13,500ಕೋಟಿ ರೂ. ವಂಚಿಸಿದಾತನನ್ನು ಬಂಧಿಸಿಲ್ಲ- ಟ್ವೀಟಿಸಿದವರನ್ನು ಬಂಧಿಸಿ ಮೆರೆಯುತ್ತಿದ್ದೇವೆ: ರಾಜ್ದೀಪ್
ಹೊಸದಿಲ್ಲಿ ಮೇ 23 : 13,500ಕೋಟಿ ರೂ. ವಂಚಿಸಿದಾತನನ್ನು 4 ವರ್ಷಗಳಿಂದ ಬಂಧಿಸಿಲ್ಲ, ಟ್ವೀಟಿಸಿದವರನ್ನು ಬಂಧಿಸಿ ಮೆರೆಯುತ್ತಿದ್ದೇವೆ ಎಂದು ಪತ್ರಕರ್ತ ರಾಜ್ದೀಪ್ ಸರ್ದೇಸಾಯಿ ಅವರು ಸರಕಾರವನ್ನು ಟೀಕಿಸಿದ್ದಾರೆ.
ಸಾಮಾಜಿಕ ತಾಣದಲ್ಲಿ ಆಕ್ಷೇಪಾರ್ಹ ಪೋಸ್ಟ್ ಮಾಡಿ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆಂದು ಆರೋಪಿಸಿ ದಿಲ್ಲಿ ಯುನಿವರ್ಸಿಟಿಯ ಪ್ರಾಧ್ಯಾಪಕರನ್ನು ಬಂಧಿಸಿರುವ ವಿಚಾರವಾಗಿ ಟ್ವೀಟ್ ಮೂಲಕ ಸರಕಾರದ ಧೋರಣೆಯನ್ನು ಟೀಕಿಸಿದರು.
ಕಳೆದ ನಾಲ್ಕು ವರ್ಷಗಳಿಂದ ಮೆಹುಲ್ ಚೋಕ್ಸಿಯನ್ನು ಚಿಕ್ಕ ಆಂಟಿಗುವಾದಿಂದ ಗಡೀಪಾರು ಮಾಡಿಸಲು ಸಾಧ್ಯವಾಗಿಲ್ಲ ಎಂಬುದು ನಂಬಲಾಗದ ಸಂಗತಿ. ಟ್ವೀಟ್ಗಳು/ಪೋಸ್ಟ್ಗಳಿಗಾಗಿ ಪ್ರೊಫೆಸರ್ಗಳು/ನಟರನ್ನು ಬಂಧಿಸುವಲ್ಲಿ ನಾವು ನಮ್ಮ ಶಕ್ತಿ ತೋರಿಸುತ್ತೇವೆ ಆದರೆ ರೂ. 13,500 ಕೋಟಿ ಹಗರಣಗಳಲ್ಲಿನ ಪರೀಕ್ಷೆಯಲ್ಲಿ ಪ್ರಮುಖ ಆರೋಪಿಗಳು ಸಮುದ್ರತೀರದಲ್ಲಿ ಎಂದೆಂದಿಗೂ ಸಂತೋಷದಿಂದ ಬದುಕಬಹುದು! ಒಪ್ಪುತ್ತೀರಾ?” ಎಂದು ಪ್ರಶ್ನಿಸಿದ್ದಾರೆ.
ಇನ್ನು ಇವರ ಈ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ವ್ಯಕ್ತಿಯೋರ್ವರು, “ಎಲ್ಲಾ ದೇಶಗಳಿಗೂ ಅದರದ್ದೇ ಆದ ಸಾರ್ವಭೌಮತೆ ಇದೆ.ನೀವು ಅಡ್ಡದಾರಿಯ ಮೂಲಕ ಆತನನ್ನು ಕರೆದುಕೊಂಡು ಬರಬೇಕು ಅಂತ ಹೇಳುತ್ತಿದ್ದೀರಾ?” ಎಂದು ವ್ಯಂಗಭರಿತವಾಗಿ ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸರ್ದೇಸಾಯಿ, “ವಿಭಾಗ 7 1993 ಆಂಟಿಗುವಾ ಹಸ್ತಾಂತರ ಕಾಯಿದೆಯ ಪ್ರಕಾರ ಗಡಿಪಾರು ಮಾಡಬಹುದಾಗಿದೆ, ಉದ್ದೇಶವಿದ್ದರೆ ದಾರಿಯೂ ಇರುತ್ತದೆ” ಎಂದು ಮರುಟ್ವೀಟ್ ಮಾಡಿದ್ದಾರೆ.