ಉಡುಪಿ ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್: ಸರ್ಕಾರಿ ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ
ಉಡುಪಿ ಮೇ 24 (ಉಡುಪಿ ಟೈಮ್ಸ್ ವರದಿ): ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ ಉಡುಪಿ ಇದರ ವತಿಯಿಂದ ಹನುಮಂತ ನಗರದ ಸರ್ಕಾರಿ ಹೆಚ್.ಆರ್.ಪಿ ಶಾಲೆಯ 1ನೇ ತರಗತಿಯ ಮಕ್ಕಳಿಗೆ ಶಾಲಾ ಬ್ಯಾಗ್ ಗಳನ್ನು ವಿತರಿಸಲಾಯಿತು.
ಈ ವೇಳೆ ಲಯನ್ಸ್ ಕ್ಲಬ್ ಉಡುಪಿ ಇದರ ಅಧ್ಯಕ್ಷ ಡಯಾನಾ ಎಂ ವಿಟ್ಟಲ್ ಪೈ ಅವರು ಮಾತನಾಡಿ ಶಾಲೆಗೆ ಹೋಗುವ ಸರ್ಕಾರಿ ಶಾಲಾ ಮಕ್ಕಳನ್ನು ಶಾಲೆಗೆ ಆಕರ್ಷಿಸುವ ನಿಟ್ಟಿನಲ್ಲಿ ಈ ಕಾರ್ಯ ಕೈಗೊಂಡಿದ್ದು ಮಕ್ಕಳ ಮುಖದಲ್ಲಿ ಮುಗುಳ್ನಗೆಯನ್ನು ಕಂಡು ಖುಷಿಯಾಯಿತು ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಉಡುಪಿ ಇದರ ಕಾರ್ಯದರ್ಶಿ ವಿಷ್ಣುದಾಸ್ ಪಾಟೀಲ್, ಶಾಲೆಯ ಮುಖ್ಯಶಿಕ್ಷಕ ಸುಧಾಕರ್ ಹಾಗೂ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.