ಉಡುಪಿ: ಮಾಜಿ ನಗರಸಭಾ ಸದಸ್ಯ ಸುರೇಶ್ ಸೇರಿಗಾರ್ ಬೈಲಕೆರೆ ನಿಧನ
ಉಡುಪಿ: ಶ್ರೀಕೃಷ್ಣಮಠದ ಹಿಂಬದಿ ಬೈಲಕರೆಯ ನಿವಾಸಿ, ಕಾಂಗ್ರೆಸ್ ಪಕ್ಷದ ನಾಯಕರಾದ ಉಡುಪಿ ನಗರಸಭೆಯ ಮಾಜಿ ಕಾಂಗ್ರೆಸ್ ಬೆಂಬಲಿತ ನಗರಸಭಾ ಸದಸ್ಯ ಸುರೇಶ್ ಸೇರಿಗಾರ ಬೈಲಕೆರೆ (52)ರವಿವಾರ ನಿಧನರಾಗಿದ್ದಾರೆ.
ಮೃತರಿಗೆ ಪತ್ನಿ, ಒಂದು ಗಂಡು, ಒಂದು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ, ಮೃತರಿಗೆ ಮಾಜಿ ಶಾಸಕ ಯು.ಆರ್ ಸಭಾಪತಿ, ಜಯ ಶೆಟ್ಟಿ ಬನ್ನಂಜೆ, ಗಣೇಶ್ ರಾಜ್ ಸರಳೇಬೆಟ್ಟು ಸಂತಾಪ ಸೂಚಿಸಿದ್ದಾರೆ. ನಾಳೆ ಬೆಳಿಗ್ಗೆ ಅಂತ್ಯಸಂಸ್ಕಾರ ನಡೆಯಲಿದೆ.