ಹೆಬ್ರಿ ತಾಲ್ಲೂಕು ಹೆಸರಿಗಷ್ಟೇ, ಕಚೇರಿ ಕೆಲಸಗಳಿಗೆ ಅಲೆದಾಟ ತಪ್ಪಿಲ್ಲ- ಮಂಜುನಾಥ ಪೂಜಾರಿ

ಹೆಬ್ರಿ: ಕಾರ್ಕಳದ ಮಾಜಿ ಶಾಸಕ ದಿ.ಗೋಪಾಲ ಭಂಡಾರಿ ಮತ್ತು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರ ವಿಶೇಷ ಪ್ರಯತ್ನ ಮತ್ತು ಹೋರಾಟದ ಫಲವಾಗಿ ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೆಬ್ರಿಯನ್ನು ವಿಶೇಷ ಆದ್ಯತೆಯ ನೆಲೆಯಲ್ಲಿ ಗ್ರಾಮೀಣ ಪ್ರದೇಶದ ಅತೀ ಸಣ್ಣ ತಾಲ್ಲೂಕು ಆಗಿ ಹೆಬ್ರಿಯನ್ನು ಘೋಷಣೆ ಮಾಡಿದ್ದಾರೆ ಎಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ತಿಳಿಸಿದರು.

ಅವರು ಹೆಬ್ರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಉಡುಪಿ ಜಿಲ್ಲೆ ಹೆಬ್ರಿಯು ತಾಲ್ಲೂಕು ಆಗಬೇಕು ಎಂಬ ಬಹುಕಾಲದ ಕೂಗು ಇತ್ತು. ತಾಲ್ಲೂಕು ಕೇಂದ್ರಕ್ಕೆ ಹೋಗಲು 35 ಕೀಮಿ ದೂರ ಕ್ರಮಿಸಬೇಕಿತ್ತು. ಅಂದಿನ ಕಾರ್ಕಳ ಶಾಸಕ ಹೆಬ್ರಿ ಗೋಪಾಲ ಭಂಡಾರಿ ಅವರು ಎಂ.ಬಿ.ಪ್ರಕಾಶ್ ತ್ರತ್ವದ ತಾಲ್ಲೂಕು ಪುನರ್ವಿಂಗಡನ ಆಯೋಗ ಉಡುಪಿಗೆ ಬಂದಾಗ ಹೆಬ್ರಿ ತಾಲ್ಲೂಕು ಯಾಕೆ ಆಗಬೇಕು ಎಂದು ನಿಯೋಗದೊಂದಿಗೆ ತೆರಳಿ ಸಮರ್ಥವಾಗಿ ಬೇಡಿಕೆಯನ್ನು ಸಲ್ಲಿಸಿದಾಗ ಹೆಬ್ರಿಯ ಅನಿವಾರ್ಯತೆಯನ್ನು ಪರಿಶೀಲಿಸಿ ಎಂ.ಬಿ.ಪ್ರಕಾಶ್ಆಯೋಗ ಹೆಬ್ರಿಯನ್ನು ನೂತನ ತಾಲ್ಲೂಕು ಆಗಿ ಘೋಷಿಸಿತು ಎಂದು ಮಂಜುನಾಥ ಪೂಜಾರಿ ತಿಳಿಸಿದರು.

ಸುನಿಲ್ ಕುಮಾರ್ ಗೆ ಹೆಬ್ರಿ ತಾಲ್ಲೂಕು ಆಗುವುದು ಮತ್ತು ಮತ್ತೊಂದು ಶಕ್ತಿಕೇಂದ್ರ ರೂಪುಗೊಳ್ಳುವುದು ಬೇಡವಿತ್ತು. ಅದಕ್ಕಾಗಿ ತಮ್ಮ ಬೆಂಬಲಿಗರನ್ನು ಸೇರಿಸಿ ಕಡ್ತಲ ಗ್ರಾಮ ಪಂಚಾಯಿತಿ ಮೂಲಕ ವಿರೋಧ ಮಾಡಿಸಿ ಅಂದಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತಾಲ್ಲೂಕು ಘೋಷಣೆ ಮಾಡುವಾಗ ಹೆಬ್ರಿಯು ಕೈತಪ್ಪುವಂತೆ ನೋಡಿಕೊಂಡರು. ಅದಕ್ಕಾಗಿ ಗೋಪಾಲ ಭಂಡಾರಿ ವಿಧಾನಸಭೆಯಲ್ಲಿ ಪ್ರತಿಭಟಿಸಿದ್ದರು. ಆಯೋಗದ ಪಟ್ಟಿಯಲ್ಲಿ ಹೆಬ್ರಿ ತಾಲ್ಲೂಕಿಗೆ ಪಕ್ಕದ ಕಳ್ತೂರು ಗ್ರಾಮ ಸೇರಿದ್ದರೂ. ಅಂದಿನ ಸಿದ್ಧರಾಮಯ್ಯ ಸರ್ಕಾರದಲ್ಲಿ ಸಚಿವರಾಗಿದ್ದ ಪ್ರಮೋದ್ ಮಧ್ವರಾಜ್ ಹೆಬ್ರಿ ಸಮೀಪದ ಕಳ್ತೂರು ಗ್ರಾಮವನ್ನು ಹೆಬ್ರಿ ತಾಲ್ಲೂಕು ವ್ಯಾಪ್ತಿಯಿಂದ ಬ್ರಹ್ಮಾವರ ವ್ಯಾಪ್ತಿಗೆ ಸೇರಿಸಿ ಬ್ರಹ್ಮಾವರ ತಾಲ್ಲೂಕು ಮಾಡಿಸಿ ಹೆಬ್ರಿಯನ್ನು ತಪ್ಪಿಸಿದರು. ಕೊನೆಗೆ ಮಾಡು ಇಲ್ಲವೆ ಮಡಿ ಎನ್ನುವಂತೆ ಗೋಪಾಲ ಭಂಡಾರಿ ಹೋರಾಟ ಮಾಡಿದ್ದರಿಂದ ವೀರಪ್ಪ ಮೊಯ್ಲಿ ಜತೆಗೂಡಿ ಸಿದ್ಧರಾಮಯ್ಯ ಹೆಬ್ರಿ ತಾಲ್ಲೂಕು ಮಾಡಿದರು ಎಂದು ಮಂಜುನಾಥ ಪೂಜಾರಿ ಹೇಳಿದರು.

ಜನರ ನಿರೀಕ್ಷೆಯಂತೆ ತಾಲ್ಲೂಕು ಆಗಿದೆ. ಆದರೆ ಹೆಸರಿಗಷ್ಟೇ ತಾಲ್ಲೂಕು ಇದೆ. ಯಾವೂದೇ ವ್ಯವಸ್ಥೆ ಇಲ್ಲ. ಕಚೇರಿ ಕೆಲಸಗಳಿಗೆ ಅಲೆದಾಟ ತಪ್ಪಿಲ್ಲ. ನಾಡಕಚೇರಿ, ಹೋಬಳಿ ಕೇಂದ್ರ, ನೆಮ್ಮದಿಕೇಂದ್ರ, ಸಬ್ರಿಜಿಸ್ಟಾರ್ ಕಚೇರಿ, ನ್ಯಾಯಲಯ ಸಹಿತ ಯಾವೂದೇ ಇಲಾಖೆ ಬಂದಿಲ್ಲ. ಎಲ್ಲವೂ ಗೊಂದಲವಾಗಿಯೇ ಇದೆ. ಭ್ರಷ್ಟಾಚಾರ ತಾಂಡವ ವಾಡುತ್ತಿದೆ. ಸುಲಲಿತ ಆಡಳಿತ ಇಲ್ಲ ಇದಕ್ಕೆಲ್ಲ ಕಾರಣ ಯಾರು ಎಂದು ಸಚಿವ ಸುನಿಲ್ ಕುಮಾರ್ ವರು ಉತ್ತರಿಸಬೇಕು ಎಂದು ಮಂಜುನಾಥ ಪೂಜಾರಿ ಪ್ರಶ್ನಿಸಿದ್ದಾರೆ.

ಹೆಬ್ರಿ ತಾಲ್ಲೂಕು ಕಚೇರಿ ಆವರಣದಲ್ಲಿ ಗೋಪಾಲ ಭಂಡಾರಿ ಪ್ರತಿಮೆ ಸ್ಥಾಪಿಸಲು ಗೌರವ ಪೂರ್ವಕ ಮನವಿ.
ಹೆಬ್ರಿ : ಹೆಬ್ರಿಯ ಅಭಿವೃದ್ಧಿಯ ಹರಿಕಾರರೂ ದೂರದೃಷ್ಠಿಯ ಜನನಾಯಕರಾಗಿದ್ದ ಹೆಬ್ರಿ ತಾಲ್ಲೂಕು ರಚನೆಯ ಮೂಲ ರೂವಾರಿಯೂ ಆಗಿರುವ ಕಾರ್ಕಳ ಕ್ಷೇತ್ರದ ಮಾಜಿ ಶಾಸಕರಾಗಿದ್ದ ದಿವಂಗತ ಹೆಬ್ರಿ ಗೋಪಾಲ ಭಂಡಾರಿ ಅವರ ಪ್ರತಿಮೆಯನ್ನು ಗೌರವ ಪೂರ್ವಕವಾಗಿ ಹೆಬ್ರಿ ತಾಲ್ಲೂಕು ಕಚೇರಿಯ ಮಿನಿ ವಿಧಾನ ಸೌಧದ ಎದುರು ಸ್ಥಾಪಿಸುವಂತೆ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಒತ್ತಾಯಿಸಿದ್ದಾರೆ. ಕಾರ್ಕಳ ಉತ್ಸವದಲ್ಲಿ ಗೋಪಾಲ ಭಂಡಾರಿಯವರ ಹೆಸರಿನಲ್ಲಿ ಗೋಪಾಲ ಭಂಡಾರಿ ವೇದಿಕೆ ಎಂದು ನಾಮಕರಣ ಮಾಡಿದ್ದು ಅವರಿಗೆ ನಿಜವಾಗಿ ಗೌರವ ಸಲ್ಲಿಸಲು ಎಂದಾದರೆ ಗೋಪಾಲ ಭಂಡಾರಿಯವರಿಗೆ ಶಾಶ್ವತ ಗೌರವ ದೊರೆಯಲು ಮತ್ತು ಹೆಬ್ರಿ ತಾಲ್ಲೂಕು ರಚನೆಯ ಹೋರಾಟಕ್ಕೆ ನೈಜ ಗೌರವ ನೀಡಲು ಉಡುಪಿ ಜಿಲ್ಲಾಧಿಕಾರಿ ಕಚೇರಿಯ ರಜತಾದ್ರಿಯಲ್ಲಿ ಡಾ.ವಿ.ಎಸ್ ಆಚಾರ್ಯ ಪ್ರತಿಮೆ ಸ್ಥಾಪಿಸಿದಂತೆ ಹೆಬ್ರಿ ತಾಲ್ಲೂಕು ಕಚೇರಿಯಲ್ಲಿ ಗೋಪಾಲ ಭಂಡಾರಿ ಪ್ರತಿಮೆ ಸ್ಥಾಪಿಸುವಂತೆ ಮಂಜುನಾಥ ಪೂಜಾರಿ ಸಚಿವ ಸುನಿಲ್ ಕುಮಾರ್ ಮತ್ತು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
………………..
ಸಿದ್ಧರಾಮಯ್ಯ ಕೊಟ್ಟ 10 ಕೋಟಿ ಅನುದಾನ : ನೀರೆ ಕೃಷ್ಣ ಶೆಟ್ಟಿ
ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ವೀರಪ್ಪ ಮೊಯ್ಲಿಯವರನ್ನು ಆಹ್ವಾನಿಸಲು ಒತ್ತಾಯ. ಬಿಜೆಪಿಯವರು ಹೆಬ್ರಿ ತಾಲ್ಲೂಕು ನಾವು ಮಾಡಿದ್ದು ಎಂದು ಹೇಳಿಕೊಳ್ಳುತ್ತಾರೆ. ಜನತೆಗೆ ಸತ್ಯದ ಅರಿವಿದೆ. ಅಂದಿನ ಕಂದಾಯ ಸಚಿವ ಕಾಗೋಡು ತಿಮ್ಮಪ್ಪನವರು ಹೆಬ್ರಿ ತಾಲ್ಲೂಕು ಕಚೇರಿಯ ಆಡಳಿತ ಸೌಧ ಮಿನಿವಿಧಾನ ಸೌಧಕ್ಕೆ 10 ಕೋಟಿ ರೂಪಾಯಿ ಅನುದಾನ ನೀಡಿ ತಾಲ್ಲೂಕು ಉದ್ಘಾಟನೆ ನೆರವೇರಿಸಿದ್ದರು. ಅದೇ ಅನುದಾನದಲ್ಲಿ ಈಗ ಬೃಹತ್ಸೌಧ ನಿರ್ಮಾಣವಾಗಿದೆ. ಇದರಲ್ಲಿ ಬಿಜೆಪಿಯವರ ಕೊಡುಗೆ ಏನು ಇಲ್ಲ. ಗೋಪಾಲ ಭಂಡಾರಿ ಅವರ ತೀವೃ ಹೋರಾಟದ ಮೂಲಕ ವೀರಪ್ಪ ಮೊಯ್ಲಿಯವರಿಂದ ಹೆಬ್ರಿ ತಾಲ್ಲೂಕು ಆಗಿದೆ. ಊರಿನ ಗೌರವಕ್ಕಾಗಿಯಾದರೂ ಕಾರ್ಕಳ ಉತ್ಸವಕ್ಕೆ ಆಹ್ವಾನಿಸಿದಂತೆ ಹೆಬ್ರಿ ತಾಲ್ಲೂಕು ಮಿನಿ ವಿಧಾನಸೌಧ ಲೋಕಾರ್ಪಣೆಗೆ ವೀರಪ್ಪ ಮೊಯ್ಲಿ ಅವರನ್ನು ಆಹ್ವಾನಿಸಿ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ಉಪಾಧ್ಯಕ್ಷರಾದ ತಾಲ್ಲೂಕು ಹೋರಾಟ ಸಮಿತಿಯ ಸಂಚಾಲಕ ನೀರೆ ಕೃಷ್ಣ ಶೆಟ್ಟಿ ಒತ್ತಾಯಿಸಿದ್ದಾರೆ.

ಹೆಬ್ರಿ ಕಾಂಗ್ರೆಸ್ಅಧ್ಯಕ್ಷ ಎಚ್.ಬಿ.ಸುರೇಶ್, ಬ್ಲಾಕ್ಕಾಂಗ್ರೆಸ್ಕಾರ್ಯದರ್ಶಿ ಎಚ್.ಜನಾರ್ಧನ್, ಮಹಿಳಾ ಕಾಂಗ್ರೆಸ್ಅಧ್ಯಕ್ಷೆ ರಂಜನಿ ಹೆಬ್ಬಾರ್ಕಬ್ಬಿನಾಲೆ, ಶಂಕರ ಶೇರಿಗಾರ್, ಶಶಿಕಲಾ ಡಿ.ಪೂಜಾರಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!