ಯಶ್ ಪಾಲ್ ಸುವರ್ಣ ನೇತ್ರತ್ವದಲ್ಲಿ ಮೀನುಗಾರಿಕಾ ಫೆಡರೇಶನ್ ಕ್ರಾಂತಿಕಾರಿ ಹೆಜ್ಜೆ- ಶಾಸಕ ಹಾಲಾಡಿ

ಕೋಟ: ಮೀನುಗಾರಿಕಾ ಫೆಡರೇಶನ್ ಅಭಿವೃದ್ಧಿಗೆ ಮುನ್ನುಡಿ ಬರೆಯುವುದರ ಜೊತೆಗೆ ಕ್ರಾಂತಿಕಾರಿ ಹೆಜ್ಜೆಗಳನ್ನಿರಿಸಿದೆ ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದ್ದಾರೆ.

ಶನಿವಾರ ಹಂಗಾರಕಟ್ಟೆ ಮೀನುಗಾರಿಕಾ ಬಂದರು ಬಳಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಇದರ ಹಂಗಾರಕಟ್ಟೆ ಬ್ಯಾಂಕಿಂಗ್ ವಿಭಾಗವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ ಮೀನುಗಾರಿಕೆ ಈ ದೇಶದ ಸಂಪತ್ತು ಅದನ್ನು ಸಮರ್ಪಕವಾಗಿ ಬಳಸಿಕೊಂಡು ಮೀನುಗಾರರ ಸಂಕಷ್ಟ ಅರಿತು ಕಾರ್ಯನಿರ್ವಹಿಸುವ ಫೆಡರೇಶನ್ ಅಭಿವೃದ್ಧಿ ಪಥದತ್ತ ಮುನ್ನುಗ್ಗುತ್ತಿರುವುದು ಪ್ರಶಂಸನೀಯ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮತ್ಸ್ಯೋದ್ಯಮಿ ಆನಂದ್ ಸಿ ಕುಂದರ್ ಮಾತನಾಡಿ ಯಾಂತ್ರಿಕ ಮೀನುಗಾರಿಕೆ ಕ್ಷೇತ್ರದಲ್ಲಿ ಯಶ್ ಪಾಲ್ ಸಾರಥ್ಯದಲ್ಲಿ ಹೊಸ ಭಾಷ್ಯ ಬರೆದಿದ್ದಾರೆ.ಆಗಿನ ಸಂದರ್ಭದಕ್ಕೂ ಪ್ರಸ್ತುತ ದಿನಗಳಿಗೆ ಹೊಲಿಸಿದರೆ ಹೊಸ ದಿಕ್ಕು ಸೃಷ್ಠಿಸಿದೆ ಮೀನುಗಾರರ ಭವಣೆ ಆಲಿಸುವುದ ಜೊತಗೆ ಬ್ಯಾಂಕಿಂಗ್ ಕ್ಷೇತ್ರದಲ್ಲೂ ಮುನ್ನುಡಿ ಬರೆದಿದೆ ಎಂದು ಆಶಯ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಇತ್ತೀಚಿಗೆ ಎಸ್ಸೆಎಲ್ಸಿಯಲ್ಲಿ ರಾಜ್ಯದ ಗಮನ ಸೆಳೆದು ರ್ಯಾಂಕ್ ಪಡೆದ ಮಲ್ಪೆ ಮೀನುಗಾರಿಕಾ ಬಂದರು ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೊಪ್ಪಳ ನಿವಾಸಿಯೊರ್ವರ ಪುತ್ರ ಪುನಿತ್ ನಾಯಕ್ ಇವರಿಗೆ 25ಸಾವಿರ ರೂ ಚೆಕ್ ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್  ಮಂಗಳೂರು ಇದರ ಅಧ್ಯಕ್ಷ ಯಶ್ ಪಾಲ್ ಸುವರ್ಣ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ರಾಜ್ಯದ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಉಪಾಧ್ಯಕ್ಷ ಕಿರಣ್ ಕೊಡ್ಗಿ, ದ.ಕ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್, ಐರೋಡಿ ಗ್ರಾ.ಪಂ ಅಧ್ಯಕ್ಷೆ ಗೀತಾ ಶೆಟ್ಟಿ,ಯಾಂತ್ರಿಕೃತ ಮೀನುಗಾರ ಸಂಘ ಹಂಗಾರಕಟ್ಟೆ -ಕೋಡಿ ಬೇಂಗ್ರೆ ಅಧ್ಯಕ್ಷ ಬಿ.ಬಿ. ಕಾಂಚನ್, ಹಂಗಾರಕಟ್ಟೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ  ಅಧ್ಯಕ್ಷ ಬಿ.ಕೇಶವ ಕುಂದರ್, ಕೋಡಿಬೇಂಗ್ರೆ  ದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ಜಯ ಎಸ್ ಕುಂದರ್, ಕೋಡಿ ಬೇಂಗ್ರೆ ವಿಠ್ಠಲ ರುಖುಮಾಯಿ ದೇವಸ್ಥಾನದ ಅಧ್ಯಕ್ಷ ಚಂದ್ರ ಕುಂದರ್, ಕೋಡಿ ಬೇಂಗ್ರೆ  ಶ್ರೀ ದುರ್ಗಾದೇವಿ ಮಹಾಕಾಳಿ ದೇವಸ್ಥಾನದ ಅಧ್ಯಕ್ಷ ಚಂದ್ರಶೇಖರ್ ನಾಯ್ಕ್,ಐರೋಡಿ ಬಾಳೆಕುದ್ರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ಕೃಷ್ಣಪ್ಪ ಬೆನ್ನು ಮತ್ತಿತರರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಶಿಕ್ಷಕ ಸತೀಶ್ಚಂದ್ರ ಶೆಟ್ಟಿ ಚಿತ್ರಪಾಡಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!