ಸಮಾಜ ಸೇವಕ, ಉದ್ಯಮಿ ಮುನಿಯಾಲು ಉದಯ್ ಶೆಟ್ಟಿಗೆ “ಆರ್ಯಭಟ” ಇಂಟರ್ನ್ಯಾಷನಲ್ ಅವಾರ್ಡ್

ಉಡುಪಿ ಮೇ 24 (ಉಡುಪಿ ಟೈಮ್ಸ್ ವರದಿ): ಆರ್ಯಭಟ ಕಲ್ಚರಲ್ ಆರ್ಗನೈಸೇಷನ್ ವತಿಯಿಂದ ಕೊಡಮಾಡುವ  “ಆರ್ಯಭಟ” ಇಂಟರ್ನ್ಯಾಷನಲ್ ಅವಾರ್ಡ್ ಗೆ ಈ ಬಾರಿ ಸಮಾಜ ಸೇವಕ, ಕೊಡುಗೈ ದಾನಿ, ಉದ್ಯಮಿ ಮುನಿಯಾಲು ಉದಯ್ ಶೆಟ್ಟಿ ಅವರು ಭಾಜನರಾಗಿದ್ದಾರೆ.

ಮುನಿಯಾಲು ಉದಯ್ ಶೆಟ್ಟಿ ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ 2020-22  ಸಾಲಿನ ಆರ್ಯಭಟ ಇಂಟರ್ನ್ಯಾಷನಲ್ ಅವಾರ್ಡ್ ಗೆ ಅವರನ್ನು ಆಯ್ಕೆ ಮಾಡಲಾಗಿದೆ.ಮೇ 25 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ ನಡೆಯಲಿರುವ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರಧಾನ ಮಾಡಲಾಗುವುದು.

ಕೊಡುಗೈ ದಾನಿಯಾಗಿರುವ ಮುನಿಯಾಲು ಉದಯ್ ಶೆಟ್ಟಿ ಅವರು ಉದ್ಯಮಿಯಾಗಿರುವ ಜೊತೆಗೆ ಸಮಾಜಿಕ ಸೇವಕರಾಗಿಯೂ ಗುರುತಿಸಿಕೊಂಡಿದ್ದಾರೆ. ಮಾತ್ರವಲ್ಲದೆ ರಾಜಕೀಯ ಧುರಿಣರಾಗಿಯೂ ಅವರು ಚಿರಪರಿಚಿತರಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!