ಉಡುಪಿ: ಆಶಾ ಕಾರ್ಯಕರ್ತೆ ರಾಜೀವಿಯವರಿಗೆ ಸನ್ಮಾನ
ಉಡುಪಿ: ಆಶಾ ಕಾರ್ಯಕರ್ತೆ, ರಿಕ್ಷಾ ಚಾಲಕಿ ರಾಜೀವಿ ಆರ್. ನಾಯಕ್ ಸಲ್ಲಿಸಿದ ಮಾನವೀಯ ಸೇವೆಯನ್ನು ಗುರುತಿಸಿ ಪೆರ್ಣಂಕಿಲ ಫ್ರೆಂಡ್ಸ್ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ ವತಿಯಿಂದ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದ ಅಂಗವಾಗಿ ಪೆರ್ಣಂಕಿಲ ಜಯಪ್ರಕಾಶ್ ಕಾಮತ್ ಮತ್ತು ಗುರುದಾಸ್ ಭಂಡಾರಿಯವರ ಮಾರ್ಗದರ್ಶನದಲ್ಲಿ ಫ್ರೆಂಡ್ಸ್ ಸ್ಫೋರ್ಟ್ಸ್ ಅಂಡ್ ಕಲ್ಚರಲ್ ಅಸೋಶಿಯೇಶನ್ ವತಿಯಿಂದ ರಾಜೀವಿ ಆರ್ ನಾಯಕ್ ಅವರ ಮನೆಯ ಆವರಣ ಗೋಡೆ, ಗೇಟ್ ರಸ್ತೆಯಿಂದ ಮನೆ ಸಂಪರ್ಕದ ಮೋರಿಯನ್ನು ನಿರ್ಮಿಸಿ ಕೊಡಲಾಯಿತು. ಕಾಮಗಾರಿಗಳನ್ನು ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆಯವರು ಉದ್ಘಾಟಿಸಿದರು. ತಾಲೂಕು ಪಂಚಾಯತ್ ಸದಸ್ಯರಾದ ಲಕ್ಷ್ಮೀನಾರಾಯಣ ನಾಯಕ್ ಅವರು ರಾಜೀವಿ ಅವರ ಸಾಧನೆಗಳನ್ನು ವಿವರಿಸಿದರು. ಈ ಕಾರ್ಯಕ್ರಮಕ್ಕೆ ಧನಸಹಾಯ ಮಾಡಿದ ದಾನಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.
ರಾಜೀವಿ ಆರ್ ನಾಯಕ್ ಸನ್ಮಾನ ಕಾರ್ಯಕ್ರಮದಲ್ಲಿ ಸಚಿವರಾದ ವಿನಯ್ ಕುಮಾರ್ ಸೊರಕೆ ಹಾಗೂ ಕಾಂಗ್ರೆಸ್ ಯುವ ನಾಯಕ ಅಲೆವೂರು ಹರೀಶ್ ಕಿಣಿ ಮಾತನಾಡಿ ರಾಜೀವಿ ಆರ್ ನಾಯಕ್ ಅವರಿಗೆ ಶುಭ ಹಾರೈಸಿದರು.
ಸನ್ಮಾನ ಸ್ವೀಕರಿಸಿ ರಾಜೀವಿ ಆರ್ ನಾಯಕ್ ಅವರು ಮಾತನಾಡಿ ಪೆರ್ಣಂಕಿಲ ಊರಿಂದ ಸಂದ ದೊಡ್ಡ ಸನ್ಮಾನ ಎಂದು ಬಣ್ಣಿಸಿದರು.
ಸನ್ಮಾನ ಕಾರ್ಯಕ್ರಮದಲ್ಲಿ ಅಜೆಕಾರು ಸಹಕಾರಿ ಸಂಘ ಅಧ್ಯಕ್ಷರಾದ ಭವಾನಿ ಶಂಕರ್ ನಾಯಕ್ ಫ್ರೆಂಡ್ಸ್ ಸ್ಫೋರ್ಟ್ಸ್ ಅಂಡ್ ಕಲ್ಚರಲ್ ಅಸೋಶಿಯೇಶನ್ ಅಧ್ಯಕ್ಷ ಮನೀಶ್ ಬಟ್, ಕಾರ್ಯದರ್ಶಿ ನಾಗಭೂಷಣ, ನಾಯಕ್ ಕ್ಲಬ್ಬಿನ ಇತರ ಸದಸ್ಯರು ,ತಾಲೂಕು ಪಂಚಾಯತ್ ಸದಸ್ಯರಾದ ಸಂಧ್ಯಾ ಶೆಟ್ಟಿ ಕೋಡಿಬೆಟ್ಟು, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಣೇಶ ಶೆಟ್ಟಿ ಪಡುಬೆಟ್ಟು, ಗ್ರಾಮ ಪಂಚಾಯತ್ ಸದಸ್ಯರಾದ ಕುದಿ ಸಂತೋಷ್ ಶೆಟ್ಟಿ, ಚರಣ್ ವಿಠಲ್, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಲತಾ ಎಸ್ ಕಾಮತ್, ಸುಂದರ ಸೇರಿಗಾರ್, ಪ್ರಕಾಶ್ ಶೆಟ್ಟಿ ಮರ್ವಾಡಿ, ಗಣಪಯ್ಯ ನಾಯಕ್ ಪೆರಣಂಕಿಲ, ಮರಾಠಿ ಸಂಘದ ಅಧ್ಯಕ್ಷರಾದ ಲಕ್ಷ್ಮಣ್ ನಾಯಕ್, ಗ್ರಾಮಸ್ಥರಾದ ಸದಾನಂದ ವಾಗ್ಲೆ ನಾಲ್ಕು ಪಾಲು ಉಪೇಂದ್ರ ವಾಗ್ಲೆ ಸದಾನಂದ ಪ್ರಭು ಆಸುಪಾಸಿನ ಹತ್ತು ಸಮಸ್ತರು ಉಪಸ್ಥಿತರಿದ್ದರು.
ಉಪನ್ಯಾಸಕ ಸುಧೀರ್ ಚಿಂಬೆಲ್ ಕರ್ ಇವರು ಕಾರ್ಯಕ್ರಮ ನಿಯೋಜಿಸಿ ಧನ್ಯವಾದಗಳನ್ನು ಸಮರ್ಪಿಸಿದರು.