ಟಿಪ್ಪು ಹುಲಿಯು ಅಲ್ಲ, ಕರಡಿಯೂ ಅಲ್ಲ, ಸಿಂಹವೂ ಅಲ್ಲ, ಆತ ಒಬ್ಬ ಕ್ರೂರಿ- ಸಂಸದ ಪ್ರತಾಪ್ ಸಿಂಹ

ಹಾಸನ: ಟಿಪ್ಪು ಸುಲ್ತಾನ್ ಒಬ್ಬ ಹುಲಿಯು ಅಲ್ಲ ಕರಡಿಯೂ ಅಲ್ಲ. ಸಿಂಹವೂ ಅಲ್ಲ. ಆತ ಒಬ್ಬ ಕ್ರೂರಿ ಮಾತ್ರ. ಯಾವುದೇ ವ್ಯಕ್ತಿಯನ್ನು ಬಂಧಿಸಿ ನಂತರ ಆತನಿಗೆ ಚೂರಿ ಹಾಕುವುದು ಚರ್ಮ ಸುಲಿಯುವುದು ಕ್ರೌರ್ಯ ಎನಿಸಿಕೊಳ್ಳುತ್ತದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಹಾಸನದಲ್ಲಿ ಮಾತನಾಡಿದ ಅವರು, ಭಾರತದ ಇತಿಹಾಸವನ್ನು ನಾವುಗಳು ಯಾವ ರೀತಿ ಬರೆದು ನೋಡಬೇಕು. ವಸ್ತು ನಿಷ್ಠವಾಗಿ ನೋಡಬೇಕಾ?, ಇಲ್ಲವೇ ಗಿರೀಶ್ ಕಾರ್ನಡ್ ಬರೆದಂತಹ ಟಿಪ್ಪುವಿನ ಕನಸುಗಳನ್ನು ಎಂದು ಕಾಲ್ಪನಿಕವಾದ ಪುಸ್ತಕಗಳ ರೂಪವಾಗಿ, ನಾಟಕಗಳ ರೂಪವಾಗಿ ನೋಡಬೇಕಾ? ಎಂದರು.

ಟಿಪ್ಪು ತನ್ನ ಮಕ್ಕಳನ್ನು ಒತ್ತೆಯಾಗಿಟ್ಟು ತನ್ನ ಜೀವ ಉಳಿಸಿಕೊಂಡಿರುವ ವ್ಯಕ್ತಿ. ಆತನನ್ನು ಮೈಸೂರು ಹುಲಿ ಎಂದು ಕರೆಯಲು ಸಾಧ್ಯವೇ?” ಮೈಸೂರಿನ ಮಹಾರಾಜರು ದೇಶಕ್ಕೆ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ ಅಂತಹ ವ್ಯಕ್ತಿಗಳನ್ನು ಹುಲಿಯನ್ನಬೇಕೆ ಹೊರತು ಭಾಗಮಂಡಲ ದೇವಸ್ಥಾನದ ಮೇಲೆ ಕತ್ತಿ ಬೀಸಿದ ವ್ಯಕ್ತಿಯನ್ನು ಹುಲಿ ಎನ್ನಲು ಸಾಧ್ಯವಿಲ್ಲ ಎಂದರು. ಮೈಸೂರಿನ ವಿಶ್ವವಿದ್ಯಾಲಯ ತಂದಿರುವ ಇಂಡಿಯಾ ಎಂಬ ಪುಸ್ತಕದಲ್ಲಿ ಎಲ್ಲಿಯೂ ಕೂಡ ಟಿಪ್ಪು ಒಬ್ಬ ಹುಲಿ ಎಂದು ಪ್ರಸ್ತಾಪಿಸಿಲ್ಲ. ಹಾಗಾಗಿ ಟಿಪ್ಪು ಸುಲ್ತಾನ್ ಒಬ್ಬ ಹುಲಿಯನ್ನು ಯಾವುದಾದರೂ ದಾಖಲೆಗಳಿದ್ದರೆ ನನಗೆ ತೋರಿಸಿ ಎಂದು ಹೇಳಿದರು.

ಟಿಪ್ಪುವನ್ನು ಹುಲಿ ಅನ್ನೋದಕ್ಕೆ ಒಂದೇ ಒಂದು ಕಾರಣ ಕೊಡಿ. ಸಿದ್ದರಾಮಯ್ಯನ ಬಾಯಲ್ಲಿ ಭಗತ್ ಮಾತು ಕೇಳಿ ನನಗೆ ಸೋಜಿಗ ಆಯ್ತು ಎಂದು ಮೈಸೂರು ಸಂಸದ ಪ್ರತಾಪ್‌ ಸಿಂಹ ಹೇಳಿದ್ದಾರೆ. ಹಾಸನದಲ್ಲಿ ಮಾತನಾಡಿದ ಅವರು, ಮಕ್ಕಳನ್ನು ಒತ್ತೆಯಾಗಿಟ್ಟು ತನ್ನ ಜೀವವನ್ನು ಉಳಿಸಿಕೊಂಡ ವ್ಯಕ್ತಿ. ಇನ್ನು ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಟಿಪ್ಪು ಸುಲ್ತಾನ್ ಎಲ್ಲಿ ಸಾವನ್ನಪ್ಪಿದ? ಟಿಪ್ಪು ಸುಲ್ತಾನ್ ಯಾವ ರಣರಂಗದಲ್ಲಿ ಖಡ್ಗ ಹಿಡಿದು ಹೋರಾಟ ಮಾಡಿದ? ಯಾವ ಕಾರಣಕ್ಕೆ ಆತನನ್ನು ಹುಲಿ ಎಂದು ಸಂಬೋಧಿಸುತ್ತೀರಾ? ಹುಲಿ ಕೋಟೆಯೊಳಗೆ ಸಾಯಲು ಸಾಧ್ಯವೇ? ಎಂದರು.

ಕ್ರೌರ್ಯ ಮತ್ತು ಶೌರ್ಯದ ನಡುವೆ ಬಹಳಷ್ಟು ವ್ಯತ್ಯಾಸವಿರುವ ಬಗ್ಗೆ ಜನರು ಅರ್ಥ ಮಾಡಿಕೊಳ್ಳಬೇಕಾಗಿದೆ. ಯುದ್ಧ ಖೈದಿ ಆಗಿ ಬಂದವನ ಹಿಡಿದು ಎದುಗೆ ಚೂರಿ ಹಾಕುವುದು, ಆತನ ಚರ್ಮ ಸುಲಿಯುವುದು ಶೌರ್ಯವಲ್ಲ ಅದು ಕ್ರೌರ್ಯ” ಎಂದು ಪ್ರತಾಪ್ ಸಿಂಹ ಸ್ಪಷ್ಟಪಡಿಸಿದರು. ಸಿದ್ದರಾಮಯ್ಯ ಬಾಯಲ್ಲಿ ಭಗತ್ ಮಾತು ಕೇಳಿ ನನಗೆ ಸೋಜಿಗ ಆಯ್ತು. ಕಾಂಗ್ರೆಸ್‌ನವರಿಗೆ ಭಗತ್‌ ಸಿಂಗ್‌ ಮೇಲೆ ಯಾವಾಗಲೂ ಇಲ್ಲದ ಪ್ರೀತಿ ಈಗ ಯಾಕೆ ಬಂದಿದೆ ಎಂದು ಸಂಸದ ಪ್ರತಾಪ್‌ ಸಿಂಹ ಪ್ರಶ್ನಿಸಿದ್ದಾರೆ. ಹಾಸನದಲ್ಲಿ ಮಾತನಾಡಿದ ಅವರು, ಭಗತ್‌ ಸಿಂಗ್‌ ಹಾಗೂ ನಾರಾಯಣ ಗುರುಗಳ ವಿಚಾರವನ್ನು ಪಠ್ಯದಿಂದ ಕೈಬಿಟ್ಟಿಲ್ಲ. ಸುಮ್ಮನೇ ಹುಯಿಲೆಬ್ಬಿಸುವುದು ಬೇಡ. ಕಾಂಗ್ರೆಸ್‌ನವರಿಗೆ ಇಷ್ಟು ದಿನ ಕೇವಲ ಗಾಂಧೀಜಿ ಮಾತ್ರ ಕಾಣುತ್ತಿದ್ದರು. ಈಗ ಭಗತ್‌ ಸಿಂಗ್‌ ಮೇಲೆ ಪ್ರೀತಿ ಬಂದಿದೆ ಎಂದು ಕಿಡಿಕಾರಿದರು.

Leave a Reply

Your email address will not be published. Required fields are marked *

error: Content is protected !!