ಉಪ್ಪೂರು: ಪಂಚಾಯತ್ ವಿಡಿಯೋ ವೈರಲ್, ಮಹಿಳೆಯಿಂದ ದೂರು ದಾಖಲು
ಬ್ರಹ್ಮಾವರ: (ಉಡುಪಿ ಟೈಮ್ಸ್ ವರದಿ)ಉಪ್ಪೂರು ಗ್ರಾಮ ಪಂಚಾಯತ್ ಕಛೇರಿಯ ಸಿಬ್ಬಂದಿಗೆ ಗುತ್ತಿಗೆದಾರನೊರ್ವ ಕಾಮಗಾರಿಯ ಬಿಲ್ ಪಾವತಿಸಿದಿರುವ ಬಗ್ಗೆ ಪ್ರಶ್ನಿಸಿದ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಮಾಡಿದ ವಿರುದ್ದ ಬ್ರಹ್ಮಾವರ ಠಾಣೆಯಲ್ಲಿ ದೂರು ದಾಖಲಾಗಿದೆ
ಜುಲೈ 31 ರಂದು ಕೊಳಲಗಿರಿಯ ಗುತ್ತಿಗೆದಾರ ಅಶ್ವಿನ್ ಪ್ರಸನ್ನ ರೋಚ್ ಉಪ್ಪೂರು ಪಂಚಾಯತ್ನಲ್ಲಿ ತಮ್ಮ ಕಾಮಗಾರಿಯ ಬಿಲ್ ಪಾವತಿಸುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಲ್ಲಿ ವಿಚಾರಿಸಲು ಹೋಗಿದ್ದರು. ಈ ಸಂದರ್ಭ ಮಹಿಳಾ ಸಿಬ್ಬಂದಿ ಭವಾನಿ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದರು. ಇದರಿಂದ ಅಸಮಾಧಾನಗೊಂಡ ಅಶ್ವಿನ್ ತಮ್ಮ ಮೊಬೈಲ್ ಫೋನಿನಲ್ಲಿ ಮಹಿಳೆಯನ್ನು ಮತ್ತು ಪಂಚಾಯತ್ ಪಿಡಿಓರನ್ನು ನಿಂದಿಸುವ ವಿಡಿಯೋ ಮಾಡಿದ್ದರು.
ಪರಿಶಿಷ್ಟ ಜಾತಿಯ ಮಹಿಳೆ ಎಂಬ ಕಾರಣಕ್ಕೆ ತಾತ್ಸಾರದಿಂದ ಅವರನ್ನು ಗುರಿಪಡಿಸಿ ಸಾರ್ವಜನಿಕವಾಗಿ ಬೈದು, ನಿಂದಿಸಿ ಸುಳ್ಳು ಆರೋಪ ಹೊರಿಸಿ ಅಪಮಾನಿಸುವ ಮೂಲಕ ಅನುಚಿತವಾಗಿ ವರ್ತಿಸಿದ್ದು, ಅಲ್ಲದೇ ಗ್ರಾಮ ಪಂಚಾಯತ್ ಮತ್ತು ಸಿಬ್ಬಂದಿಗಳನ್ನು ನಿಂದಿಸಿ, ಕರ್ತವ್ಯದಲ್ಲಿದ್ದಾಗ ಅಡ್ಡಿಪಡಿಸಿ, ಮೊಬೈಲ್ ಕ್ಯಾಮರದಲ್ಲಿ ವಿಡಿಯೋ ಶೂಟಿಂಗ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ಮಹಿಳಾ ಸಿಬ್ಬಂದಿ ಭವನಿ ನೀಡಿದ ದೂರಿನಂತೆ ಅಶ್ವಿನ್ ವಿರುದ್ದ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಉಪ್ಪೂರು ಪಂಚಾಯತ್ನ ಸಿಬ್ಬಂದಿಗಳು ಜನರ ಕೆಲಸ ಕಾರ್ಯಗಳನ್ನು ನಿಗದಿತ ಸಮಯಗಳಲ್ಲಿ ಮಾಡಿಕೊಡುವುದರಲ್ಲಿ ಅಸಡ್ಡೆ ತೋರಿಸುತ್ತಿದ್ದಾರೆಂಬ ಆರೋಪ ಈ ಮೊದಲು ಕೂಡ ಕೇಳಿ ಬಂದಿತ್ತು. ಬೇಸಿಗೆ ಕಾಲದಲ್ಲಿ ಕೆಲವೊಂದು ವಾರ್ಡ್ಗಳಿಗೆ ಸರಿಯಾಗಿ ನೀರಿನ ಸರಬರಾಜು ಮಾಡದ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಮಾತ್ರವಲ್ಲದೆ ಸಾರ್ವಜನಿಕರು ಕೆಲಸ ಕಾರ್ಯಗಳಿಗೆ ಪಂಚಾಯತ್ಗೆ ಹೋದಲ್ಲಿ ಸರ್ವರ್, ನೆಟ್ವರ್ಕ್ ಸಮಸ್ಯೆ ಎಂದು ಜನರನ್ನು ಸತಾಯಿಸುತ್ತಾರೆಂಬ ಆರೋಪ ಸ್ಥಳೀಯರಿಂದ ಕೇಳಿ ಬರುತ್ತಿದೆ.
Yentha panchayath mare adhu neer kelikke bandre panchayath ge avra mane neer kelidag madthare puna police karsthasre neer ellade 2week adru neer Ella antha kelidre avra manege bandhu kelidage madthare
The concern pdo mr rajendra is fit for nothing, very errogant and to everyone he will I’ll complain stating you are not allowing me to do my duty, this is his day to day business,I have a same experience and informed him to complain… whole uppor village is against him and his staff, it’s just a trap for that poor guy.its better to do a public openion before it’s too late.
Just by the name of caste / category hd can’t snub every one.
Same as above
Good job ashwin
Panchayathna karyavaikari sariyagi ellaaa edharindha namagu thondhare agidhe ,adhare enthaha kelavu prakarana belakige bandhidhe asteee.. gutthige dhara madidha kelasa sariyagidhee… Elli jathi nidhane prashne agudhilla panchaythna karyavaikari sari agidhhare prashnisuva agathya namagilla
Ashwin madidh olle kelsa yakandre panchayath hagarana belakige biltade antha hedri complaint madidare uppooru panchayath sarii Ella adahanna ashwin anthavaru prashne madidre intha kelsa madthare
ಉಪ್ಪೂರು ಪಂಚಾಯಿತಿ ಅಷ್ಟು ಕಳಪೆ ಪಂಚಾಯಿತಿ ಎಲ್ಲು ಇಲ್ಲ. ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ, ಚರಂಡಿಗಳ ಸಮಸ್ಯೆ ತುಂಬಾ ಇದೆ ಆದರೆ ಯಾವ ಸಮಸ್ಯೆಗೆ ಪರಿಹಾರ ಕೊಡುತ್ತಿಲ್ಲ. ಜನರ ಸಮಸ್ಯೆಗೆ ಸರಿಯಾದ ಸ್ಪಂದನೆ ಇಲ್ಲ. ಸರಕಾರಿ ಅಧಿಕಾರಿಗಳು ಜನರ ಸೇವಕರು ಆದರೆ ಅವರು ತಮ್ಮ ಸ್ವಂತ ಲಾಭಕ್ಕಾಗಿ ಕೆಲಸ ಮಾಡ್ತಾ ಇದ್ದಾರೆ. ಸರ್ಕಾರದಿಂದ ಎಲ್ಲ ತರಹದ ಯೋಜನೆಗಳನ್ನು ಜನರಿಗೆ ತಲುಪುವಲ್ಲಿ ವಿಫಲವಾಗಿದೆ. ಯಾರೇ ಒಬ್ಬ ಸಾಮಾನ್ಯ ಜನ ಪಂಚಾಯತ್ ಗೆ ಹೋದರೆ ದಬ್ಬಾಳಿಕೆ ಮಾಡುತ್ತಾರೆ. ಲಂಚ ಇದ್ದರೆ ಮಾತ್ರ ಕೆಲಸ ಸಾಧ್ಯ ಅಲ್ಲಿ. ಗುತ್ತಿಗೆದಾರ ಕೆಲಸ ಮಾಡಿ ವರ್ಷಗಳು ಆದರು ಇನ್ನೂ ಹಣ ಪಾವತಿ ಆಗಿಲ್ಲ ಅಂದರೆ ಸ್ವಲ್ಪ ಯೋಚನೆ ಮಾಡಾಬೇಕಾದ ವಿಷಯ ಆಗಿರುತ್ತದೆ.
ತನ್ನೂರಿನ ಸಮಸ್ಯೆಗೆ ಸದಾ ಸಪ್ಪಂದಿಸಿ ಪಂಚಾಯತ್ ವಿರುದ್ಧ ಧ್ವನಿ ಎತ್ತುವ ಅಶ್ವಿನ್ ಅವರ ಜನಪರ ಕಾಳಜಿಗೆ ನಮ್ಮ ಗ್ರಾಮಸ್ಥರ ಬೆಂಬಲವಿದೆ. ಪ್ರತಿಯೊಂದು ಕೆಲಸ ಕಾರ್ಯಗಳಿಗೆ ಅಸಡ್ಡೆ, ಉಢಾಫೆಯಾಗಿ ವರ್ತಿಸುವ ಪಂಚಾಯತ್ ನ ಸಿಬ್ಬಂದಿ, ಪಿಡಿಓ ರಿಂದ ಇಲ್ಲಿನ ಜನರು ರೋಷಿ ಹೋಗಿದ್ದಾರೆ.ಶಾಸಕರು ಇನ್ನಾದರೂ ಜನ ಸ್ನೇಹಿ ಅಧಿಕಾರಿಗಳನ್ನು ಉಪ್ಪೂರ್ ಪಂಚಾಯತ್ ಗೆ ನಿಯುಕ್ತಿಗೊಳಿಸ ಬೇಕಾಗಿ ವಿನಂತಿ
Good job ashwin
ತಾನೋರ್ವ ಶಾಸಕರ ಆಪ್ತ ನೆಂದು ಹೇಳಿಕೊಂಡು ತಿರುಗಾಡುತ್ತಿರುವ ಸ್ವಯಂಘೋಷಿತ ಈ ವ್ಯಕ್ತಿ ಕಳೆದ ಪಂಚಾಯತ್ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದು, ಈ ಬಾರಿಯಾದರೂ ಗೆಲ್ಲಬೇಕೆಂದು ವಿವಿಧ ಕುತಂತ್ರ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಶಯ. ತನ್ನದೆ ಪಕ್ಷದ ಆಡಳಿತವಿರುವ ಪಂಚಾಯತ್ ನಲ್ಲಿ ತಾನು ಹೇಳಿದಾಗೆ ಆಗಬೇಕೆಂಬ ಹಟಮಾರಿ ದೋರಣೆ ಇವರದು. ಸ್ವಯಂಘೋಷಿತ ಗುತ್ತಿಗೆದಾರನಾಗಿರುವ ಈತ, ದಲಿತ ಮಹಿಳೆಯ ಮೇಲೆ ತನ್ನ ಅವ್ಯಾಚವಾಗಿ ಬೈದದ್ದು ನಿಜಕ್ಕೂ ಖಂಡನೀಯ.
ಶಾಸಕರ ಅಪ್ತ ಎಂದು ಮಾಡಿದ್ದೆಲ್ಲವೂ ಸರಿ ಎಂಬ ರೀತಿಯಲ್ಲಿ ವರ್ತಿಸುವ ಅಶ್ವಿನ್ ರೋಚ್ ಮಾಡಿದ್ದು ನಿಜಕ್ಕೂ ಖಂಡನೀಯ. ಸಿಬ್ಬಂದಿಗಳಿಗೆ ಕೇವಲ ಅಶ್ವಿನ್ ರವರಿಗೆ ಬಿಲ್ ಮತ ನೀಡುವುದು ಕೆಲಸವಲ್ಲ.. ಗ್ರಾಮದ ಸಮಸ್ಯೆಗಳಿಗೆ ಸ್ಪಂದಿಸುವುದು ಮುಖ್ಯವಾಗಿದೆ. ತನಗೆ ಬಿಲ್ ದೊರೆತಿಲ್ಲವೆಂದದಾರೆ ಅದಕ್ಕೆ ಕಾರಣ ಯಾರು ಅಂತ ಮೊದಲು ಹುಡುಕಬೇಕು.. ಬದಲಾಗಿ ಮಹಿಳಾ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಳ್ಳುವುದು ಮತ್ತು ಅದನ್ನು ಸೋಶಿಯಲ್ ಮಾಧ್ಯಮಕ್ಕೆ ಶೇರ್ ಮಾಡೋದು ೆಎಷ್ಟು ಸರಿ???
ಅಶ್ವಿನ್ ಅವರು ತಮ್ಮ ಗ್ರಾಮದ ಅನೇಕ ಸಮಸ್ಯೆಗೆ ಸ್ಪಂದಿಸಿದ್ದಾರೆ, ಮೊನ್ನೆಯ ಘಟನೆಯಲ್ಲಿ ಮಾತ್ರವಲ್ಲದೆ, ಪಂಚಾಯತ್ ನ ಅನೇಕ ದುರಾಡಳಿತ ಬಗ್ಗೆ ಅಧಿಕಾರಿಗಳ ಗಮನ ಸೆಳೆಯುವಲ್ಲಿ ಊರಿನ ಜನರ ಜೊತೆ ಇರುತ್ತಾರೆ. ಸಿಬ್ಬಂದಿಗಳು ತಮ್ಮ ಕೆಲಸ ಕಾರ್ಯಗಳಿಗೆ ಕೊಡದ ಒತ್ತನ್ನು , ನಮಗೆ ನಿಂದನೆ ಆಗಿದೆ ಎನ್ನುವ ದೂರು ಕೊಡುವ ಇವರು ಜನರ ಕೆಲಸ ಮಾಡಿಕೊಡುವಲ್ಲಿ ಮುರ್ತಜಿ ವಹಿಸಿದರೆ ಸಾಕಿತ್ತು.
Very worst panchayathu upoor grama panchayathu
Elina adakari galu hagu staff members navaru e grama panchayath na kelasake yavude rathiyali yogyarala enthavanrenda gramasthrige thumba thondare aguthide… Dayavittu antha kalaharna maduva vyarth adikriyanu hagu staff navaranu kelasa denda vajja madi gramasthrige upakarisi…. Eli yavude vishaya jathi nidane ella alli agirivudu Gramasthar nidane mathu avamana….