ಉಡುಪಿ: ಆವರಣವಿಲ್ಲದ ಬಾವಿಗೆ ಬಿದ್ದು ನಿವೃತ್ತ ಪೌರಕಾರ್ಮಿಕ ಮೃತ್ಯು
ಉಡುಪಿ ಮೇ 23: ಕತ್ತಲೆಯಲ್ಲಿ ತಿಳಿಯದೆ ಆಕಸ್ಮಿಕವಾಗಿ ಆವರಣವಿಲ್ಲದ ಬಾವಿಗೆ ಬಿದ್ದು ಬೀಡಿನಗುಡ್ಡೆಯ ನಿವಾಸಿ ಸಂಜೀವ ಎಂಬವರು ಮೃತಪಟ್ಟಿದ್ದಾರೆ.
ಸಂಜೀವ (65) ಅವರು ನಿವೃತ್ತ ಪೌರಕಾರ್ಮಿಕರಾಗಿದ್ದು, ಉಡುಪಿ ತಾಲೂಕು 76-ಬಡಗುಬೆಟ್ಟು ಗ್ರಾಮದ ಬೀಡಿನಗುಡ್ಡೆಯ ಪೌರಕಾರ್ಮಿಕರ ಕಾಲೋನಿಯಲ್ಲಿ ವಾಸಿಸುತ್ತಿದ್ದರು. ವಿಪರೀತ ಮದ್ಯ ವ್ಯಸನಿಯಾಗಿದ್ದ ಇವರು, ಮರೆವು ಖಾಯಿಲೆಯಿಂದ ಬಳಲುತ್ತಿದ್ದರು. ಇವರು ಸುಮಾರು ಎರಡು-ಮೂರು ದಿನಗಳ ಹಿಂದೆ ರಾತ್ರಿಯ ಸಮಯ ಕತ್ತಲೆಯಲ್ಲಿ ಕಾಣಿಸದೇ ಮನೆಯ ಹತ್ತಿರದ ಜಯಂತಿ ಪೈ ಎಂಬುವರ ಮನೆಯ ಆವರಣವಿಲ್ಲದಿರುವ ಬಾವಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.