ಕುಂದಾಪುರ ಮೂಲದ ಬಂಟ ಸಮುದಾಯದ ಅನಿಲ್ ಹೆಗ್ಡೆ ಬಿಹಾರದ ರಾಜ್ಯಸಭಾ ಸದಸ್ಯ ಸ್ಥಾನದ ಅಭ್ಯರ್ಥಿಯಾಗಿ ಆಯ್ಕೆ
ಮಂಗಳೂರು: ಭಾರತದ ಮಾಜಿ ರಕ್ಷಣಾ ಸಚಿವ ದಿವಂಗತ ಜಾರ್ಜ್ ಫೆರ್ನಾಂಡಿಸ್ ಅವರ ಸಹವರ್ತಿ ಕರ್ಮದಲ್ಲಿ ಕಾಯಕದಲ್ಲಿ ಜೀವನದಲ್ಲಿ ಸಮಾಜವಾದಿಯಾಗಿ ರಾಜನೀತಿಯಲ್ಲಿ ಫಕೀರನಂತೆ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ 12 ವರ್ಷಗಳಿಂದ ಪಕ್ಷದ ಕಚೇರಿಯಲ್ಲಿ ತನ್ನ ಜೀವನವನ್ನು ಸಾಗಿಸಿ ಹಿಂದೆ ಮುಂದೆ ಯಾರು ಇಲ್ಲದೆ ಸಮಾಜಕ್ಕಾಗಿ ತನ್ನನ್ನು ಸಮರ್ಪಣೆ ಮಾಡಿದ ಮಹಾನ್ ಚಿಂತಕ ಬಂಟ ಸಮುದಾಯದ ಅನಿಲ್ ಹೆಗ್ಡೆ ಇವರನ್ನು ಬಿಹಾರದ ಮಾನ್ಯ ಮುಖ್ಯಮಂತ್ರಿಗಳಾದ ನಿತೀಶ್ ಕುಮಾರ್ ಅವರು ಮುಂಬರುವ ಚುನಾವಣೆಯಲ್ಲಿ ರಾಜ್ಯಸಭಾ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಾರೆ.
ಗುಜರಾತಿನ ಕಾಂಡ್ಲಾ ಪ್ರದೇಶದಲ್ಲಿ ಬಹುರಾಷ್ಟ್ರೀಯ ಕಂಪೆನಿಗಳ ಅವ್ಯವಹಾರದ ಬಗ್ಗೆ ಜಾರ್ಜ್ ಫೆರ್ನಾಂಡಿಸ್ ಅವರ ನೇತೃತ್ವದಲ್ಲಿ ನಡೆದ ವಿರೋಧಿ ಹೋರಾಟದಲ್ಲಿ ನಿರಂತರ 5100 ದಿನಗಳ ಚಳವಳಿ ಮತ್ತು ಸ್ವತಹ 4000 ಬಾರಿ ದಸ್ತಗಿರಿ ಹೊಂದಿ ಗಿನ್ನೆಸ್ ದಾಖಲೆ ಸೇರ್ಪಡೆಗೊಳ್ಳಬಹುದಾದ ಹೋರಾಟವನ್ನು ಮಾಡಿ ಸಮಾಜಕ್ಕಾಗಿ ತನ್ನನ್ನು ಸಮರ್ಪಿಸಿ ಜೆಡಿಯು ಪಕ್ಷದ ನಿಷ್ಠಾವಂತ ಸಾಮಾನ್ಯ ಕಾರ್ಯಕರ್ತನಾಗಿ ರುವ ಹಿನ್ನೆಲೆಯಲ್ಲಿ ಇದೀಗ ರಾಜ್ಯ ಸಭಾ ಸದಸ್ಯ ಸ್ಥಾನದ ಅಭ್ಯರ್ಥಿಯಾಗಿದ್ದಾರೆ. ಅನಿಲ್ ಹೆಗ್ದೆಯವರ ಸಮಾಜವಾದಿ ಚಿಂತನೆಯೊಂದಿಗೆ ಹೆಚ್ಚಿನ ದೇಶ ಸೇವೆ ಮಾಡಲು ಅವಕಾಶ ದೊರೆತಿದೆ.