ಮಣಿಪಾಲ: ಬಾಕಿ ಹಣ ಕೇಳಿದ್ದಕ್ಕೆ ಪೆಟ್ ಸ್ಟೋರ್ ಮಾಲೀಕನಿಗೆ ಹಲ್ಲೆಗೈದು ಕೊಲೆ ಬೆದರಿಕೆ
ಮಣಿಪಾಲ ಮೇ 22: ಅಂಗಡಿಯಲ್ಲಿ ಖರೀದಿಸಿದ ವಸ್ತುಗಳ ಬಾಕಿ ಹಣ ಕೇಳಿದಕ್ಕಾಗಿ ಮಣಿಪಾಲದ ಆ್ಯಂಡ್ರೋ ಎ ಬಾರ್ನಸ್ ಎಂಬವರಿಗೆ ಹೊಡೆದು ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿದೆ.
ಆ್ಯಂಡ್ರೋ ಎ ಬಾರ್ನಸ್ ಅವರು ಮಣಿಪಾಲದ ವಿದ್ಯಾರತ್ನ ನಗರ ಎಂಬಲ್ಲಿರುವ ಪೆಟ್ ಸ್ಟೋರ್ ನ ಮಾಲೀಕರಾಗಿದ್ದು, ಇವರ ಅಂಗಡಿಯಲ್ಲಿ ರಾಘವೇಂದ್ರ ಎಂಬಾತನು ನಾಯಿಯ ಆಹಾರವನ್ನು ಪಡೆದು ಅದರ ಮೊತ್ತವನ್ನು ಬಾಕಿಯಿರಿಸಿದ್ದನು. ಈ ಬಾಕಿ ಹಣ ಕೇಳಿದ್ದಾಗಿ ಮೇ 21 ರಂದು ಏಕಾಏಕಿ ಅಂಗಡಿಯೊಳಗೆ ಬಂದು ಹೊಡೆದು ಹಲ್ಲೆ ನಡೆಸಿ ಬಾಕಿ ಹಣ ಕೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾನೆ ಎಂಬುದಾಗಿ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.