ಕಳಚಿದ ವಿಗ್… ಮುರಿದು ಬಿದ್ದ ಮದುವೆ…!

ಲಕ್ನೋ ಮೇ 23: ಮದುವೆ ಸಮಾರಂಭದಲ್ಲಿ ವರನ ವಿಗ್ ಕಳಚಿ ಬಿದ್ದ ಪರಿಣಾಮ ಬೋಳು ತಲೆಯ ವಿಚಾರ ತಿಳಿದು ವಿವಾಹ ಮಂಟಪದಲ್ಲೇ ವಧು ಮದುವೆ ಬೇಡವೆಂದ ಘಟನೆ ಉನ್ನಾವೋದಲ್ಲಿ ನಡೆದಿದೆ. 

ಈ ಬಗ್ಗೆ ಮಾಧ್ಯಮದಲ್ಲಿ ಪ್ರಕಟಗೊಂಡಿರುವ ವರದಿಯ ಪ್ರಕಾರ, ಉನ್ನಾವೋದಲ್ಲಿ ಮದುವೆ ಸಮಾರಂಭ ಸಂಭ್ರಮದಿಂದ ನಡೆಯುತ್ತಿತ್ತು. ಈ ಸಂಭ್ರಮದ ನಡುವೆ ವರ ತರಾತುರಿಯಲ್ಲಿ ಮಂಟಪದತ್ತ ಬರುತ್ತಿದ್ದ ವೇಳೆ ತಲೆಸುತ್ತು ಬಂದು ನೆಲದ ಮೇಲೆ ಬಿದ್ದಿದ್ದಾನೆ. ಈ ವೇಳೆ ವರನ ತಲೆಯಲ್ಲಿದ್ದ ವಿಗ್ ಕಳಚಿಬಿದ್ದಿದ್ದು,  ಬೋಳು ತಲೆಯ ವಿಚಾರ ಬಹಿರಂಗಗೊಂಡಿದೆ. 

ಮದುವೆ ಮಾತುಕತೆ ಸಂದರ್ಭದಲ್ಲಿ ವರ ವಧುವಿನ ಮನೆಯವರ ಬಳಿ ಬೋಳು ತಲೆಯ ವಿಚಾರವನ್ನು ಮುಚ್ಚಿಟ್ಟಿದ್ದು, ಇದೀಗ ತನ್ನ ಭಾವಿ ಪತಿಯ ತಲೆ ಬೋಳು ಎಂಬ ವಿಚಾರ ತಿಳಿಯುತ್ತಿದ್ದಂತೆಯೇ ವಧು ವಿವಾಹವಾಗಲು ನಿರಾಕರಿಸಿದ್ದಾಳೆ. ಈ ವಿಚಾರವಾಗಿ ಕುಟುಂಬ ಸದಸ್ಯರು, ಸಂಬಂಧಿಕರು ವಧುವಿನ ಮನವೊಲಿಸಲು ಪ್ರಯತ್ನಿಸಿದರು ಕೂಡಾ ಆಕೆ ತನ್ನ ನಿರ್ಧಾರವನ್ನು ಬದಲಿಸಲು ಒಪ್ಪಲಿಲ್ಲ. ಮದುವೆ ಮಂಟಪದಲ್ಲಿ ವಿವಾಹ ಮುರಿದು ಬೀಳುತ್ತಿದ್ದಂತೆಯೇ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಆದರೂ ವಧು ಬೋಳು ತಲೆ ವರನನ್ನು ವಿವಾಹವಾಗಲು ನಿರಾಕರಿಸಿದ್ದಾಳೆ.

ಇದಾದ ನಂತರ ಹಿರಿಯರ ಸಮ್ಮುಖದಲ್ಲಿ ಮಾತುಕತೆ ನಡೆದಿದ್ದು, ಮದುವೆಗೆ 5.66 ಲಕ್ಷ ರೂ. ಖರ್ಚಾಗಿದ್ದು, ಅದನ್ನು ತಮಗೆ ವಾಪಸ್ ನೀಡಬೇಕೆಂದು ವಧುವಿನ ಕುಟುಂಬ ಸದಸ್ಯರು ಬೇಡಿಕೆ ಇಟ್ಟಿದ್ದರು. ಬಳಿಕ ವರನ ಕಡೆಯವರು ವಧುವಿನ ತಂದೆಗೆ ಹಣವನ್ನು ವಾಪಸ್ ನೀಡಿರುವುದಾಗಿ ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!