ವಾಹನಗಳ ಮೇಲೆ ಯಾವುದೇ ಸಂಘ, ಸಂಸ್ಥೆಗಳ ಹೆಸರು, ಚಿಹ್ನೆ, ಲಾಂಛನ ಹಾಕುವಂತಿಲ್ಲ ರಾಜ್ಯ ಸರ್ಕಾರ ಆದೇಶ
ಬೆಂಗಳೂರು ಮೇ 23: ರಾಜ್ಯದ ಯಾವುದೇ ವಾಹನಗಳ ನೋಂದಣಿ ಫಲಕಗಳ ಮೇಲೆ ಅನಧಿಕೃತ ಫಲಕಗಳನ್ನು ಯಾವುದೇ ಸಂಘ, ಸಂಸ್ಥೆಗಳ ಹೆಸರು, ಚಿಹ್ನೆ, ಲಾಂಛನವನ್ನು ಹಾಕುವಂತಿಲ್ಲ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಕುರಿತಂತೆ ಕರ್ನಾಟಕ ರಾಜ್ಯಪತ್ರದಲ್ಲಿ ಸುತ್ತೋಲೆ ಹೊರಡಿಸಿರುವ ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಅವರು, ಖಾಸಗಿ ವಾಹನಗಳ ಮೇಲೆ ಸರ್ಕಾರ, ನಿಗಮ ಮಂಡಳಿಗಳ ಹೆಸರು ಹಾಕುವಂತಿಲ್ಲ, ವಾಹನದ ಮೇಲೆ ಸರ್ಕಾರ, ಸಂಸ್ಥೆಗಳ ಹೆಸರಿದ್ದರೆ ದಂಡ ಹಾಕಲು ಸೂಚನೆ ನೀಡಲಾಗಿದೆ. ಲಾಂಛನ ಹಾಕಿದರೆ, ದಂಡ ಹಾಕಿ, ಲಾಂಛನ ಹಾಗೂ ಹೆಸರು ತೆಗೆಸಬೇಕಾಗಿದ್ದು, ಮೇ 24ರ ಒಳಗೆ ತೆರವಿನ ಅಭಿಯಾನ ಆರಂಭಿಸಲು ಸೂಚನೆ ನೀಡಲಾಗಿದೆ. ಹಲವು ನೌಕರರು, ಸಿಬ್ಬಂದಿ ಸರ್ಕಾರದ ಲಾಂಛನ ಹೆಸರು ಹಾಕಿದ್ದಾರೆ, ಈ ಹಿನ್ನೆಲೆ ಖಾಸಗಿ ವಾಹನಗಳ ಮೇಲೆ ಸರ್ಕಾರಿ ಲಾಂಛನ ತೆರವಿಗೆ ಸೂಚನೆ ನೀಡಲಾಗಿದೆ.
ಕರ್ನಾಟಕ ಮೋಟಾರು ವಾಹನಗಳ ನಿಯಮಗಳ1989ರ ನಿಯಮ145-ಎ ರಲ್ಲಿ ಖಾಸಗಿ ವಾಹನಗಳು ಸರ್ಕಾರದ ಲಾಂಛನ ಮತ್ತು ಹೆಸರುಗಳನ್ನು ವಾಹನಗಳ ಮೇಲೆ ಪ್ರದರ್ಶಿಸುವುದನ್ನು ನಿರ್ಬಂಧಿಸಲಾಗಿದೆ. ತಮ್ಮ ವಾಹನಗಳ ಮೇಲೆ ಸರ್ಕಾರಿ ಲಾಂಛನ ಅಥವಾ ಹೆಸರುಗಳನ್ನು ಅಳವಡಿಸಬೇಕಾದಲ್ಲಿ, ಕೇಂದ್ರ ಸರ್ಕಾರದಿಂದ ಅನುಮತಿ ಪಡೆದುಕೊಳ್ಳುವುದು ಅವಶ್ಯಕವಾಗಿರುತ್ತದೆ ಎಂದು ತಿಳಿಸಿದ್ದಾರೆ.