ಪ್ರೀತಿಸಿದ ಯುವಕನ ಮದುವೆಯಾಗಲು ತಾಳಿ ಕಟ್ಟುವ ಕೊನೇ ಕ್ಷಣದಲ್ಲಿ ವಧು ಹೈಡ್ರಾಮ!

ಮೈಸೂರು ಮೇ 22: ಪ್ರೀತಿಸಿದ ಯುವಕನನ್ನೇ ಮದುವೆಯಾಗಬೇಕು ಎಂಬ ಸಲುವಾಗಿ ಇಷ್ಟವಿಲ್ಲದ ಮದುವೆಯಿಂದ ತಪ್ಪಿಸಿಕೊಳ್ಳಲು ವಧುವೊಬ್ಬಳು ತಾಳಿ ಕಟ್ಟುವ ಕೊನೇ ಕ್ಷಣದಲ್ಲಿ ಹೈಡ್ರಾಮ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ವಿದ್ಯಾಭಾರತಿ ಕಲ್ಯಾಣ ಮಂಟಪದಲ್ಲಿ ಮೈಸೂರಿನ ಸುಣ್ಣದಕೇರಿಯ ಯುವತಿ, ಹೆಚ್‌.ಡಿ.ಕೋಟೆಯ ಯುವಕನ ಜೊತೆ ಮದುವೆ ನಿಗದಿಯಾಗಿತ್ತು.  ವಧು, ವರ ರ ಎರಡು ಕಡೆಯ ಅಪಾರ ಬಂಧುಗಳು ಮದುವೆಗೆ ಬಂದಿದ್ದರು. ಆದರೆ ಇವತ್ತು ಬೆಳಗ್ಗೆ ನಿಗದಿತ ಮುಹೂರ್ತದಲ್ಲಿ ತಾಳಿ ಕಟ್ಟುವ ಕೊನೇ ಕ್ಷಣದಲ್ಲಿ ಯುವತಿ ಕುಸಿದು ಬಿದ್ದಿದ್ದಾಳೆ. ಈ ವೇಳೆ ಯುವತಿ ವಿಚಾರಿಸಿದ್ದಾಗ ಪ್ರೀತಿಯ ವಿಚಾರ ಹೇಳಿದ್ದಾಳೆ. ನಾನು ಪ್ರೀತಿಸಿದ ಯುವಕನನ್ನೆ ಮದುವೆಯಾಗುತ್ತೇನೆಂದು ಯುವತಿ ಹೇಳಿದಾಗ ವರನ ಕಡೆಯವರಿಗೆ ಶಾಕ್ ಆಗಿದೆ.

ಕೆಲ ದಿನಗಳ ಹಿಂದೆಯೇ ಯುವತಿ ಪ್ರಿಯಕರ, ಆಕೆ ಮದುವೆಯಾಗುತ್ತಿದ್ದ ಯುವಕನಿಗೆ ಮೆಸೇಜ್ ಕಳಿಸಿ ಮದುವೆ ಆಗಬೇಡ. ಆಕೆ ಮತ್ತು ನಾನು ಪ್ರೀತಿಸುತ್ತಿದ್ದೇವೆ ಎಂದು ಹೇಳಿದ್ದ. ಆದರೆ ವರ ಇದನ್ನು ನಿರ್ಲಕ್ಷಿಸಿ ಮದುವೆಗೆ ಮುಂದಾಗಿದ್ದ. ಯಾವಾಗ ಮೆಸೇಜ್‌ಗೂ ವರ ಬಗ್ಗದಿದ್ದಾಗ ಯುವತಿಯೇ ಕೊನೆ ಕ್ಷಣದಲ್ಲಿ ಈ ಹೈಡ್ರಾಮಾ ಮಾಡಿ ಮಧು ಮದುವೆ ನಿಲ್ಲ್ಲುವಂತೆ ಮಾಡಿದ್ದಾಳೆ. ವಿಚಾರ ತಿಳಿಯುತ್ತಲೆ ವರನ ಕಡೆಯವರು ಗಲಾಟೆ ಆರಂಭಿಸಿದ್ದಾರೆ. ವಧುವಿನ ಪೋಷಕರಿಗೆ ಛೀಮಾರಿ ಹಾಕಿದ್ದಾರೆ. ಮದುವೆಗಾಗಿ 5 ಲಕ್ಷ ಹಣ ಖರ್ಚು ಮಾಡಿದ್ದು, ವಧುವಿಗೆ ಚಿನ್ನ, ರೇಷ್ಮೆ ಸೀರೆಗಾಗಿ ವೆಚ್ಚ ಮಾಡಲಾಗಿದೆ. ಎಲ್ಲಾ ಖರ್ಚು ಕಟ್ಟಿಕೊಡಿ ಎಂದು ವರನ ಕುಟುಂಬ ಗಲಾಟೆ ಮಾಡಿತು. ಇದರಿಂದ ಕಲ್ಯಾಣ ಮಂಟಪದಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಗಿತ್ತು.

ವಿಷಯ ತಿಳಿದು ಸ್ಥಳಕ್ಕೆ ಬಂದ ಮೈಸೂರಿನ ಕೆ.ಆರ್. ಠಾಣೆ ಪೊಲೀಸರು ವರ-ವಧು ಎರಡೂ ಕಡೆಯವರನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಪ್ರೀತಿಸಿದ ಯುವಕನನ್ನೇ ಮದುವೆಯಾಗಲು ಯುವತಿ ಮಾಡಿದ ಈ ಡ್ರಾಮಾದಿಂದ ಯುವತಿಯ ಪೋಷಕರಂತೂ ತಲೆತಗ್ಗಿಸಿದ್ದಾರೆ. ನಂತರ ವಧು-ವರರ ಪೋಷಕರು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಂಡಿದ್ದಾರೆ. ಹಾಗೂ ವಧುಗೆ ನೀಡಿದ ಆಭರಣವನ್ನು ವರನ ಪೋಷಕರು ವಾಪಸ್ ಪಡೆದರು. ವಧುವಿನ ಪೋಷಕರು ಠಾಣೆಯಲ್ಲೇ ನಷ್ಟ ಭರಿಸಿಕೊಟ್ಟರು. ಈ ಮೂಲಕ ಯಾವುದೇ ಕೇಸ್ ದಾಖಲಾಗಿದೆ ಪ್ರಕರಣ ಇತ್ಯರ್ಥಗೊಂಡಿತು.

Leave a Reply

Your email address will not be published. Required fields are marked *

error: Content is protected !!