‘ಆಚಾರ್ಯಾಸ್ ಏಸ್’ ಜೂನ್ ಮೊದಲ ವಾರದಿಂದ ಹೊಸ ಬ್ಯಾಚ್ ಆರಂಭ
ಉಡುಪಿ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ಕೃಷ್ಟ ಗುಣಮಟ್ಟದ ತರಬೇತಿ ಆಯೋಜಿಸಿ ಗರಿಷ್ಠ ಫಲಿತಾಂಶವನ್ನು ಗಳಿಸುತ್ತಿರುವ ಉಡುಪಿಯ “ಆಚಾರ್ಯಾಸ್ ಏಸ್” ವತಿಯಿಂದ ಒಂಬತ್ತು, ಹತ್ತು, ಪ್ರಥಮ ಹಾಗೂ ದ್ವಿತೀಯ ಪಿಯುಸಿ, ಸಿ.ಇ.ಟಿ, ನೀಟ್, ಜೆ.ಇ.ಇ ತರಬೇತಿಯ ಹೊಸ ಬ್ಯಾಚ್ ಜೂನ್ ಮೊದಲ ವಾರದಿಂದ ಆರಂಭವಾಗಲಿದೆ.
ಕಳೆದ 8 ವರ್ಷಗಳಲ್ಲಿ ಹತ್ತನೇತರಗತಿ, ಪಿಯುಸಿ ಹಾಗೂ ಸಿಇಟಿಯಲ್ಲಿ ಅತ್ಯುತ್ತಮ ಫಲಿತಾಂಶ ಹಾಗೂ ಶ್ರೇಯಾಂಕಗಳನ್ನು ಗಳಿಸಿರುವ ಆಚಾರ್ಯಾಸ ಏಸ್ ಈ ಭಾರಿ ಇನ್ನಷ್ಟು ಉಪಯುಕ್ತ ಯೋಜನೆಗಳೊಂದಿಗೆ ತರಬೇತಿಯನ್ನು ಆಯೋಜಿಸಿದೆ.
ಪಿಯುಸಿ, ಸಿಯಿಟಿ, ಜೆಯಿಯಿ, ನೀಟ್: ಪ್ರಥಮ ಹಾಗೂ ದ್ವಿತೀಯ ಪಿಯುಸಿಯ ಹೊಸ ಬ್ಯಾಚ್ ಜೂನ್ 8 ರಿಂದ ಆರಂಭವಾಗಲಿದೆ. ದೈನಂದಿನ ಈ ತರಬೇತಿ ಪ್ರತಿ ಸೋಮವಾರದಿಂದ ಶನಿವಾರದವರೆಗೆ ಸಂಜೆ 5 ರಿಂದ 6.30 ರ ವರೆಗೆ ಜರಗಲಿದೆ.2023 ರಲ್ಲಿ ಸಿಯಿಟಿ,ನೀಟ್ ಹಾಗೂ ಜೆಯಿಯಿ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಪ್ರತೀ ಶನಿವಾರ ಹಾಗೂ ಭಾನುವಾರ ತರಬೇತಿ ಜರಗಲಿದೆ. ತರಬೇತಿಯ ಸಂದರ್ಭದಲ್ಲಿ ವಿಶೇಷ ಉಪನ್ಯಾಸಗಳ ಜೊತೆಗೆ ಪ್ರತೀ ಅಧ್ಯಾಯದ ಕುರಿತಾಗಿ ಮಾದರಿ ಪರೀಕ್ಷೆ, ವಿಶೇಷ ಕಾರ್ಯಾಗಾರಗಳನ್ನು ಆಯೋಜಿಸಲಾಗುವುದು. ಬಯಾಲಜಿ ವಿಷಯದ ಪ್ರಮುಖ ಅಧ್ಯಾಯಗಳ ಉಪನ್ಯಾಸಕ್ಕಾಗಿ ಉಡುಪಿ ಕ್ಷೇತ್ರದಲ್ಲಿ ಪ್ರಸಿದ್ದ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ತಜ್ಞವೈದ್ಯರುಗಳಿಂದ ಪ್ರಾತ್ಯಕ್ಷಿಕೆ ಸಹಿತವಾಗಿ ಉಪನ್ಯಾಸವನ್ನು ಆಯೋಜಿಸಲಾಗಿದೆ. ಏಸ್ ಸಂಸ್ಥೆಯ ಗ್ರಂಥಾಲಯದ ಮೂಲಕ ವಿದ್ಯಾರ್ಥಿಗಳಿಗೆ ಸಂಸ್ಥೆಯ ಹಾಗೂ ಜನಪ್ರಿಯ ಪ್ರಕಾಶಕರ ಕೃತಿಗಳನ್ನೂ ನೀಡಲಾಗುವುದು.
ಒಂಬತ್ತು, 10ನೇ ತರಗತಿ: ವಿಜ್ಞಾನ ಹಾಗೂ ಗಣಿತ ಶಾಸ್ತ್ರದ ವಿಷಯವಾಗಿ ಒಂಬತ್ತು ಮತ್ತು ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಜೂನ್ ಮೊದಲ ವಾರದಿಂದ ದೈನಂದಿನ ತರಬೇತಿಯು ಜರಗಲಿದೆ. ಸೋಮವಾರದಿಂದ ಶನಿವಾರದ ವರೆಗೆ ಪ್ರತಿದಿನ ಸಂಜೆ 5 ರಿಂದ 6.15 ರ ವರೆಗೆ ತರಗತಿಗಳು ನಡೆಯಲಿದೆ. ಈ ತರಗತಿಗಳು 2023 ನೇ ಇಸವಿಯ ಮಾರ್ಚ್ ವರೆಗೆ ಮುಂದುವರಿಯಲಿದೆ. ಈಗಾಗಲೇ ತರಬೇತಿ ಪಡೆಯುತ್ತಿರುವ 9ಮತ್ತು ಹತ್ತನೇಯ ತರಗತಿಯ ವಿದ್ಯಾರ್ಥಿಗಳಿಗೆ ಶಾಲೆ ಆರಂಭವಾದ ನಂತರ ಈ ತರಬೇತಿಯು 2023 ನೇ ಇಸವಿಯ ಮಾರ್ಚವರೆಗೆ ಪ್ರತೀ ಶನಿವಾರ ಸಂಜೆ ಹಾಗೂ ಭಾನುವಾರ ಮುಂಜಾನೆಯಿಂದ ಮಧ್ಯಾಹ್ನದವರೆಗೆ ಜರಗಲಿದೆ.
ಮಾದರಿ ಪರೀಕ್ಷೆ, ಉಪನ್ಯಾಸಗಳ ಜೊತೆಗೆ ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿಗಾಗಿ ವಿಶಿಷ್ಟ ಕಾರ್ಯಕ್ರಮ ಹಾಗೂ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗಿದೆ. ಬಹುತೇಕ ತರಗತಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ನೋಂದಾವಣಿಯಾಗಿದ್ದು ಕೆಲವೇ ಸೀಟುಗಳು ಉಳಿದಿವೆ.
ಆಸಕ್ತ ವಿದ್ಯಾರ್ಥಿಗಳು ಉಡುಪಿ ತೆಂಕಪೇಟೆಯ ಶ್ರೀಲಕ್ಷ್ಮೀವೆಂಕಟ್ರಮಣ ದೇವಾಲಯದ ಸಮೀಪದಲ್ಲಿರುವ ರಾಧೇಶಾಂ ಕಟ್ಟಡದ ಆಚಾರ್ಯಾಸ್ ಏಸ್ ಕಚೇರಿ ಅಥವಾ ಬ್ರಹ್ಮಾವರದ ಮಧುವನ ಕಾಂಪ್ಲೆಕ್ಸನ ಏಸ್ ಕಚೇರಿಯ ಮೊಬೈಲ್ ಸಂಖ್ಯೆ 9901420714 ಸಂಪರ್ಕಿಸಬೇಕೆಂದು ಸಂಸ್ಥೆಯ ನಿರ್ದೇಶಕ ಅಕ್ಷೋಭ್ಯ ಆಚಾರ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.