ಮೂರು ಪ್ರತ್ಯೇಕ ಮಟ್ಕಾ ಜುಗಾರಿ ಪ್ರಕರಣ: 7 ಮಂದಿ ಪೊಲೀಸ್ ವಶಕ್ಕೆ
ಉಡುಪಿ ಮೇ 24 (ಉಡುಪಿ ಟೈಮ್ಸ್ ವರದಿ): ಬ್ರಹ್ಮಾವರ, ಬೈಂದೂರು, ತಾಲೂಕಿನಲ್ಲಿ ನಡೆದ ಮೂರು ಪ್ರತ್ಯೇಕ ಮಟ್ಕಾ ಜುಗಾರಿ ಪ್ರಕರಣಕ್ಕೆ ಸಂಬಂಧಿಸಿ ಏಳು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬ್ರಹ್ಮಾವರದ ಹೆಗ್ಗುಂಜೆ ಗ್ರಾಮದ ಶಿರೂರು ಮೂರುಕೈನ ಸಾರ್ವಜನಿಕ ಸ್ಥಳದಲ್ಲಿ ಚಂದ್ರ ಮರಕಾಲ (49) ಹಾಗೂ ಬೈಂದೂರು ತಾಲೂಕು ಶಿರೂರು ಗ್ರಾಮದ ಐ.ಆರ್.ಬಿ ಕಟ್ಟಡದ ಹಿಂಬದಿಯ ಹಾಡಿಯ ಸಾರ್ವಜನಿಕ ಸ್ಥಳದಲ್ಲಿ ರಮೇಶ ನಾರಾಯಣ ನಾಯಕ್ (40), ರಾಜು ದುರ್ಗಪ್ಪ ನಾಯ್ಕ್ (42), ಮಂಜುನಾಥ ಗಣಪಯ್ಯ ನಾಯ್ಕ್ (46), ಸತೀಶ ಮಂಜುನಾಥ ನಾಯ್ಕ್ (28), ವಿನೋದ ಶನಿವಾರ್ ನಾಯ್ಕ್ (21) ಎಂಬ 5 ಮಂದಿಯನ್ನು ಮತ್ತು ಬ್ರಹ್ಮಾವರ ತಾಲೂಕಿನ ವಂಡಾರು ಗ್ರಾಮದ ಮಾರ್ವಿ ಎಂಬಲ್ಲಿನ ಬಸ್ಸು ನಿಲ್ದಾಣದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಂಜಪ್ಪ (44) ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಗಳಿಂದ ಬ್ರಹ್ಮಾವರದ ಹೆಗ್ಗುಜೆಯ ಪ್ರಕರಣದಲ್ಲಿ 1050 ರೂ, ಒಟ್ಟು 7,260 ರೂ., ಬೈಂದೂರಿನ ಶಿರೂರು ಗ್ರಾಮದ ಪ್ರಕರಣದಲ್ಲಿ 5380 ಹಾಗೂ ಬ್ರಹ್ಮಾವರದ ವಂಡಾರುವಿನ ಪ್ರಕರಣದಲ್ಲಿ 830 ಸೇರಿ ಒಟ್ಟು 7260 ರೂ ಗಳನ್ನು ಮತ್ತು ಮಟ್ಕಾ ಜುಗಾರಿಗೆ ಬಳಸುವ ಇತರ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಮೂರು ಪ್ರಕರಣಕ್ಕೆ ಸಂಬಂಧಿಸಿ ಬ್ರಹ್ಮಾವರ, ಬೈಂದೂರು , ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣ ದಾಖಲಾಗಿದೆ.