ಊಟ ಮಾಡುವಾಗ ಗಂಟಲಲ್ಲಿ ಮಾಂಸದ ಚೂರು ಸಿಲುಕಿ ಎಂಎಸ್ಸಿ ವಿದ್ಯಾರ್ಥಿನಿ ಮೃತ್ಯು
ಪಾಲಕ್ಕಾಡ್ ಮೇ 24 : ಕೇರಳದ ಪಾಲಕ್ಕಾಡ್ ನಲ್ಲಿ ಎಂಎಸ್ಸಿ ಸೈಕಾಲಜಿ ವಿದ್ಯಾರ್ಥಿನಿಯೊಬ್ಬರು ಊಟ ಮಾಡುವಾಗ ಗಂಟಲಲ್ಲಿ ಮಾಂಸದ ಚೂರು ಸಿಲುಕಿ ಮೃತಪಟ್ಟಿದ್ದಾರೆ.
ಮನ್ನಾರ್ ಕಾಡ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಯಹ್ಯಾ ಎಂಬವರ ಮಗಳು ಫಾತಿಮಾ ಹನಾನ್ (22) ಮೃತ ವಿದ್ಯಾರ್ಥಿನಿ. ಭಾನುವಾರ ಫಾತಿಮಾ ಮನೆಯಲ್ಲಿ ಊಟ ಮಾಡುತ್ತಿದ್ದಾಗ ಮಾಂಸದ ತುಂಡು ಗಂಟಲಲ್ಲಿ ಸಿಲುಕಿ ಕೊಂಡಿತ್ತು. ತಕ್ಷಣ ಅವರನ್ನು ಪೆರಿಂತಲ್ಮಣ್ಣಾದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಮೃತರು ತಾಯಿ, ಪತಿ, ಸಹೋದರರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.