ಉಡುಪಿ: ಮತ್ತೆ16 ಪಾಸಿಟಿವ್, ನೂರರ ಗಡಿ ದಾಟಿದ ಸೋಂಕಿತರ ಸಂಖ್ಯೆ!

ಉಡುಪಿ: ಜಿಲ್ಲೆಯಲ್ಲಿ ಸಂಜೆಯ ವರದಿಯಲ್ಲಿ ಮತ್ತೆ 16 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು. ಇದರಿಂದ ಜಿಲ್ಲೆಯಲ್ಲಿ ಸೋಮವಾರ ಒಟ್ಟು 32 ಪ್ರಕರಣ ದೃಢಪಟ್ಟಿದೆ.

ಮುಂಬೈ -28 ದುಬೈ- 2, ಸ್ಥಳೀಯ ಇಬ್ಬರಲ್ಲಿ, ಪೋಲಿಸ್ ಹೆಡ್ ಕಾನ್ಸ್ಟೇಬಲ್ ಮತ್ತು ಜಿಲ್ಲಾ ಪಂಚಾಯತ್ ಸಿಬ್ಬಂದಿಯಾಗಿದ್ದಾರೆ. 10 ಮಹಿಳೆ, 12 ಗಂಡಸರು 10 ಮಕ್ಕಳು ಸೋಂಕಿತರಾಗಿದ್ದರೆ.

ಈ ಮೂಲಕ ಉಡುಪಿ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 108 ಕ್ಕೆ ಏರಿದೆ.

ರಾಜ್ಯದಲ್ಲಿ ಮಹಾಮಾರಿ ಕೊರೋನಾ ವೈರಸ್ ರಣಕೇಕೆ ಮುಂದುವರೆದಿದ್ದು ಇಂದು ಸಹ ಹೊಸದಾಗಿ 93 ಪ್ರಕರಣಗಳು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 2,182ಕ್ಕೆ ಏರಿಕೆಯಾಗಿದೆ.

ಉಡುಪಿ 32, ಕಲಬುರಗಿ 16, ಯಾದಗಿರಿ 15,  ಬೆಂಗಳೂರು 8, ದಕ್ಷಿಣ ಕನ್ನಡ 4, ಧಾರವಾಡ 4, ಬಳ್ಳಾರಿ 3, ಮಂಡ್ಯ 2, ಕೋಲಾರ 2, ಹಾಸನ, ತುಮಕೂರು, ಬೆಳಗಾವಿ, ವಿಜಯಪುರ, ಉತ್ತರಕನ್ನಡ, ರಾಮನಗರದಲ್ಲಿ ತಲಾ 1 ಪ್ರಕರಣ ಪತ್ತೆಯಾಗಿವೆ.

ರಾಜ್ಯದಲ್ಲಿ ಇಂದು ಹೊಸದಾಗಿ 93 ಪ್ರಕರಣಗಳು ಪತ್ತೆಯಾಗಿದ್ದು ಇದರೊಂದಿಗೆ ಸೋಂಕಿತರ ಸಂಖ್ಯೆ 2,182ಕ್ಕೆ ಏರಿಕೆಯಾಗಿದೆ. ಇನ್ನು ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 2 ಮೃತಪಟ್ಟಿದ್ದು ಸಾವಿನ ಸಂಖ್ಯೆ 44ಕ್ಕೆ ಏರಿಕೆಯಾಗಿದೆ. 

2,182 ಪ್ರಕರಣಗಳ ಪೈಕಿ 1,431 ಪ್ರಕರಣಗಳು ಸಕ್ರಿಯವಾಗಿದ್ದು 705 ಮಂದಿ ಗುಣಮುಖರಾಗಿದ್ದಾರೆ

2 thoughts on “ಉಡುಪಿ: ಮತ್ತೆ16 ಪಾಸಿಟಿವ್, ನೂರರ ಗಡಿ ದಾಟಿದ ಸೋಂಕಿತರ ಸಂಖ್ಯೆ!

  1. During this difficult time of sevier spreading of Covid 19, breaking the lock down decipline, in the night curfew time, some mischievous people who are creating problem. Even in the day time, some people are not wearing the mask or face cover in public places. They should be taught with out hesitation.

  2. If the people not able to understand the situation,arrest them, no need the second thought. This accuvally every citizen of the country understand that it is his life, which he has to take care, govt just assisting him to follow the procedure. Practical problem of our country is population.

Leave a Reply

Your email address will not be published. Required fields are marked *

error: Content is protected !!