರಿಯವರು ನಮ್ಮನ್ನು ಕರೆದು ಅಕ್ರಮ ಮರಳುಗಾರಿಕೆ ಮಾಡುವವರ ಬಗ್ಗೆ ನಮಗೆ ಮಾಹಿತಿ ನೀಡಿ. ನೀವು ಅಕ್ರಮ ಮಾಡಬೇಡಿ ಎಂದು ಹೇಳಿದ್ದು, ನಾವು ಅವರ ಮಾತಿಗೆ ಗೌರವಕೊಟ್ಟು ಇಂದು ಎಲ್ಲವನ್ನೂ ಕಳೆದುಕೊಂಡು ಸಂಕಷ್ಟದಲ್ಲಿ ಇದ್ದೇವೆ. ಹಾಗೂ ಈ ಹಿಂದೆ ಇದ್ದಂತಹ ಬೇರೆ ಬೇರೆ ಅಧಿಕಾರಿಗಳು ಅಕ್ರಮ ಮರಳುಗಾರಿಕೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದರು. ಹಿಂದಿನ ಜಿಲ್ಲಾಧಿಕಾರಿಗಳು ಮರಳು ದಂಧೆ ನಡೆಯುತ್ತಿದ್ದಾಗ ರಾತ್ರೋ ರಾತ್ರಿ ಅಡ್ಡೆಗೆ ದಾಳಿಮಾಡುತ್ತಿದ್ದರು. ಕಳೆದ ಎರಡು ವರ್ಷಗಳಿಂದ ಅದೆಷ್ಟೋ ಕಡೆ ಅಕ್ರಮವಾಗಿ ದಂಧೆ ನಡೆಯುತ್ತಿದ್ದರೂ ಏನು ಕ್ರಮ ಜರುಗಿಸುತ್ತಿಲ್ಲ.

ಅಧಿಕಾರಿಗಳು ರಾತ್ರಿ ವೇಳೆ ಹೊರಗೆ ಬರಲಿ, ಅಕ್ರಮವನ್ನು ತಡೆಯಲಿ ಜಿಲ್ಲೆಯಲ್ಲಿ ಮರಳು ಕಳ್ಳಸಾಗಾಣಿಕೆ ಅವ್ಯಾಹತವಾಗಿ ನಡೆಯುತ್ತಲೇ ಇದೆ. ಸಾವಿರ ಸಾವಿರ ಲೋಡ್ ಮರಳು ಅಕ್ರಮವಾಗಿ ಶೇಖರಣೆ ಮಾಡಿಕೊಳ್ಳಲಾಗುತ್ತಿದೆ, ಎಂದು ಆರೋಪಿಸಿದರು. ಈಗಿನ ಅಧಿಕಾರಿಗಳು ಒಂದೇ ಒಂದು ದಿನ ರಾತ್ರಿ ವೇಳೆ ರೈಡ್ ಮಾಡಿರುವುದು ಗೊತ್ತಿಲ್ಲ. ಈಗ ಪ್ರತಿ ದಿಕ್ಕಿನಲ್ಲೂ ಅಕ್ರಮ ಮರಳುಗಾರಿಕೆ ನಡಿತಾ ಇದೆ. ಸ್ಯಾಂಡ್ ಆಪ್, ಜಿಪಿಎಸ್ ಎಂತೆಲ್ಲಾ ನಿಯಮ ತರುತ್ತಾರೆ ಆದರೆ ಒಂದಷ್ಟು ಜನ ಸ್ಯಾಂಡ್ ಆಪ್ ನಲ್ಲಿ ಬುಕ್ ಮಾಡಿದರೆ ಮತ್ತೊಂದಷ್ಟು ಇದ್ಯಾವುದೂ ಇಲ್ಲದೆ ಬೇಕಾಬಿಟ್ಟಿ ಮರಳು ಹಾಕುತ್ತಿದ್ದಾರೆ. ಈ ಮೂಲಕ ಜಿಲ್ಲಾಡಳಿತ 50 ಶೇ. ದಷ್ಟು ಜನ ಸಾಮಾನ್ಯರಿಗೆ ಮೋಸ ಮಾಡಿದೆ ಎಂದು ಆರೋಪಿಸಿದ್ದಾರೆ.

ಇನ್ನು ಜಿಪಿಎಸ್ ಉಲ್ಲಂಘನೆ ಮಾಡಿದ ದೋಣಿಯ ಪರವಾನಿಗೆ ದಾರರಿಗೆ ಮೊದಲ ಬಾರಿಗೆ ಜಿಪಿಎಸ್ ಉಲ್ಲಂಘಟನೆ ಗೆ 50,000 ಎರಡನೇ ಬಾರಿಗೆ ಒಂದು ಲಕ್ಷ, ಮತ್ತು ಮೂರನೇ ಬಾರಿಗೆ ಅಂತಹ ದೋಣಿಯ ಪರವಾನಿಗೆ ರದ್ದು ಮಾಡಲಾಗುತ್ತದೆ ಎಂದು ಎಳು ಜನರ ಸಮಿತಿ ಸೂಚಿಸಿದೆ. ಆದರೆ ಉಡುಪಿ ಬ್ರಹ್ಮಾವರದಲ್ಲಿ ದಾಖಲಾದ 3 ಜಿಪಿಎಸ್ ಉಲ್ಲಂಘನೆಯ ಪ್ರಕರಣಗಳಿಗೆ ಕೇವಲ 50,000 ರೂ ಮಾತ್ರ ದಂಡ ವಿಧಿಸಿದ್ದಾರೆ. 194 ಜಿಪಿಎಸ್ ಉಲ್ಲಂಘನೆಯಾದ ಪ್ರಕರಣಕ್ಕೆ  85.50 ಲಕ್ಷ ದಂಡ ವಿಧಿಸಬೇಕಿತ್ತು. ಆದರೆ ಇವರು ಕೇವಲ 9,25,000 ದಂಡ ಸಂಗ್ರಹ ಮಾಡಿದ್ದಾರೆ. 7 ಸದಸ್ಯರ ಸಮಿತಿಯ ನಿರ್ಣಯವನ್ನು ಇವರೇ ತಿದ್ದುಪಡಿ ಮಾಡಿಕೊಂಡು ಲೂಟಿ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

10000 ರೂ ಗೆ ಸಿಗುವ ಮರಳು 25000 ಎನ್ನುತ್ತಿದ್ದಾರೆ ಇನ್ನೊಂದು ವಾರ ಹೋದರೆ 35000 ಎನ್ನುತ್ತಾರೆ ಹೀಗಿರುವಾಗ ಬಡವರು ಮನೆ ಕಟ್ಟಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಹಾಗೂ ಸಿಆರ್ ಝಡ್ ಮರಳುಗಾರಿಗಾ ವ್ಯಾಪ್ತಿಯಲ್ಲಿ ದೊಡ್ಡ ಮಟ್ಟದ ಬ್ರಷ್ಟಚಾರ ಇದಕ್ಕೆ ನನ್ನ ಬಳಿ ದಾಖಲೆಗಳು ಇದೆ. ಈ ಬಗ್ಗೆ ಎಲ್ಲಿ ಬೇಕಾದರೂ ಹೋರಾಡಲು ಸಿದ್ಧ ಎಂದು ತಿಳಿಸಿದ್ದಾರೆ. ಇನ್ನು ನನ್ನ ಮೇಲೆ ಲಕ್ಷಗಟ್ಟಲೆ ಹಣ ಪಡೆದಿರುವ ಆರೋಪ ಮತ್ತು ಎಫ್.ಐಆರ್ ದಾಖಲಾಗಿದೆ ಎಂಬ ಸುಳ್ಳು ಆರೋಪಕ್ಕೆ ಸಂಬಂಧಿಸಿ ನಾವು ಈಗಾಗಲೇ ನೀಡಿದ ದೂರಿನ ಬಗ್ಗೆ ಜಿಲ್ಲಾಧಿಕಾರಿಯವರು ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಉದ್ದೇಶಪೂರ್ವಕವಾಗಿ ನನ್ನ ಮೇಲೆ ಆರೋಪ ಮಾಡಿದ್ದಾರೆ.

ನನ್ನ ಹೋರಾಟವನ್ನು ಹತ್ತಿಕ್ಕುವ ಉದ್ದೇಶದಿಂದ ನನ್ನ ಮೆಲೆ ಸುಳ್ಳು ಆರೋಪ ಮಾಡಿದ್ದಾರೆ. ಇನ್ನು ಎರಡು ಮೂರು ದಿನಗಳಲ್ಲಿ ನನಗೆ ನ್ಯಾಯ ಸಿಕ್ಕಿಲ್ಲವಾದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಮಾಡುವುದಾಗಿ ತಿಳಿಸಿದ್ದಾರೆ. ಹಾಗೂ ನಾನು 30 ಲಕ್ಷ ಹಣ ಪಡೆದುಕೊಂಡಿದ್ದೇ ಆದಲ್ಲಿ. ನನ್ನ ಮೇಲೆ ಎಫ್.ಐ.ಆರ್ ಆಗಿದ್ದೇ ಆದಲ್ಲಿ ಅದನ್ನು ಸಾಬೀತು ಪಡೆಸಬೇಕಿತ್ತು. ಅಕ್ರಮ ಮರಳುಗಾರಿಕೆ ಆರೋಪದಲ್ಲಿ ಸೂಚಿಸಿರುವ ರಾಘು ಶೆಟ್ಟಿ ನಾನು ಅಲ್ಲ ಎಂದು ಇವರು ಹೇಳುವುದಾದರೆ ಆ ರಾಘು ಶೆಟ್ಟಿ ಯಾರು..?, ಆ ಅಕ್ರಮ ಮರಳುಗಾರಿಯನ್ನು ಅಧಿಕಾರಿಗಳು ಯಾಕೆ ತಡೆದಿಲ್ಲ. ಒಂದು ವೇಳೆ ಈ ಅಧಿಕಾರಿಗಳ ಜಾಗದಲ್ಲಿ ಜನ ಸಾಮಾನ್ಯರು ಇರುತ್ತಿದ್ದರೆ ಇವರು ಸುಮ್ಮನೆ ಇರುತ್ತಿದ್ದರೇ ಎಂದು ಪ್ರಶ್ನಿಸಿದ್ದಾರೆ.ನೀವು ಮಾಡಿ, ನಮಗೂ ಕೊಡಿ’ ಎನ್ನುವ ಗಣಿ ಇಲಾಖೆಯ ಅಧಿಕಾರಿಗಳು ದಂಧೆಕೋರರನ್ನು ಪೋಷಿಸುತ್ತಿದ್ದಾರೆ. ಲಕ್ಷಾಂತರ ರೂಪಾಯಿ ರಾಯಧನ ಕೊಡದೆ, ಸರಕಾರಕ್ಕೆ ವಂಚನೆ ಮಾಡುತ್ತಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಚಂದ್ರ ಪೂಜಾರಿ, ಅಧ್ಯಕ್ಷರು, ರಮೇಶ್ ಶೆಟ್ಟಿ, ಅಶೋಕ್ ಕುಲಾಲ್ , ನವೀನ್ ಪಾಲನ್ , ನಾಗರಾಜ್ ಶೆಟ್ಟಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!