| ಹುಬ್ಬಳ್ಳಿ ಮೇ 24: ಸಮಾಜದಲ್ಲಿ ಹಣಕ್ಕಾಗಿ, ಪ್ರೇಮ ವಿಚಾರ, ಹಳೇ ದ್ವೇಷ, ಆಸ್ತಿಗಾಗಿ ಇತ್ಯಾದಿ ಬೇರೆ ಬೇರೆ ಕಾರಣಗಳಿಗೆ ಕೊಲೆ ಮಾಡುವ ಬಗ್ಗೆ ಕೇಳಿದ್ದೇವೆ. ಆದರೆ ಇಲ್ಲೊಬ್ಬ 5 ರೂಪಾಯಿ ವಿಮಲ್ ಪಾನ್ ಮಸಾಲಾ ಕೊಡಿಸುವ ವಿಚಾರಕ್ಕೇ ಸ್ನೇಹಿತನನ್ನೇ ಭೀಕರವಾಗಿ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಆನಂದ ನಗರದ ಮೆಹಬೂಬ್ ರಫೀಕ್ ಕಳಸ ಕೊಲೆಯಾದ ಸ್ನೇಹಿತ, ಗೌಸ್ ಮೊದ್ದೀನ್ ಕೊಲೆಗೈದ ಆರೋಪಿ.
ಆನಂದ ನಗರ ಸರ್ಕಲ್ ನಲ್ಲಿ ಮೆಹಬೂಬ್ ರಫೀಕ್ ಕಳಸ ಹಾಗೂ ಗೌಸ್ ಮೊದ್ದೀನ್ ನಡುವೆ ವಿಮಲ್ ಕೊಡಿಸುವ ವಿಚಾರಕ್ಕೆ ಜಗಳವಾಗಿದೆ. ಈ ವೇಳೆ ಸ್ನೇಹಿತ ವಿಮಲ್ ಕೊಡಿಸದ ಹಿನ್ನಲೆಯಲ್ಲಿ ಜಗಳವಾಡಿದ್ದ ಗೌಸ್ ಮೊದ್ದೀನ್, ಮೆಹಬೂಬ್ ಅವರ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಮೆಹಬೂಬ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೆಹಬೂಬ್ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳದಿಂದ ಗೌಸ್ ಮೊದ್ದೀನ್ ಪರಾರಿ ಆಗಿದ್ದಾನೆ. ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
| |