ಲಯನ್ಸ್ ಕ್ಲಬ್ ಉಡುಪಿ: ಸಮಾಜ ಸೇವಕ ರವಿ ಕಟಪಾಡಿಗೆ ಸನ್ಮಾನ

ಉಡುಪಿ ಮೇ 23 (ಉಡುಪಿ ಟೈಮ್ಸ್ ವರದಿ): ಶ್ರೀಕೃಷ್ಣ ಜನ್ಮಾಷ್ಟಮಿಯಂದು ವೇಷಧರಿಸಿ ರೂ. 87 ಲಕ್ಷ ಸಂಗ್ರಹಿಸಿ ಅಶಕ್ತ ಮಕ್ಕಳ ಚಿಕಿತ್ಸೆಗೆ ಭರಿಸಿದ ಸಮಾಜ ಸೇವಕ ರವಿ ಕಟಪಾಡಿಯವರಿಗೆ ಲಯನ್ಸ್ ಕ್ಲಬ್ ಉಡುಪಿ ವತಿಯಿಂದ ಸನ್ಮಾನಿಸಲಾಯಿತು.

ಈ ವೇಳೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸನ್ಮಾನದ ಬದಲು ಸನ್ಮಾನಕ್ಕೆ ಬಳಸುವ ಹಾರ ಹಾಗೂ ಹಣ್ಣುಗಳಿಗೆ ನೀಡುವ ಹಣವನ್ನು ನನಗೆ ನೀಡಿ ಅದು ಅಸಾಹಯಕ ಮಕ್ಕಳ ಚಿಕಿತ್ಸೆಗೆ ನೆರವಾಗಲಿದೆ ಎಂದು ತಿಳಿಸಿದ್ದಾರೆ.

ಜಿಲ್ಲಾ ಸಂಯೋಜಕರಾದ ಲ. ರವಿರಾಜ್ ಯು.ಎಸ್. ಮಾತನಾಡಿ, ರವಿ ಕಟಪಾಡಿಯವರು ತಮ್ಮ ಕಷ್ಟದ ಜೀವನವನ್ನು ಲೆಕ್ಕಿಸದೆ ನೂರಾರು ಮಕ್ಕಳ ಚಿಕಿತ್ಸೆಗೆ ಹಣ ಸಂಗ್ರಹಿಸಿ ನೀಡುತ್ತಿರುವುದು ಶ್ಲಾಘನೀಯ. ಇವರ ಇಂತಹ ಕಾರ್ಯ ಎಲ್ಲರೂ ಮೆಚ್ಚುವಂತಹದ್ದು. ಸಂಘ ಸಂಸ್ಥೆಗಳು ಈ ರೀತಿಯ ಸ್ಪಂದಿಸುವ ಕೆಲಸಗಳನ್ನು ನಿರಂತರವಾಗಿ ಮಾಡಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಉಡುಪಿ ಲಯನ್ಸ್ ಕ್ಲಬ್ ಅಧ್ಯಕ್ಷ ಡಯಾನ ವಿಠ್ಠಲ ಪೈ, ಕಾರ್ಯದರ್ಶಿ ವಿಷ್ಣು ದಾಸ್ ಪಾಟೀಲ್, ಮಾಜಿ ಗವರ್ನರ್ ಲ. ಡಾ. ರವೀಂದ್ರನಾಥ್, ಲ. ಜಿ. ಡಿ.ರಾವ್, ಲ. ಭಾಸ್ಕರ್ ಶೆಟ್ಟಿ, ಲ.ರವಿರಾಜನ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!